Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ತಲೆ ಸ್ನಾನವನ್ನು ಶವರ್ ನಲ್ಲಿಯೇ ಮಾಡುತ್ತೀರಾ?
ಹೆಚ್ಚಿನವರು ಶವರ್ ಸ್ನಾನ ಮಾಡಲು ಇಷ್ಟಪಡುತ್ತಾರೆ. ಅದರಲ್ಲೂ ಬಿಸಿ ನೀರಿನ ಶವರ್ ಸ್ನಾನ ಮಾಡಿದರೆ ಮೂಡ್ ಫ್ರೆಶ್ ಆಗುತ್ತದೆ, ದೇಹಕ್ಕೆ ಚೈತನ್ಯ ತುಂಬುತ್ತದೆ. ಆದರಲ್ಲೂ ಈ ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ಮಾಡಿದರೆ ಚಳಿ ಸ್ವಲ್ಪ ಕಡಿಮೆಯಾವುದು. ಅದೇ ತಣ್ಣರಿನಿಂದ ಮಾಡಿದರೆ ಚಳಿಯಿಂದ ನಡುಗಿ ಬಿಡುತ್ತೇವೆ. ಆದ್ದರಿಂದ ಬಿಸಿ ನೀರಿನ ಸ್ನಾನ ಮಾಡುತ್ತೇವೆ.
ಶವರ್ ನಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡಿದರೆ ದೇಹಕ್ಕೆ ಹುರುಪು ಬರುತ್ತದೆ, ಆದರೆ ಕೂದಲು ಹಾಳಾಗುತ್ತದೆ. ಶವರ್ ನಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡಿದರೆ ಕೂದಲಿಗೆ ಹೇಗೆ ಹಾನಿ ಉಂಟಾಗುತ್ತದೆ ಎಂದು ನೋಡೋಣ ಬನ್ನಿ.
1. ಬಿಸಿ ನೀರು ತಲೆಗೆ ಬಿದ್ದಾಗ ಕೂದಲಿನ ಬುಡದ ರಂಧ್ರಗಳು ಓಪನ್ ಆಗುತ್ತದೆ. ಇದರಿಂದ ಕೂದಲು ಬುಡದಿಂದಲೇ ಕಿತ್ತು ಬರಲಾರಂಭಿಸುತ್ತದೆ.

2. ಕೂದಲಿನಲ್ಲಿ ಕೆರಾಟಿನ್ ಎಂಬ ಪ್ರೊಟೀನ್ ಇರುತ್ತದೆ. ತಲೆಗೆ ಬಿಸಿ ನೀರು ಹಾಕಿದಾಗ ಈ ಕೆರಾಟಿನ್ ಗೆ ಹಾನಿ ಉಂಟಾಗುವುದು. ಇದರಿಂದ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ.
3. ಶ್ಯಾಂಪೂವಿನಲ್ಲಿ ರಾಸಾಯನಿಕವಿರುತ್ತದೆ. ಬಿಸಿ ನೀರು ತಲೆಗೆ ಹಾಕಿದಾಗ ಕೂದಲಿನ ರಂಧ್ರಗಳು ಓಪನ್ ಆಗುತ್ತದೆ. ನಂತರ ಶ್ಯಾಂಪೂ ಹಚ್ಚಿದಾಗ ಶ್ಯಾಂಪೂ ಈ ರಂಧ್ರಗಳಲ್ಲಿ ಸೇರಿಕೊಂಡು ಸಡಿಲ ಮಾಡುತ್ತಾ ಹೋಗುತ್ತದೆ. ಇದರಿಂದ ತುಂಬಾ ಕೂದಲು ಉದುರಲಾರಂಭಿಸುತ್ತದೆ.
4. ಕಂಡೀಷನರ್ ಹಚ್ಚಿ ಸ್ನಾನ ಮಾಡುವುದಾದರೆ ಬಿಸಿ ನೀರು ಬಳಸಲು ಹೋಗಲೇಬಾರದು. ಕಂಡೀಷನರ್ ಹಚ್ಚಿ ಬಿಸಿ ನೀರನ್ನು ತಲೆಗೆ ಹಾಕಿದರೆ ಅದರ ಪ್ರಯೋಜನವೇ ದೊರೆಯುವುದಿಲ್ಲ.
ಶವರ್ ನಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡಿದರೆ ಮೈಕೈ ನೋವು ಕಡಿಮೆಯಾಗುತ್ತದೆ, ಆದರೆ ಕೂದಲಿಗೆ ಒಳ್ಳೆಯದಲ್ಲ. ಆದ್ದರಿಂದ ಶವರ್ ನಲ್ಲಿ ಸ್ನಾನ ಮಾಡುವಾಗ ನೀರು ತಲೆಗೆ ಬೀಳದಂತೆ ಪ್ಲಾಸ್ಟಿಕ್ ಕಟ್ಟಿ ಸ್ನಾನ ಮಾಡಿ, ನಂತರ ತಲೆಯನ್ನು ತಣ್ಣೀರಿನಿಂದ ತೊಳೆಯಿರಿ. ಈ ರೀತಿ ಮಾಡಿ ಕೂದಲಿಗೆ ಹಾನಿಯುಂಟಾಗುವುದನ್ನು ತಡೆಯಬಹುದು.



Click it and Unblock the Notifications
