Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸೊಂಪಾದ ಕೂದಲಿನ ಚೆಲುವು ಮರಳಿ ಪಡೆಯಬೇಕೆ?
ಚಿಕ್ಕದಿರುವಾಗ ಅಮ್ಮ ನಮ್ಮ ಕೂದಲನ್ನು ಆರೈಕೆ ಮಾಡುತ್ತಿದ್ದ ವಿಧಾನವನ್ನು ನೆನೆಪಿಸಿಕೊಳ್ಳಿ. ತಲೆಸ್ನಾನ ಮಾಡಿಸಿ ಆವಿಕೊಟ್ಟು ತಲೆಕೂದಲು ಒಣಗಿಸುತ್ತಿದ್ದಳು. ಆದರೆ ಬೆಳೆಯುತ್ತಿದ್ದ ಹಾಗೆ ಸ್ಕೂಲ್ ಟೈಮ್ ನಲ್ಲಿ ಅಮ್ಮನ ಆರೈಕೆಯಿಂದ ಉದ್ದವಾಗಿದ್ದ ಜಡೆಯನ್ನು ಫ್ಯಾಷನ್, ಕೂದಲು ಉದುರುವ ಸಮಸ್ಯೆ ಹೀಗೆ ಯಾವುದೋ ಒಂದು ಕಾರಣದಿಂದ ಕತ್ತರಿಸಿ ಬಿಡುತ್ತೇವೆ.

ನಂತರ ಸೊಂಪಾದ ಕೂದಲಿಗಾಗಿ ಹಂಬಲಿಸುತ್ತೇವೆ. ನೀವು ಸ್ವಲ್ಪ ಟ್ರೈ ಮಾಡಿದರೆ, ಅಂದರೆ ಕೂದಲಿಗೆ ಸ್ಟೀಮ್ ಕೊಟ್ಟರೆ ನಿಮ್ಮ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡಬಹುದು. ಸ್ಟೀಮ್ ಕೊಟ್ಟರೆ ಕೂದಲು ಬೆಳೆಯಲು ಹೇಗೆ ಸಹಕಾರಿ ಎಂದು ತಿಳಿಯಲು ಮುಂದೆ ಓದಿ.
ಕೂದಲಿಗೆ ಸ್ಟೀಮ್ ಕೊಡುವುದು ಹೇಗೆ: ಸಾಂಬ್ರಾಣಿ ಹೊಗೆಯಿಂದ ತಲೆಕೂದಲು ಒಣಗಿಸಿದರೆ ಒಳ್ಳೆಯದು . ಇಲ್ಲದಿದ್ದರೆ ಎಣ್ಣೆ ಹಾಕಿ ಟವಲ್ ಅನ್ನು ಬಿಸಿ ನೀರಿನಲ್ಲಿ ಅದ್ದಿ ತಲೆಗೆ ಸುತ್ತಿದರೆ ತಲೆಕೂದಲು ಸೊಂಪಾಗಿ ಬೆಳೆಯಲು ತುಂಬಾ ಸಹಕಾರಿಯಾಗಿದೆ.
ಈ ರೀತಿ ಮಾಡುವುದರಿಂದ ದೊರೆಯುವ ಪ್ರಯೋಜನಗಳು:
1. ಕೂದಲಿನ ಬುಡದಲ್ಲಿರುವ ರಂಧ್ರಗಳು ಉಸಿರಾಡಲು ಸಹಕಾರಿ ಮಾಡುತ್ತದೆ. ಆವಿಕೊಟ್ಟಾಗ ರಂಧ್ರಗಳು ಓಪನ್ ಆಗಿ ಚೆನ್ನಾಗಿ ಉಸಿರಾಡುತ್ತವೆ. ಮೊದಮೊದಲು ಈ ರೀತಿ ಮಾಡಿದಾಗ ಕೂದಲು ಉದುರಿದರೂ ನಂತರ ಕೂದಲು ದಪ್ಪವಾಗಿ ಚೆನ್ನಾಗಿ ಬೆಳೆಯುವುದು.
2. ತಲೆಬುಡವನ್ನು ಕ್ಲೆನ್ಸ್ ಮಾಡಲು ಸಹಕಾರಿಯಾಗಿದೆ. ಈ ರೀತಿ ಸ್ಟೀಮ್ ಕೊಟ್ಟರೆ ಕೂದಲಿನ ಬುಡದಲ್ಲಿ ಕೊಳೆಯಿದ್ದರೆ ಸುಲಭವಾಗಿ ಹೋಗಲಾಡಿಸಬಹುದು. ಇದರಿಂದ ಕೂದಲಿನ ಆರೋಗ್ಯ ಹೆಚ್ಚಾಗುವುದು.
3. ಕೂದಲು ಸೊಂಪಾಗಿ ಬೆಳೆಯಲು ವಾರದಲ್ಲಿ 3 ಬಾರಿಯಾದರೂ ಸ್ಟೀಮ್ ಕೊಡುವುದು ಒಳ್ಳೆಯದು.
ಈ ರೀತಿ ಮಾಡಿ ಸ್ಕೂಲ್ ಟೈಮ್ ನಲ್ಲಿ ಇದ್ದ ಸೊಂಪಾದ ಕೂದಲನ್ನು ಮರಳಿ ಪಡೆಯಬಹುದು.



Click it and Unblock the Notifications
