Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಕೂದಲಿನ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲವೇ?
ಆರೋಗ್ಯಕರವಾದ ಕೂದಲನ್ನು ಮಹಿಳೆಯರು ಮಾತ್ರವಲ್ಲ ಪುರುಷರೂ ಬಯಸುತ್ತಾರೆ. ಕೂದಲು ಸೊಂಪಾಗಿ ಬೆಳೆಯಬೇಕು, ಉದುರಬಾರದು, ಹೊಳಪಿನಿಂದ ಕೂಡಿರಬೇಕು.
ಈ ರೀತಿಯ ಕಂಡೀಷನ್ ಗಳು ನಿಮಗಿದ್ದರೆ ಅದಕ್ಕಾಗಿ ಬೆಲೆ ಬಾಳುವ ಶ್ಯಾಂಪೂ, ಕಂಡೀಷನರ್ ಕೊಳ್ಳಬೇಕಾಗಿಲ್ಲ. ಅದಕ್ಕಾಗಿ ನೀವು ಏನು ಮಾಡಬೇಕು ಅನ್ನುವುದನ್ನು ಇಲ್ಲಿ ಹೇಳಲಾಗಿದೆ ನೋಡಿ:

ಶ್ರೀಗಂಧದ ಎಣ್ಣೆ:
ಸ್ಯಾಂಡಲ್ ವುಡ್ ಆಯಿಲ್ ಅಥವಾ ಶ್ರೀಗಂಧದ ಎಣ್ಣೆಯನ್ನು ಮುಖಕ್ಕೆ ಹಚ್ಚಿದರೆ ಮುಖ ತಂಪಾಗುವುದು ತ್ವಚೆ ಸ್ವಚ್ಛವಾಗಿ ಕಾಣುವುದು.

ಲವಂಗದ ಎಣ್ಣೆ:
ಮುಖದಲ್ಲಿ ತುಂಬಾ ಮೊಡವೆ ಬಂದು ಮುಖ ನೋಡಲು ಅಸಹ್ಯವಾಗಿ ಕಾಣುತ್ತಿದ್ದರೆ ಲವಂಗದ ಎಣ್ಣೆ ಹಚ್ಚಿದರೆ ಸಾಕು, ಬೇಗ ಗುಣಮುಖವಾಗುವುದು ಮತ್ತು ಕಲೆಗಳು ಮಾಯವಾಗುತ್ತದೆ.

ಲ್ಯಾವಂಡರ್ ಎಣ್ಣೆ:
ಮೊಡವೆ ಬಂದು ಕಲೆಗಳು ಉಳಿದಿದ್ದರೆ ಲ್ಯಾವಂಡರ್ ಎಣ್ಣೆಯಿಂದ ಪ್ರತಿದಿನ 2 ನಿಮಿಷ ಮಸಾಜ್ ಮಾಡಿ ಅರ್ಧಗಂಟೆಯ ಬಳಿಕ ಮುಖ ತೊಳೆದರೆ ಸಾಕು, ಕಲೆಗಳು ಮಾಯವಾಗುವುದು.

ಟೀ ಟ್ರೀ ಆಯಿಲ್:
ಟೀ ಗಿಡದಿಂದ ತಯಾರಿಸುವ ಎಣ್ಣೆ ತ್ವಚೆಗೆ ತುಂಬಾ ಒಳ್ಳೆಯದು. ಈ ಎಣ್ಣೆ ಮುಖಕ್ಕೆ ಹಚ್ಚಿದರೆ ಮೊಡವೆಗೆ ಉಂಟು ಮಾಡುವ ಬ್ಯಾಕ್ಟೀರಿಯಗಳನ್ನು ನಾಶಪಡಿಸುತ್ತದೆ. ಎಣ್ಣೆ ಅಂಗಡಿಗಳಲ್ಲಿ ಅಥವಾ ಆರ್ಯುವೇದಿಕ್ ಅಂಗಡಿಗಳಲ್ಲಿ ಕೇಳಿದರೆ ಈ ಎಣ್ಣೆ ಲಭ್ಯವಾಗುವುದು.

ಆಲೀವ್ ಎಣ್ಣೆ:
ವಿಟಮಿನ್ ಇ ಇರುವ ಎಣ್ಣೆ ತ್ವಚೆಗೆ ತುಂಬಾ ಒಳ್ಳೆಯದು. ಇದರಲ್ಲಿರುವ antioxidants ಮೊಡವೆಯನ್ನು ಹೋಗಲಾಡಿಸಿ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.

ಜೊಜೊಬಾ ಎಣ್ಣೆ:
ಈ ಎಣ್ಣೆ ಮೊಡವೆಯನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಮುಖಕ್ಕೆ ಒಂದು ಹೊಸ ಕಳೆಯನ್ನು ತುಂಬುತ್ತದೆ. ತ್ವಚೆಯಲ್ಲಿ ಬಿರುಕಿನ ಸಮಸ್ಯೆ ಇರುವವರು ಕೂಡ ಇದನ್ನು ಹಚ್ಚಿದರೆ ಉತ್ತಮವಾದ ಫಳಿತಾಂಶವನ್ನು ಪಡೆಯಬಹುದು.

