Latest Updates
-
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು
ಸೂಪರ್ ಕೂದಲಿಗಾಗಿ 12 ಸೂಪರ್ ಫುಡ್
ಕೂದಲಿನ ಆರೋಗ್ಯಕ್ಕಾಗಿ ಏನು ಮಾಡಬೇಕೆನ್ನುವುದು ಹೆಚ್ಚಿನವರ ಸಮಸ್ಯೆಯಾಗಿದೆ. ಕೂದಲಿನ ಆರೈಕೆಗೆ ಏನು ಮಾಡಬೇಕೆನ್ನುವುದಕ್ಕೆ ನಿಖರ ಮಾಹಿತಿ ಗೊತ್ತಿಲ್ಲದೆ ಟಿವಿಯಲ್ಲಿ ಕಾಣುವ ಜಾಹೀರಾತುಗಳಿಗೆ ಮರುಳಾಗಿ ಬೆಲೆ ಬಾಳುವ ಶ್ಯಾಂಪೂ, ಕಂಡೀಷನರ್ ಗಳ ಮೊರೆ ಹೋಗುತ್ತಾರೆ. ರಾಸಾಯನಿಕವಿರುವ ವಸ್ತುಗಳನ್ನು ಬಳಸಿದರೆ ಕೂದಲು ತಾತ್ಕಲಿಕವಾಗಿ ಚೆನ್ನಾಗಿ ಕಾಣುತ್ತದೆ. ಆದರೆ ಅವುಗಳಿಂದ ಕೂದಲಿನ ಸಮಸ್ಯೆಗೆ ಶಾಶ್ವತವಾದ ಪರಿಹಾರ ಕಂಡು ಕೊಳ್ಳಲು ಸಾಧ್ಯವಿಲ್ಲ.
ಕೂದಲಿನ ಆರೈಕೆಗೆ ಕೂದಲಿಗೆ ಮೆಹಂದಿ ಹಚ್ಚುವುದು, ಮೊಸರು ಹಚ್ಚುವುದು, ಮೊಟ್ಟೆಯ ಬಿಳಿ ಹಚ್ಚುವುದು, ಎಣ್ಣೆ ಮಸಾಜ್ ಈ ವಿಧಾನಗಳ ಜೊತೆಗೆ ಕೂದಲಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಿದರೆ ಕೂದಲು ಉದುರುತ್ತಿದೆ, ಕೂದಲು ಬೆಳೆಯುತ್ತಿಲ್ಲ ಈ ರೀತಿಯ ಸಮಸ್ಯೆಗಳು ಕಂಡು ಬರುವುದಿಲ್ಲ.
ಈ ಕೆಳಗ್ಗೆ ಸೂಪರ್ ಕೂದಲಿಗಾಗಿ ಕೆಲವೊಂದು ಸೂಪರ್ ಫುಡ್ ಗಳ ಬಗ್ಗೆ ಹೇಳಲಾಗಿದೆ ನೋಡಿ:

ವಾಲ್ ನೆಟ್:
ವಾಲ್ ನೆಟ್ ನಲ್ಲಿ ವಿಟಮಿನ್ ಇ ಅಧಿಕವಿರುತ್ತದೆ. ಇದು ತಲೆ ಬುಡದಲ್ಲಿ ರಕ್ತ ಸಂಚಾರಕ್ಕೆ ಸಹಾಯ ಮಾಡುತ್ತದೆ ಹಾಗೂ ಇದರಲ್ಲಿ ಸತುವಿಂಶ ಅಧಿಕವಾಗಿ ಇದೆ. ಇದರಿಂದಾಗಿ ಕೂದಲಿನ ಆರೋಗ್ಯಕ್ಕೆ ಸಹಕಾರಿಯಾಗಿದೆ.

ಬಾದಾಮಿ:
ಬಾದಾಮಿಲ್ಲೂ ವಿಟಮಿನ್ ಇ ಇರುವುದರಿಂದ ಇದನ್ನು ಪ್ರತಿದಿನ ತಿನ್ನುವುದು ಕೂದಲಿಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಸೂರ್ಯಕಾಂತಿ ಬೀಜ:
ಸೂರ್ಯಕಾಂತಿ ಹೂವಿನ ಬೀಜದಲ್ಲಿ ಅಧಿಕ ಪ್ರೊಟೀನ್, ಪೊಟಾಷ್ಯಿಯಂ, ವಿಟಮಿನ್ ಇ, ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ ಇರುತ್ತದೆ. ಈ ಬೀಜ ತಿನ್ನಲೂ ರುಚಿಕರವಾಗಿರುತ್ತದೆ. ಈ ಬೀಜವನ್ನು ಕೊಳ್ಳುವಾಗ ಅದರಲ್ಲಿ ಸೋಡಿಯಂ ಅಥವಾ ಇತರ ರುಚಿಯ ರುಚಿಯನ್ನು ಸೇರಿಸಿದ್ದರೆ ಅಂತಹ ಬೀಜಗಳನ್ನು ಕೊಳ್ಳಬೇಡಿ.

