Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕೂದಲಿನ ಆರೋಗ್ಯ ಹೆಚ್ಚಿಸುತ್ತೆ ಈ ಆಹಾರ
ಕೂದಲು ಉದುರುವ ಸಮಸ್ಯೆಯಿದ್ದರೆ ಯಾವ ಶ್ಯಾಂಪೂ ಹಾಕಬೇಕು, ಯಾವ ಎಣ್ಣೆ ಹಚ್ಚಬೇಕು ಎಂದು ಕೇಳುತ್ತೇವೆ ಹೊರತು ಯಾವ ಆಹಾರ ತಿಂದರೆ ಒಳ್ಳೆಯದು ಎಂದು ಕೇಳುವುದಿಲ್ಲ. ಆದರೆ ನಾವು ಸೇವಿಸುವ ಆಹಾರ ಮತ್ತು ಕೂದಲಿನ ಆರೋಗ್ಯಕ್ಕೆ ನಿಕಟ ಸಂಬಂಧ ಇದೆ. ಆದ್ದರಿಂದ ಸೊಂಪಾದ ಕೂದಲು ಬೇಕೆಂದು ಬಯಸುವವರು ಬಾಹ್ಯವಾಗಿ ಕೂದಲನ್ನು ಆರೈಕೆ ಮಾಡುವುದರ ಜೊತೆಗೆ ಈ ಕೆಳಗಿನ ಆಹಾರ ಕ್ರಮ ಪಾಲಿಸಿದರೆ ಉತ್ತಮ ಪ್ರಯೋಜನ ಪಡೆಯಬಹುದು.

ಮೀನು: ಮೀನಿನಲ್ಲಿ ಕೂದಲಿನ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶ ದೊರೆಯುತ್ತದೆ. ಸಾಲಾಮೋನ್ ನಂತಹ ಮೀನಿನಲ್ಲಿರುವ ಒಮೆಗಾ 3 ಅಂಶವು ಕೂದಲಿನ ಬುಡ ಒಣಗುವುದನ್ನು ತಡೆಗಟ್ಟುತ್ತದೆ. ಮೀನಿನಲ್ಲಿರುವ ವಿಟಮಿನ್ ಬಿ-12 ಮತ್ತು ಕಬ್ಬಿಣದಂಶ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಚಿಕನ್: ಚಿಕನ್ ಮತ್ತು ಮೊಟ್ಟೆಯಲ್ಲಿ ಪ್ರೊಟೀನ್ ಅಂಶ ಮತ್ತು ವಿಟಮಿನ್ -12 ಇರುವುದರಿಂದ ಇವುಗಳ ಸೇವನೆ ಕೂಡ ಕೂದಲಿನ ಬೆಳಣಿಗೆಗೆ ಒಳ್ಳೆಯದು.
ಹಾಲಿನ ಉತ್ಪನ್ನಗಳು: ಅಧಿಕ ಕೊಬ್ಬಿನಂಶವಿಲ್ಲದ ಹಾಲಿನ ಉತ್ಪನ್ನಗಳನ್ನು ಸೇವಿಸಿದರೆ ಕೂದಲಿಗೂ ಒಳ್ಳೆಯದು, ದೇಹದ ತೂಕ ಕೂಡ ಮಿತಿಯಲ್ಲಿರುತ್ತದೆ.
ನಟ್ಸ್: ಆರೋಗ್ಯಕರ ಕೂದಲಿಗೆ ಸತುವಿನಂಶ ಅವಶ್ಯಕ. ಗೋಡಂಬಿ, ಬಾದಾಮಿಯಲ್ಲಿ ಸತುವಿನಂಶ ಅಧಿಕವಿರುವುದರಿಂದ ಪ್ರತಿದಿನ ಬೆಳಗ್ಗೆ ಇದನ್ನು ತಿನ್ನುವುದು ಒಳ್ಳೆಯದು.
ಫ್ಲಾಕ್ಸ್ ಸೀಡ್ : ಇದು ನೋಡಲು ಹುರುಳಿಕಾಳಿನ ರೀತಿಯಿರುವ ಕಾಳಾಗಿದೆ. ಇದರಲ್ಲೂ ಒಮೆಗಾ 3 ಅಂಶವಿರುವುದರಿಂದ, ಇದರಿಂದ ತಯಾರಿಸಿದ ಆಹಾರ ಸೇವನೆ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಸೂರ್ಯಕಾಂತಿ ಬೀಜ: ಸೂರ್ಯ ಕಾಂತಿ ಬೀಜದಲ್ಲಿ ವಿಟಮಿನ್ ಬಿ ಇರುವುದರಿಂದ ಇದನ್ನು ತಿಂಡಿಗಳು ಮಾಡುವಾಗ ಅದರ ಜೊತೆ ಹಾಕಿ ಬಳಸಬಹುದಾಗಿದೆ.
ಆಲೀವ್ ಎಣ್ಣೆ : ಆಲೀವ್ ಎಣ್ಣೆಯಿಂದ ತ್ವಚೆ ರಕ್ಷಣೆ ಮಾಡಬಹುದು, ಕೂದಲಿ ಹಚ್ಚಿದರೆ ತುಂಬಾ ಒಳ್ಳೆಯದು, ಈ ಎಣ್ಣೆಯನ್ನು ಸಲಾಡ್ ಗೆ ಹಾಕಿದರೆ ಕೂದಲು ಮತ್ತು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಕಿಡ್ನಿ ಬೀನ್ಸ್: ಕಿಡಿ ಬೀನ್ಸ್ ನಲ್ಲಿ ಕಬ್ಬಿಣದಂಶ, ಸತು ಮತ್ತು ವಿಟಮಿನ್ ಬಿ ಇರುವುದರಿಂದ ಕೂದಲು ಮತ್ತು ದೇಹದ ಆರೋಗ್ಯಕ್ಕೆ ಒಳ್ಳೆಯದು.
ಈರುಳ್ಳಿ, ಬೆಳ್ಳುಳ್ಳಿ, ಬೆಣ್ಣೆ ಹಣ್ಣು, ಕ್ಯಾರೆಟ್, ಸಿಹಿಗೆಣಸು, ಕಿತ್ತಳೆ, ಕೊತ್ತಂಬರಿ ಮತ್ತು ಅಧಿಕ ಕ್ಯಾಲ್ಸಿಯಂ ಇರುವ ಆಹಾರಗಳ ಸೇವನೆ ಒಳ್ಳೆಯದು.
ಅಧಿಕ ಖನಿಜಾಂಶವಿರುವ ಹಾರಗಳ ಸೇವನೆ ಮಾಡಬೇಕು, ಅದರ ಜೊತೆ ಕೂದಲಿಗೆ ಉತ್ತಮವಾದ ಆರೈಕೆ ಮಾಡಿದರೆ ಕೂದಲು ಉದುರುವ ಸಮಸ್ಯೆ ಉಂಟಾಗುವುದಿಲ್ಲ.



Click it and Unblock the Notifications