1. ಆಹಾರಕ್ರಮ:
ಕೂದಲಿನ ಆರೋಗ್ಯಕ್ಕೆ ಡಯಟ್ ಕಡೆ ಹೆಚ್ಚಿನ ಗಮನವನ್ನು ಕೊಡಬೇಕು. ಅಧಿಕ ಸಿಟ್ರಸ್ ಪದಾರ್ಥಗಳನ್ನು ಸೇವಿಸಬೇಕು. ಸತುವಿನಂಶ ಅಧಿಕವಿರುವ ಆಹಾರವನ್ನು ಸೇವಿಸಬೇಕು. ಮೀನು, ಹಸಿರು ಸೊಪ್ಪು ತರಕಾರಿಗಳು, ಬೀನ್ಸ್, ನಟ್ಸ್, ಚಿಕನ್ , ಮೊಟ್ಟೆ, ದವಸ ಧಾನ್ಯಗಳು, ಮೃದ್ವಂಗಿಗಳು, ಹಾಲಿನ ಉತ್ಪನ್ನಗಳು, ಕ್ಯಾರೆಟ್ ಇವುಗಳ ಸೇವನೆ ಒಳ್ಳೆಯದು.

2. ಮೊಟ್ಟೆಯ ಬಿಳಿ:
ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮೊಟ್ಟೆಯ ಬಿಳಿಯನ್ನು ಕೂದಲಿಗೆ ಹಚ್ಚಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ ಹಾಗೂ ಕೂದಲು ಹೊಳಪನ್ನು ಹೊಂದುತ್ತದೆ.

3. ಎಣ್ಣೆ ಮಸಾಜ್:
ಕೂದಲಿಗೆ ಬರೀ ಶ್ಯಾಂಪೂ, ಕಂಡೀಷನರ್ ಮಾತ್ರ ಹಚ್ಚುತ್ತಿದ್ದರೆ ಮೊದಮೊದಲು ಆಕರ್ಷಕವಾಗಿ ಕಂಡರೂ ನಂತರ ಕೂದಲು ಒಣಗಿದಂತೆ ಆಗಿ ನಂತರ ಕೂದಲು ಹಾಳಾಗುವುದು. ಆದ್ದರಿಂದ ಕನಿಷ್ಠವೆಂದರೆ ವಾರಕ್ಕೆ ಎರಡು ಬಾರಿ ಎಣ್ಣೆ ಮಸಾಜ್ ಮಾಡಬೇಕು.

4. ನೆಲ್ಲಿಕಾಯಿ ಅಥವಾ ಆಮ್ಲ:
ಪ್ರತಿದಿನ ಒಂದು ನೆಲ್ಲಿಕಾಯಿ ತಿನ್ನುವುದು ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಎಣ್ಣೆ ಮಸಾಜ್ ಮಾಡುವಾಗ ನೆಲ್ಲಿಕಾಯಿ ಹಾಕಿ ಕುದಿಸಿ ನಂತರ ಎಣ್ಣೆ ಮಸಾಜ್ ಮಾಡಿದರೆ ಅಥವಾ ಆಮ್ಲ ಎಣ್ಣೆಯನ್ನು ಬಳಸಿದರೆ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.

5. ಕಹಿಬೇವಿನ ಎಲೆ:
ಕಹಿಬೇವಿನ ಎಲೆಯನ್ನು ಅರಿದು ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆಸ್ನಾನ ಮಾಡಬೇಕು. ಈ ರೀತಿ ಮಾಡಿದರೆ ತಲೆ ಹೊಟ್ಟು ಸಮಸ್ಯೆಯ ವಿರುದ್ಧ ಹೋರಾಡಿ ಕೂದಲಿಗೆ ರಕ್ಷಣೆಯನ್ನು ಕೊಡುತ್ತದೆ.

6. ಲೋಳೆಸರ:
ಲೋಳೆಸರವನ್ನು ಎಣ್ಣೆ ಜೊತೆ ಮಿಶ್ರಣ ಮಾಡಿ ತಲೆಗೆ ಹಚ್ಚಿ ನಂತರ ತಲೆಸ್ನಾನ ಮಾಡಬೇಕು. ಪ್ರತಿದಿನ ಖಾಲಿಹೊಟ್ಟೆಯಲ್ಲಿ ತಾಜಾ ಲೋಳೆಸರವನ್ನು ತಿಂದರೆ ಆರೋಗ್ಯ ಹಾಗೂ ಕೂದಲಿಗೆ ತುಂಬಾ ಒಳ್ಳೆಯದು.

7. ಬೀರ್:
ತಲೆ ಸ್ನಾನ ಮಾಡುವಾಗ ಸ್ವಲ್ಪ ಬೀರ್ ಅನ್ನು ನೀರಿನಲ್ಲಿ ಹಾಹಿ ಅದರಿಂದ ತಲೆ ತೊಂದರೆ ಕೂದಲು ಹೊಳಪನ್ನು ಪಡೆಯುವುದರ ಜೊತೆಗೆ ಮಂದವಾಗಿ ಕಾಣುತ್ತದೆ.

8. ಮಯೋನೈಸ್:
ಮಯೋನೈಸ್ ಅನ್ನು ತಂದು ಅದನ್ನು ಎಣ್ಣೆ ಜೊತೆ ಮಿಶ್ರಣ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆಸ್ನಾನ ಮಾಡಬೇಕು. ಈ ರೀತಿ ವಾರಕ್ಕೊಮ್ಮೆ ಮಾಡಿದರೆ ಉತ್ತಮ ಪ್ರಯೋಜನವನ್ನು ಪಡೆಯಬಹುದು.



Click it and Unblock the Notifications
