Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಯಾವತ್ತಿಗೂ ಬಳಸಬೇಡಿ 'ಬ್ಲ್ಯಾಕ್ ಹೆನ್ನಾ'

ಆದರೆ ಈಗೆಲ್ಲಾ ರೆಡಿಮೇಡ್ ಮೆಹಂದಿ ಬಂದಿದೆ. ಆದ್ದರಿಂದ ಮೆಹಂದಿಯನ್ನು ಅರೆದು ಹಾಕುವಷ್ಟು ಶ್ರಮ ಪಡಲು ಇಂದು ನಾವು ಸಿದ್ಧರಿಲ್ಲ. ಮಾರುಕಟ್ಟೆಯಲ್ಲಿ ಅನೇಕ ಬಗೆಯ ಮೆಹಂದಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಇಂತಹ ಮೆಹಂದಿಗಳಲ್ಲಿ ಕೈಗೆ ಹಚ್ಚುವ ಮೆಹಂದಿಯನ್ನು ತಲೆಗೆ ಹಚ್ಚಬಾರದು. ಏಕೆಂದರೆ ಕೈಗೆ ಹಚ್ಚುವ ಮೆಹಂದಿ ಬೇಗನೆ ಕೆಂಪಾಗಲು ರಾಸಾಯನಿಕಗಳನ್ನು ಸೇರಿಸುತ್ತಾರೆ.
ಅದಲ್ಲದೆ ಬಿಳುಪು ಕೂದಲನ್ನು ಮರೆಮಚಲು ಮತ್ತು ನಯವಾದ ಕೂದಲನ್ನು ಪಡೆಯಲು ಮೆಹಂದಿ ಬಳಸುತ್ತಿರುತ್ತೇವೆ. ಆದರೆ ಹೀಗೆ ಬಳಸುವ ಮೆಹಂದಿ ಎಷ್ಟರ ಮಟ್ಟಿಗೆ ಪ್ಯೂರ್ (ಶುದ್ಧ ಮೆಹಂದಿ) ಎಂದು ಪರೀಕ್ಷೆ ಮಾಡಲು ಹೋಗುವುದಿಲ್ಲ. ಕಡಿಮೆ ಗುಣಮಟ್ಟದ ಮೆಹಂದಿಯನ್ನು ತಂದು ಹಾಕಿದರೆ ಕೂದಲು ಹಾಳಾಗುವುದು. ಆದ್ದರಿಂದ ಮೆಹಂದಿ ಕೊಳ್ಳುವಾಗ ಗುಣಮಟ್ಟದ ಮೆಹಂದಿ ನೋಡಿ ಕೊಂಡುಕೊಳ್ಳಬೇಕು.
ಅದರಲ್ಲೂ ನೆರೆಕೂದಲು ಮರೆಮಾಚ ಬಯಸುವವರು ಬ್ಲ್ಯಾಕ್ ಮೆಹಂದಿ ಆಯ್ಕೆ ಮಾಡುತ್ತಾರೆ. ಇದನ್ನು ಕೊಂಡು ತಂದು ಹಚ್ಚಿದ್ದೇ ಆದರೆ ನಿಮ್ಮ ಕೂದಲಿನಆರೋಗ್ಯ ನೀವೆ ಕೈಯಾರೆ ಹಾಳು ಮಾಡಿದಂತೆ! ಏಕೆಂದರೆ ಇದರಲ್ಲಿ PPDs ಎಂಬ ರಾಸಾಯನಿಕವನ್ನು ಬಳಸಲಾಗಿದೆ (ಈ ರಾಸಾಯನಿಕವನ್ನು ಹೊರ ದೇಶದಲ್ಲಿ ಯಾವುದೇ ವಸ್ತುವಿನಲ್ಲಿ ಬಳಸಬಾರದೆಂದು ನಿಷೇಧಿಸಲಾಗಿದೆ). ಆದ್ದರಿಂದಲೇ ಈ ಮೆಹಂದಿ ಹಚ್ಚಿದಾಗ ಹೆಚ್ಚಿನವರಿಗೆ ಅಲರ್ಜಿ, ತುರಿಕೆ ಕಂಡು ಬರುತ್ತದೆ . ಆದ್ದರಿಂದ ಬ್ಲ್ಯಾಕ್ ಮೆಹಂದಿ ಬಳಸುತ್ತಿದ್ದರೆ ಇನ್ನು ಮುಂದೆ ಬಳಸಬೇಡಿ. ನೈಸರ್ಗಿಕ ಮೆಹಂದಿಯನ್ನು ಬಳಸುವುದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.



Click it and Unblock the Notifications
