Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಕೂದಲು ಉದುರುವ ಸಮಸ್ಯೆಗೆ ಹೆಲ್ಮೆಟ್ ಕಾರಣ!

ಹೀಗೆ ಪ್ರತಿನಿತ್ಯ ಹೆಲ್ಮೆಟ್ ಬಳಸುವುದರಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಕೆಲವರು ಹೇಳುವುದನ್ನು ಕೇಳಿರಬಹುದು, ಒಂದು ವೇಳೆ ನಿಮ್ಮ ಕೂದಲು ಉದುರುತ್ತಿದ್ದರೆ ಹೆಲ್ಮೆಟ್ ಹಾಕುತ್ತಿರುವುದರಿಂದ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತಿದೆಯೇ ಎಂದು ನಿಮಗೆ ಅನಿಸುತ್ತಿರಬಹುದು. ಬನ್ನಿ ಕೂದಲು ಉದುರುವ ಸಮಸ್ಯೆಗೆ ಹೆಲ್ಮೆಟ್ ಕೂಡ ಒಂದು ಕಾರಣವಾಗಿದೆಯೇ ಎಂದು ತಿಳಿಯೋಣ ಬನ್ನಿ.
ಕೂದಲು ಉದುರುವ ಸಮಸ್ಯೆ ಹೆಚ್ಚಾಗಲು ಹೆಲ್ಮಟ್ ಕೂಡ ಒಂದು ಕಾರಣವಾಗಿದೆ. ಹೆಲ್ಮಟ್ ನಿಂದ ಕೂದಲು ಉದುರಲು ಈ ಕೆಳಗಿನ ಅಂಶಗಳು ಮುಖ್ಯ ಕಾರಣವಾಗಿದೆ.
1. ತಲೆಗೆ ಹೆಲ್ಮೆಟ್ ಧರಿಸಿದಾಗ ಕೂದಲನ್ನು ಮುಚ್ಚುತ್ತದೆ. ಇದರಿಂದ ಕೂದಲಿಗೆ ಸರಿಯಾಗಿ ಗಾಳಿಯಾಡಲು ಸಾಧ್ಯವಾಗುವುದಿಲ್ಲ. ಹೆಲ್ಮೆಟ್ ಅನ್ನು ದಿನದಲ್ಲಿ 2 ಗಂಟೆಗಳಿಗಿಂತ ಅಧಿಕ ಕಾಲ ಬಳಸುವವರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.
2. ಹೆಲ್ಮೆಟ್ ಹಾಕಿದಾಗ ತಲೆ ಬೆವರುವುದು, ಈ ಬೆವರು ತಲೆಬುಡದಲ್ಲಿ ಹಾಗೇ ನಿಂತು ಕೂದಲಿನ ಬುಡವನ್ನು ಬಲಹೀನ ಮಾಡುತ್ತದೆ. ಇದರಿಂದ ಕೂದಲು ತೆಳ್ಳಗಾಗುವುದು.
3. ಹೆಲ್ಮೆಟ್ ಹಾಕುವುದರಿಂದ ತಲೆಹೊಟ್ಟಿನ ಸಮಸ್ಯೆ ಹೆಚ್ಚಾಗುವುದು. ತಲೆ ಬೆವರಿ ತುರಿಸಲಾರಂಭಿಸುತ್ತದೆ, ಈ ರೀತಿ ಆಗಿ ತಲೆಹೊಟ್ಟಿನ ಸಮಸ್ಯೆ ಕಂಡುಬರುತ್ತದೆ.
ಕೂದಲು ಉದುರುತ್ತದೆ ಅಂತ ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಲು ಸಾಧ್ಯವಿಲ್ಲ, ಆದ್ದರಿಂದ ಕೂದಲಿನ ರಕ್ಷಣೆಗೆ ಈ ಕೆಳಗಿನ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.
1. ಹೆಲ್ಮೆಟ್ ಹಾಕುವ ಮುನ್ನ ಕರ್ಚೀಪ್ ಕಟ್ಟಿ ನಂತರ ಹೆಲ್ಮೆಟ್ ಹಾಕಿದರೆ ಒಳ್ಳೆಯದು.
2. ತುಂಬಾ ದೂರ ಬೈಕ್ ನಲ್ಲಿ ಪ್ರಯಾಣಿಸುವುದಾದರೆ ಒಂದು ಗಂಟೆ ಗಾಡಿ ಚಲಾಯಿಸಿ ನಂತರ ಒಂದು ಕಡೆ ಗಾಡಿ ನಿಲ್ಲಿಸಿ ಹೆಲ್ಮೆಟ್ ತಲೆಯಿಂದ ತೆಗೆದು 5 ನಿಮಿಷ ಬಿಟ್ಟು ನಂತರ ಹೊರಡಿ.
3. ತಲೆಗೆ ವಾರಕ್ಕೆ ಎರಡು ಬಾರಿ ಎಣ್ಣೆ ಮಸಾಜ್ ಮಾಡಬೇಕು.
4. ತಲೆಯನ್ನು ಪ್ರತಿದಿನ ತೊಳೆದು ಸರಿಯಾಗಿ ಒಣಗಿಸಿ ನಂತರ ತಲೆ ಬಾಚಬೇಕು.
ಈ ರೀತಿ ಮಾಡಿದರೆ ಕೂದಲಿನಿಂದ ಕೂದಲು ಉದುರುವ ಸಮಸ್ಯೆ ತಡೆಗಟ್ಟಬಹುದು.



Click it and Unblock the Notifications
