Latest Updates
-
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ
ಶ್ಯಾಂಪೂ ಕೊಳ್ಳುವಾಗ pH ಪ್ರಮಾಣ ತಿಳಿದಿರಲಿ!

1. ವಾರಕ್ಕೊಮ್ಮೆ ಕೂದಲಿಗೆ ಟೀ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಬೇಕು. ಇದರಿಂದ ಕೂದಲಿನ ಆರೋಗ್ಯ ಹೆಚ್ಚುವುದು ಮಾತ್ರವಲ್ಲದೆ ಕೂದಲು ಕಪ್ಪಾಗಿ ಮತ್ತು ಸೊಂಪಾಗಿ ಬೆಳೆಯುತ್ತದೆ.
2. ತೆಂಗಿನೆಣ್ಣೆ ಬಿಸಿ ಮಾಡಿ ಅದು ಹದ ಬಿಸಿಯಿರುವಾಗ ತಲೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡವೇಕು. ನಂತರ ಒಂದು ಟವಲ್ ಅನ್ನು ನೆನೆಸಿ ಅದನ್ನು ತಲೆಗೆ ಸುತ್ತಿ ಅರ್ಧ ಗಂಟೆ ಬಿಟ್ಟು ತೊಳೆದರೆ ಕೂದಲಿಗೆ ತುಂಬಾ ಒಳ್ಳೆಯದು.
3. ದಾಸವಾಳದ ಹೂ ಮತ್ತು ಎಲೆನ್ನು ಅರೆದು ಅದನ್ನು ತಲೆಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತಲೆ ತೊಳೆಯಬೇಕು. ಹೀಗೆ ಕನಿಷ್ಠ ಪಕ್ಷ ವಾರಕ್ಕೆ ಎರಡು ಬಾರಿ ಮಾಡಿದರೂ ಕೂದಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಕಂಡು ಬರುವುದಿಲ್ಲ.
4. ನೆಲ್ಲಿಕಾಯಿ ಪುಡಿಯನ್ನು ಬಾದಾಮಿ ಎಣ್ಣೆ ಜೊತೆ ಮಿಶ್ರ ಮಾಡಿ ತಲೆಗೆ ಹಚ್ಚಿದರೆ ತಲೆಹೊಟ್ಟು ನಿವಾರಣೆಯಾಗಿ ಕೂದಲು ಕಪ್ಪಾಗಿ, ಸೊಂಪಾಗಿ ಬೆಳೆಯುವುದು.
5. ಹರಳೆಣ್ಣೆ ಹಚ್ಚಿದರೆ ತಲೆ ಸ್ವಲ್ಪ ಜಿಡ್ಡಾಗಿರುತ್ತದೆ, ಆದರೆ ಇದನ್ನು ಹಚ್ಚಿದರೆ ಕೂದಲು ಉದುರವ ಸಮಸ್ಯೆಯನ್ನು ತಪ್ಪಿಸಬಹುದು. ಮೊಸರು, ಬೀರ್, ಮೊಟ್ಟೆಯ ಬಿಳಿ ಇವೆಲ್ಲಾ ಕೂದಲಿಗೆ ಉತ್ತಮ ಕಂಡೀಷನರ್ ಆಗಿದೆ.
ಸಲಹೆ:
* ಈ ಮೇಲಿನ ಸಲಹೆಗಳನ್ನು ಪಾಲಿಸುವುದರ ಜೊತೆಗೆ ಸಾಕಷ್ಟು ನೀರು ಕುಡಿಯಬೇಕು.
* ದಿನದಲ್ಲಿ 100-200ರಷ್ಟು ಕೂದಲು ಉದುರುತ್ತಿದ್ದರೆ ವೈದ್ಯರನ್ನು ಕಂಡು ಪರೀಕ್ಷಿಸಬೇಕು, ಏಕೆಂದರೆ ಏನಾದರೂ ಸಮಸ್ಯೆ ಇದ್ದರೆ ಈ ರೀತಿ ಉಂಟಾಗುವುದು.
* ತಲೆಹೊಟ್ಟಿನ ಸಮಸ್ಯೆಯಿದ್ದರೆ ಜೊಜೊಬಾ ಎಣ್ಣೆ ಜೊತೆ ಸ್ವಲ್ಪ ನಿಂಬೆ ರಸ ಮಿಶ್ರ ಮಾಡಿ ಹಚ್ಚುವುದು ಒಳ್ಳೆಯದು.
* ತುಂಬಾ ಕೆಮಿಕಲ್ ಇರುವ ಶ್ಯಾಂಪೂ ಬಳಸಲು ಹೋಗಬೇಡಿ, ಶ್ಯಾಂಪೂ ಕೊಳ್ಳುವಾಗ ಅದರ pH ಪ್ರಮಾಣ ಸಮತೋಲನದಲ್ಲಿ ಇದೆಯೇ ಎಂದು ಪರೀಕ್ಷಿಸಿ ತೆಗೆದುಕೊಳ್ಳಬೇಕು. pH ಪ್ರಮಾಣ 4.0-4.5ರ ಒಳಗೆ ಇರುವ ಶ್ಯಾಂಪೂ ಕೊಳ್ಳುವುದು ಒಳ್ಳೆಯದು.



Click it and Unblock the Notifications
