Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ರೇಷ್ಮೆಯಂತಹ ಕೂದಲಿಗಾಗಿ ನೈಸರ್ಗಿಕ ಕಂಡೀಷನರ್

ಮೊಸರು: ಮೊಸರು ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ತೊಳೆದರೆ ಕೂದಲು ಮೃದುವಾಗುವುದು ಮತ್ತು ಹೊಳಪನ್ನು ಪಡೆಯುತ್ತದೆ. ಮೊಸರಿನ ಜೊತೆ ಒಂದು ಚಮಚ ಜೇನು ಸೇರಿಸಿ ಹಚ್ಚಿದರೆ ಕೂದಲು ಮತ್ತಷ್ಟು ಹೊಳಪನ್ನು ಪಡೆಯುತ್ತದೆ. ಆದರೆ ಮೊಸರು ಹಚ್ಚಿ ತುಂಬಾ ಹೊತ್ತು ಬಿಡಬಾರದು. ಏಕೆಂದರೆ ತಲೆ ವಾಸನೆ ಬರಲಾರಂಭಿಸುತ್ತದೆ. ತಲೆಹೊಟ್ಟು ಇದ್ದರೆ ಮೊಸರಿನ ಜೊತೆ ನಿಂಬೆರಸ ಸೇರಿಸಿ ಹಚ್ಚಿದರೆ ತಲೆಹೊಟ್ಟು ನಿವಾರಣೆಯಾಗುವುದು.
ಬಿಸಿ ಎಣ್ಣೆ ಮಸಾಜ್: ಬಿಸಿ ಎಣ್ಣೆ ಮಸಾಜ್ ವಾರಕ್ಕೊಮ್ಮೆಯಾದರೂ ಮಾಡುವುದು ಒಳ್ಳೆಯದು. ಹದ ಬಿಸಿ ಎಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡಿ ನಂತರ ಟವಲ್ ಅನ್ನು ಬಿಸಿ ನೀರಿನಲ್ಲಿ ಅದ್ದಿ ಹಿಂಡಿ ತಲೆಗೆ ಸುತ್ತಿ ಅರ್ಧ ಗಂಟೆ ಇಟ್ಟು ತಲೆ ತೊಳೆಯಬೇಕು. ಈ ರೀತಿ ಮಾಡಿದರೆ ಕೂದಲಿನ ಬುಡ ಬಲವಾಗುತ್ತದೆ. ಈ ರೀತಿ ಎಣ್ಣೆ ಮಸಾಜ್ ಗೆ ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ಬಳಸಬಹುದು.
ಮೊಟ್ಟೆಯ ಪ್ಯಾಕ್: ಮೊಟ್ಟೆಯ ಬಿಳಿಯನ್ನು ಮಾತ್ರ ಒಂದು ಬಟ್ಟಲಿಗೆ ಹಾಕಿ ಚೆನ್ನಾಗಿ ಕದಡಿ ಅದನ್ನು ತಲೆಗೆ ಹಚ್ಚಿ 20 ನಿಮಿಷದ ಬಳಿಕ ಮೃದುವಾದ ಶ್ಯಾಂಪೂ ಹಚ್ಚಿ ತಲೆ ತೊಳೆಯಬೇಕು. ಈ ರೀತಿ ಮಾಡಿದರೆ ಕೂದಲು ಮೃದು ಮತ್ತು ಹೊಳಪನ್ನು ಹೊಂದುವುದು.
ವಿನಿಗರ್: ತಲೆಯನ್ನು ತೊಳೆದ ಬಳಿಕ 1 ಚಮಚ ಸೈಡರ್ ವಿನಿಗರ್ ಅನ್ನು ಅರ್ಧ ಬಕೆಟ್ ನೀರಿಗೆ ಹಾಕಿ ಅದರಿಂದ ತಲೆ ತೊಳೆದುಕೊಂಡರೆ ಕೂದಲು ಆಕರ್ಷಕವಾಗಿ ಕಾಣುವುದು.
ಟೀ : ನೀರಿನಲ್ಲಿ ಸ್ವಲ್ಪ ಟೀ ಎಲೆಯನ್ನು ಹಾಕಿ ಕುದಿಸಬೇಕು. ನಂತರ ಇದನ್ನು ಒಂದು ಪಾತ್ರೆಯಲ್ಲಿ ಸುರಿದು ತಣ್ಣಗಾಗಲು ಇಡಬೇಕು. ನಂತರ ಟೀಯನ್ನು ತಲೆಗೆ ಹಚ್ಚಿ 20 ನಿಮಿಷದ ಬಳಿಕ ತಲೆ ತೊಳೆದರೆ ಕೂದಲು ಬಲವಾಗುವುದರ ಜೊತೆಗೆ ಆಕರ್ಷಕ ಬಣ್ಣವನ್ನು ಪಡೆಯುತ್ತದೆ.



Click it and Unblock the Notifications
