Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಚಳಿಗಾಲದಲ್ಲಿ ಕೂದಲಿನ ರಕ್ಷಣೆಗೆ 5 ಹೇರ್ ಪ್ಯಾಕ್
ಚಳಿಗಾಲದಲ್ಲಿ ತ್ವಚೆ ಮಾತ್ರವಲ್ಲ ಕೂದಲೂ ಹಾಳಾಗುತ್ತದೆ. ನಿಮ್ಮ ಅಂದದ ಕೂದಲಿನ ರಕ್ಷಣೆಗೆ ಸ್ವಲ್ಪ ಗಮನ ಕೊಟ್ಟರೆ ಮಾತ್ರ ಚಳಿಯಿಂದಾಗಿ ಕೂದಲಿಗೆ ಉಂಟಾಗುವ ಹಾನಿಯನ್ನು ತಡೆಗಟ್ಟಬಹುದು. ಇಲ್ಲದಿದ್ದರೆ ಕೂದಲು ಒಣಗಿ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ, ಕೂದಲು ಉದುರಲಾಂಭಿಸುತ್ತದೆ. ಈ ರೀತಿಯ ಲಕ್ಷಣಗಳು ಈಗಾಗಲೇ ನಿಮ್ಮ ಕೂದಲಿನಲ್ಲಿ ಕಂಡು ಬಂದಿದ್ದರೆ ಈ ಕೆಳಗಿನ ಹೇರ್ ಪ್ಯಾಕ್ ಮಾಡಿದರೆ ಸಾಕು ಆಕರ್ಷಕವಾದ, ಆರೋಗ್ಯಕರವಾದ ಕೂದಲು ನಿಮ್ಮದಾಗುವುದು.
1. ಒಣ ಕೂದಲಿಗೆ: ಒಣ ಕೂದಲಿಗೆ ಬಾಳೆ ಹಣ್ಣಿನ ಹೇರ್ ಪ್ಯಾಕ್ ಒಳೆಯದು. ಬಾಳೆ ಹಣ್ಣನ್ನು ಚೆನ್ನಾಗಿ ಹಿಸುಕಿ ಅದರಲ್ಲಿ 1 ನಿಂಬೆ ಹಣ್ಣಿನ ರಸವನ್ನು ಹಾಕಿ ಮಿಶ್ರಣ ಮಾಡಿ ನಂತರ ಅದನ್ನು ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯಬೇಕು. ಹೀಗೆ ತಲೆ ತೊಳೆಯುವಾಗ ಮೃದುವಾದ ಶ್ಯಾಂಪೂ ಹಚ್ಚಿ.

2. ಕೂದಲು ಕವಲೊಡೆದಿದ್ದರೆ: ಮೊಟ್ಟೆಯ ಬಿಳಿಯನ್ನು ಒಂದು ಬಟ್ಟಲಿನಲ್ಲಿ ಅದರಲ್ಲಿ ಒಂದು ನಿಂಬೆ ಹಣ್ಣಿನ ರಸವನ್ನು ಹಿಂಡಿ ಮಿಶ್ರಣ ಮಾಡಿ ಅದನ್ನು ತಲೆಗೆ ಹಚ್ಚಿ 15 ನಿಮಿಷದ ಬಳಿಕ ತಲೆತೊಳೆಯಬೇಕು. ನಂತರ ಕೂದಲನ್ನು ಒಣಗಿಸಿ ತಲೆಗೆ ಎಣ್ಣೆ ಹಚ್ಚಿ. ಈ ರೀತಿ ಮಾಡಿದರೆ ಕೂದಲು ಕವಲೊಡೆಯುವ ಸಮಸ್ಯೆ ಕಡಿಮೆಯಾಗುವುದು.
3.ಕೂದಲು ಬೆಳೆಯದಿದ್ದರೆ: ಮೆಂತೆಯನ್ನು ನೀರಿನಲ್ಲಿ ನೆನೆ ಹಾಕಿ ಅರೆದು ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿ. ಈ ರೀತಿ ಮಾಡಿದರೆ ತಲೆಯಲ್ಲಿನ ಹೊಟ್ಟು ಕಡಿಮೆಯಾಗುತ್ತದೆ.
4. ಕೂದಲು ಹೊಳಪು ಕಳೆದುಕೊಂಡಿದ್ದರೆ: ಒಂದು ಕಪ್ ಬಿಸಿ ನೀರಿಗೆ ವಿನಿಗರ್ ಮತ್ತು ಜೇನನ್ನು ಸಮಪ್ರಮಾಣದಲ್ಲಿ ಹಾಕಿ. ನಂತರ ಇದನ್ನು ತಲೆಗೆ ಹಚ್ಚಿ. ಈ ರೀತಿ ಮಾಡಿದರೆ ಕೂದಲಿನ ಹೊಳಪು ಹೆಚ್ಚುವುದು ಹಾಗೂ ಕೂದಲು ದಪ್ಪವಾಗಿ ಕಾಣುತ್ತದೆ.
5. ಕೂದಲು ಒಡೆಯುತ್ತಿದ್ದರೆ: ಒಂದು ಮೊಟ್ಟೆಯ ಬಿಳಿಗೆ ಒಂದು ಚಮಚ ಜೇನು ಮತ್ತು ಎರಡು ಚಮಚ ಹರಳೆಣ್ಣೆ ಹಾಕಿ ಅರ್ಧ ಗಂಟೆಯ ಬಳಿಕ ತಲೆಯನ್ನು ಚೆನ್ನಾಗಿ ತೊಳೆದರೆ ಸಾಕು ಕೂದಲು ಒಡೆಯುವುದಿಲ್ಲ.



Click it and Unblock the Notifications
