Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕೂದಲನ್ನು ಸ್ಟ್ರೈಟನ್ ಮಾಡುತ್ತೆ ಈ ಹೇರ್ ಪ್ಯಾಕ್!
ಕೂದಲು ಸ್ಟ್ರೈಟನ್ ಮಾಡಿಸಿ ಫ್ರೀ ಹೇರ್ ಬಿಡಲು ಹೆಚ್ಚಿನವರಿಗೆ ತುಂಬಾ ಇಷ್ಟವಿರುತ್ತದೆ. ಆದರೆ ಈ ರೀತಿ ಸ್ಟ್ರೈಟನ್ ಮಾಡಿಸಬೇಕೆ, ಬೇಡ್ವೆ? ಎಂಬ ಗೊಂದಲ್ಲಿರುತ್ತಾರೆ. ಸ್ಟ್ರೈಟನ್ ಮಾಡಿಸಿದರೆ ಕೂದಲು ಉದುರಬಹುದು ಅಥವಾ ಸ್ವಲ್ಪ ದಿನಗಳ ಬಳಿಕ ಕೂದಲು ಹಾಳಾಗಬಹುದೆಂಬ ಭಯ ಅವರಲ್ಲಿರುತ್ತದೆ.
ಕೂದಲಿಗೆ ಯಾವುದೇ ಹಾನಿ ಉಂಟಾಗದಂತೆ ಹೇರ್ ಪ್ಯಾಕ್ ಮಾಡಿ ಕೂದಲನ್ನು ಸ್ಟ್ರೈಟನ್ ಮಾಡಬಹುದು. ಅದಕ್ಕಾಗಿ ಹೇರ್ ಪ್ಯಾಕ್ ಮಾಡಬೇಕು. ಆದರೆ ಈ ವಿಧಾನವನ್ನು ತುಂಬಾ ಗುಂಗುರು ಕೂದಲು ಇರುವವರು ಮಾಡಿದ ಕೂದಲು ನೇರವಾಗುವುದಿಲ್ಲ. ಆದರೆ ಕೂದಲಿನ ಹೊಳಪನ್ನು ಹೆಚ್ಚಿಸಬಹುದು, ಆದರೆ ಸ್ಟ್ರೈಟನ್ ಆಗಿ ಕಾಣುವುದಿಲ್ಲ. ಅದೇ ಸ್ವಲ್ಪ ಗುಂಗುರು ಹಾಗೂ ನೇರ ಕೂದಲಿರುವವರು ಮಾಡಿಸಿದರೆ ಬ್ಯೂಟಿ ಪಾರ್ಲರ್ ಗೆ ಹೋಗಿ ಸ್ಟ್ರೈಟನ್ ಮಾಡಿಸಿದಷ್ಟು ಆಕರ್ಷಕವಾಗಿ ಕಾಣುವುದು. ಸ್ಟ್ರೈಟನ್ ಮಾಡುವ ಹೇರ್ ಪ್ಯಾಕ್ ಯಾವುವು ಎಂದು ಈ ಕೆಳಗೆ ವಿವರಿಸಲಾಗಿದೆ.

1. ಬಾಳೆ ಹಣ್ಣು ಮತ್ತು ಪಪ್ಪಾಯಿಯ ಹೇರ್ ಪ್ಯಾಕ್
ಒಂದು ಬಟ್ಟಲಿನಲ್ಲಿ ತುಂಬಾ ಹಣ್ಣಾದ ಬಾಳೆಹಣ್ಣು ಮತ್ತು ಪಪ್ಪಾಯಿ ಹಾಕಿ ಚೆನ್ನಾಗಿ ಹಿಸುಕಬೇಕು. ನಂತರ ಅದನ್ನು ಕೂದಲಿಗೆ ಹಚ್ಚಬೇಕು. ಈ ಪ್ಯಾಕ್ ಕೂದಲಿನಲ್ಲಿ ಚೆನ್ನಾಗಿ ಒಣಗಿದ ನಂತರ ಶ್ಯಾಂಪೂ ಹಾಕಿ ತಣ್ಣೀರಿನಲ್ಲಿ ತಲೆ ತೊಳೆಯಬೇಕು, ನಂತರ ತಲೆ ಬಾಚಬೇಕು. ಕೂದಲನ್ನು ಮಡಚಬೇಡಿ. ಈ ರೀತಿ 2 ಬಾರಿ ಮಾಡಿದರೆ ಸ್ಟ್ರೈಟನ್ ಕೂದಲು ನಿಮ್ಮದಾಗುವುದು.