ಅಂಜೂರ:
ಅಂಜೂರದಲ್ಲಿ ಎ,ಬಿ ಮತ್ತು ಸಿ, ಫಾಲಿಕ್ ಆಸಿಡ್, ಸತು, ಸೋಡಿಯಂ ಮತ್ತು ಪೊಟಾಷ್ಯಿಯಂ ಇರುತ್ತದೆ. ಅಂಜೂರದಲ್ಲಿ ಬಾಳೆ ಹಣ್ಣಿನಲ್ಲಿ ಇರುವುದಕ್ಕಿಂತ 80% ಅಧಿಕ ಪೊಟಾಷ್ಯಿಯಂ ಅಂಶವಿರುತ್ತದೆ.

ಆಪ್ರಿಕಾಟ್ ಮತ್ತು ಪೀಚ್:
ಇದರಲ್ಲಿ ಹಿಮೋಗ್ಲೋಬಿನ್ ಗೆ ಅವಶ್ಯಕವಾದ ಕಬ್ಬಿಣದಂಶ ಅಧಿಕವಿರುತ್ತದೆ. ಕಬ್ಬಿಣದಂದ ಕೊರತೆ ಉಂಟಾದರೆ ಮುಖ ಬಿಳುಚಿಕೊಳ್ಳುವುದು, ಕೂದಲು ತೆಳ್ಳಗಾಗುವುದು.

ಬಾಳೆಹಣ್ಣು:
ಇದರಲ್ಲಿ ಅಮೈನೊ ಆಸಿಡ್ ಅಧಿಕವಿರುತ್ತದೆ. ಅಮೈನೊ ಆಸಿಡ್ ದೇಹಕ್ಕೆ ಅವಶ್ಯಕವಾಗಿ ಬೇಕು. ಆದರೆ ಅದು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ. ಆದ್ದರಿಂದ ಅಮೈನೊ ಆಸಿಡ್ ಇರುವ ಆಹಾರ ಸೇವಿಸುವುದು ಅವಶ್ಯಕ.

ರಾಸ್ ಬರಿ ಹಾಗೂ ಸ್ಟ್ರಾಬರಿ:
ಇವುಗಳಲ್ಲಿ ವಿಟಮಿನ್ ಎ ಮತ್ತು ಇ ಇದ್ದು ತಲೆ ಬುಡದಲ್ಲಿ ರಕ್ತ ಸಂಚಾರ ಸರಿಯಾಗಿ ಇರುವಂತೆ ನೋಡಿಕೊಳ್ಳುವಲ್ಲಿ ಸಹಕಾರಿಯಾಗಿದೆ.

ಸಿಟ್ರಸ್ ಆಹಾರ:
ಕಿತ್ತಳೆ, ನಿಂಬೆ ರಸ, ನೆಲ್ಲಿಕಾಯಿ ಹೀಗೆ ವಿಟಮಿನ್ ಸಿ ಇರುವ ಹಣ್ಣುಗಳನ್ನು ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು.

ಒಣದ್ರಾಕ್ಷಿ:
ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆ ಹಾಕಿ ತಿನ್ನುವುದು ಕೂದಲಿಗೂ ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ತಿಂದರೆ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.

ಹಾಲು, ಸೋಯಾ:
ಹಾಲು, ಸೋಯಾ ಇ, ಹಾಲಿನ ಉತ್ಪನ್ನಗಳಲ್ಲಿ ವಿಟಮಿನ್ ಎ ಹಾಗೂ ಬಿ12 ಅಧಿಕವಿದ್ದು ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ.

ದವಸದಾನ್ಯಗಳು:
ದವಸ ಧಾನ್ಯಗಳಲ್ಲಿ ವಿಟಮಿನ್ ಬಿ5 ಇರುವುದರಿಂದ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಕಾಳುಗಳನ್ನು ಮೊಳಕೆ ಬರಿಸಿ ಸೇವಿಸಿದರೆ ಹೆಚ್ಚಿನ ಪೋಷಕಾಂಶಗಳನ್ನು ಪಡೆಯಬಹುದು.

ಸೊಪ್ಪು:
ಸೊಪ್ಪಿನಲ್ಲಿ ಕಬ್ಬಿಣದಂಶ ಅಧಿಕವಿರುತ್ತದೆ. ಅಧಿಕ ಪೋಷಕಾಂಶವಿರುವುದರಿಂದ ದೇಹದ ಹಾಗೂ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.



Click it and Unblock the Notifications