Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಕೂದಲಿನ ರಕ್ಷಣೆಗೆ ಮಾಡಿ ಮೆಹಂದಿಯಿಂದ ಆರೈಕೆ

ಸಲಹೆ: ಮೆಹಂದಿಯನ್ನು ತಲೆಗೆ ಹಚ್ಚುವಾಗ ಸ್ವಲ್ಪ ಮೊಸರು ಮತ್ತು ನಿಂಬೆರಸ ಮಿಶ್ರ ಮಾಡಿ ಹಚ್ಚಿದರೆ ಕೂದಲಿಗೆ ತುಂಬಾ ಒಳ್ಳೆಯದು ಅಲ್ಲದೆ ಹೊಟ್ಟು ಕೂಡ ನಿವಾರಣೆಯಾಗುತ್ತದೆ. ಮೆಹಂದಿ ಹಚ್ಚಿ ತಲೆ ತುಂಬಾ ಕೆಂಪಾಗುವುದು ಬೇಡ ಅಂದರೆ ಮೆಹಂದಿ ಹಚ್ಚುವ ಮೊದಲು ಎಣ್ಣೆಯನ್ನು ಹಚ್ಚಿ ನಂತರ ಮೆಹಂದಿಯನ್ನು ಹಚ್ಚಿದರೆ ಕೂದಲು ಅಷ್ಟಾಗಿ ಕೆಂಪಾಗುವುದಿಲ್ಲ. ಮೆಹಂದಿ ಹಚ್ಚಿದ ನಂತರ ತಣ್ಣೀರಿನಿಂದ ಅಥವಾ ಹದಬಿಸಿ ನೀರಿನಿಂದ ತಲೆ ತೊಳೆಯಬೇಕು. ಆದರೆ ತಲೆಯನ್ನು ಸೋಪು ಅಥವಾ ಶ್ಯಾಂಪೂ ಹಾಕದೆ ತೊಳೆದು ತಲೆಯನ್ನು ಒಣಗಿಸಬೇಕು. ನಂತರ ಎಣ್ಣೆ ಹಚ್ಚಿ ಮಾರನೆ ದಿನ ಶ್ಯಾಂಪೂ ಹಚ್ಚಿ ತಲೆ ತೊಳೆಯಬೇಕು. ಈ ರೀತಿ ಮಾಡಿದರೆ ಮೆಹಂದಿ ಹಚ್ಚುವುದರಿಂದ ಅಧಿಕ ಪ್ರಯೋಜನವನ್ನು ಪಡೆಯಬಹುದು.
ಮೇಲೆ ಹೇಳಿದ ಸಲಹೆಯನ್ನು ಪಾಲಿಸಿ ತಲೆಗೆ ಮೆಹಂದಿ ಹಚ್ಚಿದರೆ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:
* ಕೂದಲು ಉದುರುವುದು: ಮೆಹಂದಿ ಹಚ್ಚಿದರೆ ಅದು ತಲೆಗೆ ತಂಪನ್ನು ನೀಡುತ್ತದೆ ಅಲ್ಲದೆ ಕೂದಲು ಒಣಗುವುದನ್ನು ತಡೆಯುವುದರಿಂದ ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸಬಹುದು.
* ಕೂದಲಿಗೆ ರಕ್ಷಣೆ: ಮುಖಕ್ಕೆ ಸನ್ ಸ್ಕ್ರೀನ್ ರಕ್ಷಣೆ ಕೊಡುವಂತೆ , ಮೆಹಂದಿ ಕೂದಲಿಗೆ ರಕ್ಷಣೆಯನ್ನು ಕೊಡುತ್ತದೆ. ಇದು ಸೂರ್ಯನ ಕಿರಣಗಳಿಂದ ಮಾತ್ರವಲ್ಲ, ನೀರಿನಲ್ಲಿರುವ ಕ್ಲೋರಿನ್ ಕೂದಲು ಹಾಳಾಗದಂತೆ ರಕ್ಷಣೆಯನ್ನು ಕೊಡುತ್ತದೆ.
* ಅಕಾಲಿಕ ನೆರೆ: ಮೆಹಂದಿಯನ್ನು ತಿಂಗಳಿಗೆ ಎರಡು ಬಾರಿ ತಲೆಗೆ ಹಚ್ಚುವುತ್ತಾ ಬಂದರೆ ನೆರೆಕೂದಲು ಮರೆ ಮಾಚುವುದು ಅಷ್ಟೇ ಅಲ್ಲ, ಅಕಾಲಿಕ ನೆರೆ ಉಂಟಾಗದಂತೆ ಕೂದಲನ್ನು ರಕ್ಷಿಸುತ್ತದೆ.
* ಮೆಹಂದಿ ಕಂಡೀಷನರ್ :ಮೆಹಂದಿ ಕೂದಲಿಗೆ ಉತ್ತಮ ಕಂಡೀಷನರ್ ಆಗಿದ್ದು ಇದನ್ನು ಹಚ್ಚಿದರೆ ಕೂದಲು ಮೃದುವಾಗುವುದು ಮತ್ತು ಹೊಳಪನ್ನು ಪಡೆಯುತ್ತದೆ. ಕೃತಕ ಬಣ್ಣಗಳನ್ನು ಹಚ್ಚಿ ಕೂದಲಿನ ಆರೋಗ್ಯ ಕಳೆಯುವುದಕ್ಕಿಂತ ಇದನ್ನು ಹಚ್ಚುವುದು ಒಳ್ಳೆಯದು.
ಮೆಹಂದಿ ಗಿಡದಿಂದ ಎಲೆಗಳನ್ನು ಕಿತ್ತು ಅದನ್ನು ಪೇಸ್ಟ್ ರೀತಿ ಮಾಡಿ ಹಚ್ಚುವುದು, ಮೆಹಂದಿ ಪುಡಿಯನ್ನು ಬಳಸುವುದಕ್ಕಿಂತ ಹೆಚ್ಚು ಪ್ರಯೋಜನಕಾರಿ.



Click it and Unblock the Notifications