2. ಮುಲ್ತಾನಿ ಮಿಟಿ ಮತ್ತು ಅಕ್ಕಿ ಹಿಟ್ಟು
1 ಕಪ್ ಮುಲ್ತಾನಿ ಮಿಟಿಗೆ 5 ಚಮಚ ಅಕ್ಕಿ ಹಿಟ್ಟು, ಒಂದು ಮೊಟ್ಟೆಯ ಬಿಳಿ ಹಾಕಿ ಪೇಸ್ಟ್ ಮಾಡಿ. ನಂತರ ಬಿಸಿ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿ ನಂತರ ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ. ನಂತರ ಅರ್ಧ ಗಂಟೆಯ ಬಳಿಕ ತಲೆ ತೊಳೆಯಿರಿ. ಈ ರೀತಿ ಪ್ರತಿವಾರ ಮಾಡಿದರೆ ಕೂದಲು ಸ್ಟ್ರೈಟ್ ಆಗಿ ಕಾಣುವುದು.

3. ತೆಂಗಿನ ಹಾಲು ಮತ್ತು ನಿಂಬೆ ರಸ
ತೆಂಗಿನ ಹಾಲು ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ ಅರ್ಧ ಗಂಟೆಗಳ ಕಾಲ ಫ್ರಿಜ್ ನಲ್ಲಿಡಿ. ನಂತರ ಇದನ್ನು ತಲೆಗೆ ಹಚ್ಚಿ ಬಿಸಿ ನೀರಿನಲ್ಲಿ ಟವಲ್ ಅನ್ನು ಅದ್ದಿ ಅದನ್ನು ತಲೆಗೆ ಸುತ್ತಿ. ನಂತರ ಅರ್ಧ ಗಂಟೆಯ ಬಳಿಕ ಶ್ಯಾಂಪೂ ಹಾಕಿ ತಲೆ ತೊಳೆಯಿರಿ. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡುತ್ತಾ ಬಂದರೆ ನೇರವಾದ ಶೈನಿ ಕೂದಲು ನಿಮ್ಮದಾಗುವುದು.

4. ನೆಲ್ಲಿಕಾಯಿ, ಸೀಗೆಕಾಯಿ, ಅಕ್ಕಿ ಹಿಟ್ಟು
ನೆಲ್ಲಿಕಾಯಿ ಪುಡಿ, ಸೀಗೆ ಕಾಯಿ ಪುಡಿ ಮತ್ತು ಅ 1 ಚಮಚ ಅಕ್ಕಿ ಇವುಗಳನ್ನು ಬಟ್ಟಲಿನಲ್ಲಿ ಹಾಕಿ ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಬೇಕು. ನಂತರ ಈ ಮಿಶ್ರಣವನ್ನು ತಲೆಗೆ ಹಚ್ಚಿ 1 ಗಂಟೆಯ ಬಳಿಕ ತಲೆ ತೊಳೆಯಿರಿ. ಈ ರೀತಿ ಮಾಡಿದರೆ ನುಣಪಾದ ಹಾಗೂ ನೇರವಾದ ಕೂದಲು ನಿಮ್ಮದಾಗುವುದು.

5. ಕಂಡೀಷನರ್
ತಲೆಗೆ ಶ್ಯಾಂಪೂ ಹಚ್ಚಿದ ಬಳಿಕ ಕಂಡೀಷನರ್ ಹಾಕಿದರೆ ಕೂದಲು ನೇರವಾಗಿ ನಿಲ್ಲುತ್ತದೆ ಹಾಗೂ ಕೂದಲಿನ ಹೊಳಪು ಹೆಚ್ಚುತ್ತದೆ.



Click it and Unblock the Notifications
