Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಚಳಿಗಾಲದಲ್ಲಿ ಕಂಡು ಬರುವ ಕೂದಲಿನ ಸಮಸ್ಯೆಗಳು
ಉಳಿದೆರಡು ಕಾಲಕ್ಕಿಂತ ಚಳಿಗಾಲದಲ್ಲಿ ಸೌಂದರ್ಯ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಈ ಸಮಯದಲ್ಲಿ ತ್ವಚೆ ಹಾಗೂ ಕೂದಲು ತುಂಬಾ ಒಣಗುತ್ತದೆ. ಕೂದಲು ಕವಲೊಡೆದು ಉದುರಲಾರಂಭಿಸುತ್ತದೆ. ಈ ಸಮಯದಲ್ಲಿ ಎಣ್ಣೆಯನ್ನು ಹಾಗೇ ತಲೆಗೆ ಹಚ್ಚುವುದಕ್ಕಿಂತ ಬಿಸಿ ಮಾಡಿ ಹಚ್ಚಿದರೆ ಒಳ್ಳೆಯದು.
ಕೂದಲು ಉದುರಿದರೆ ಅಥವಾ ಕೂದಲಿನ ಬುಡ ಕವಲೊಡೆದಿದ್ದರೆ ಮಾತ್ರ ಕೂದಲು ಹಾಳಾಗಿದೆ ಎಂದು ನಮ್ಮ ಅರಿವೆಗೆ ಬರುತ್ತದೆ. ಆದರೆ ಸಾಕಷ್ಟು ಬಾರಿ ಈ ಎರಡೂ ಲಕ್ಷಣಗಳು ಕಾಣಿಸಿಕೊಳ್ಳದೆ ಇತರ ಲಕ್ಷಣಗಳು ಕಂಡು ಬರುತ್ತವೆ. ಕೂದಲಿನ ಆರೋಗ್ಯ ಕಡಿಮೆಯಾದರೆ ಕಂಡು ಬರುವ ಇತರ ಲಕ್ಷಣಗಳನ್ನು ಗಮನಿಸಲು ಹೋಗುವುದೇ ಇಲ್ಲ. ಇದರಿಂದಾಗಿ ಕೂದಲಿನ ಆರೋಗ್ಯ ಮತ್ತಷ್ಟು ಹಾಳಾಗುತ್ತದೆ. ಆದ್ದರಿಂದ ಚಳಿಯ ಪ್ರಭಾವದಿಂದ ಕೂದಲು ಹಾಳಾಗಿದ್ದರೆ ಕೂದಲಿನಲ್ಲಿ ಕಂಡು ಬರುವ ಲಕ್ಷಣಗಳ ಬಗ್ಗೆ ಈ ಕೆಳಗ್ಗೆ ಹೇಳಲಾಗಿದೆ ನೋಡಿ.

ಕೂದಲಿನ ಹೊಳಪು ಕಡಿಮೆಯಾಗುವುದು: ಕೂದಲಿನ ಆರೋಗ್ಯ ಕಡಿಮೆಯಾದರೆ ಅದು ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಕೂದಲು ಉದುರದಿದ್ದರೂ ಹೊಳಪನ್ನು ಕಳೆದುಕೊಂಡರೆ ಕೂದಲಿಗೆ ಹಾನಿಯಾಗಿದೆ ಎಂದರ್ಥ.
ಕೂದಲಿನ ಬುಡ ಕವಲೊಡೆಯುವುದು: ನಂತರ ಕೂದಲಿನ ಬುಡ ಕವಲೊಡೆಯಲಾರಂಭಿಸುತ್ತದೆ. ಹಾಗೂ ಕೂದಲು ತುಂಬಾ ಒರಟಾಗುವುದು ಇದರಿಂದಾಗಿ ಕೂದಲಿನ ಶೇಪ್ ಹಾಳಾಗುತ್ತದೆ.
ಕೂದಲು ಉದ್ದ ಬೆಳೆಯುವುದಿಲ್ಲ: ಕೂದಲು ತನ್ನ ಆರೋಗ್ಯವನ್ನು ಕಳೆದುಕಂಡರೆ ಉದ್ದ ಬೆಳೆಯುವುದಿಲ್ಲ, ನಿಧಾನಕ್ಕೆ ಉದ್ದ ಬಂದರು ನೋಡಲು ಆರೋಗ್ಯಕರವಾಗಿರುವುದಿಲ್ಲ.
ಕೂದಲಿನ ಬಣ್ಣ ಬದಲಾಗುವುದು: ಕೂದಲಿನ ಆರೋಗ್ಯ ಕಡಿಮೆಯಾದಾಗ ಕೆಂಚು ಬಣ್ಣಕ್ಕೆ ತಿರುಗುತ್ತದೆ. ಇದು ನೈಸರ್ಗಿಕವಾದ ಕೆಂಚು ಬಣ್ಣವಾಗಿರುವುದಿಲ್ಲ. ನೈಸರ್ಗಿಕವಾದ ಕೆಂಚು ಬಣ್ಣದ ಕೂದಲು ತುಂಬಾ ಹೊಳಪಿನಿಂದ ಕೂಡಿರುತ್ತದೆ.
ಬಾಚಿದಾಗ ತುಂಬಾ ಕೂದಲು ಉದುರುವುದು: ಕೂದಲಿಗೆ ಹಾನಿ ಉಂಟಾದರೆ ಬಾಚಣಿಕೆ ತಲೆಗೆ ಹಾಕಿದರೆ ಸಾಕು ಬಾಚಣಿಕೆ ತುಂಬಾ ಕೂದಲು ಬಂದು ಬಿಡುತ್ತದೆ.
ಒಣ ಕೂದಲು: ಕೂದಲು ತುಂಬಾ ಒಣಗಿದ್ದರೆ ಕೂದಲು ಉದುರುವುದು, ತುಂಡಾಗುವುದು ಕಂಡು ರುತ್ತದೆ.
ಕೂದಲಿನ ಬುಡ ತೆಳ್ಳಗಾಗುವುದು: ಕೂದಲಿಗೆ ಹಾನಿಯಾಗಿದ್ದರೆ ಕೂಲಿನ ಬುಡ ತೆಳ್ಳಗಾಗಲಾರಭಿಸುತ್ತದೆ. ಕೆಲವರಿಗೆ ಬಿಳಿ ಕೂದಲು ಕಂಡು ಬರುತ್ತದೆ.
ಆದ್ದರಿಂದ ಚಳಿಗಾಲದಲ್ಲಿ ಕೂದಲಿನ ಆರೈಕೆ ಬಗ್ಗೆ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು.



Click it and Unblock the Notifications
