Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕೂದಲಿಗೆ ಬಿಸಿ ಎಣ್ಣೆ ಮಸಾಜ್ ನಿಂದ 7 ಲಾಭ
ನೀವು ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡುವಾಗ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಅದರಿಂದ ಮಸಾಜ್ ಮಾಡಿ. ಈ ರೀತಿ ಮಾಡಿದರೆ ಕೂದಲಿಗೆ ಹಾಗೇ ಎಣ್ಣೆ ಹಚ್ಚುವುದಕ್ಕಿಂತ ತುಂಬಾ ಒಳ್ಳೆಯದು. ಬಾದಾಮಿ ಎಣ್ಣೆ, ತೆಂಗಿನೆಣ್ಣೆ, ಸಾಸಿವೆಯೆಣ್ಣೆ, ಹರಳಣ್ಣೆ ಈ ಎಣ್ಣೆಗಳನ್ನು ಬಿಸಿ ಮಾಡಿ ಬಳಸಿದರೆ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು.

1. ಕೂದಲಿನ ಬುಡವನ್ನು ಆರೈಕೆ ಮಾಡುತ್ತದೆ: ಬಿಸಿ ಎಣ್ಣೆ ಹಾಕಿದಾಗ ಕೂದಲಿನ ಬುಡ ಓಪನ್ ಆಗುವುದು, ಇದರಿಂದಾಗಿ ಕೂದಲಿನ ಬುಡಕ್ಕೆ ಹೆಚ್ಚಿನ ಆಮ್ಲಜನಕ ಪೂರೈಕೆಯಾಗುತ್ತದೆ. ಈ ರೀತಿ ಕೂದಲಿನ ಆರೈಕೆ ಮಾಡುತ್ತದೆ.
2. ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ: ಬಿಸಿ ಎಣ್ಣೆ ಹಚ್ಚಿ ಮಸಾಜ್ ಮಾಡಿದರೆ ಕೂದಲು ಹೊಳಪನ್ನು ಪಡೆಯುತ್ತದೆ. ಒರಟು ಕೂದಲಿರುವವರು ಈ ವಿಧಾನವನ್ನು ಪಾಲಿಸಿದರೆ ಮೃದುವಾದ ಕೂದಲನ್ನು ಪಡೆಯಬಹುದು.
3. ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ: ಕೂದಲಿಗೆ ಎಣ್ಣೆಯಂಶ ಹಾಗೂ ಆಮ್ಲಜನಕ ಸರಿಯಾದ ರೀತಿಯಲ್ಲಿ ಪೂರೈಕೆಯಾಗುವುದರಿಂದ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ.
4. ತಲೆಹೊಟ್ಟನ್ನು ಹೋಗಲಾಡಿಸುತ್ತದೆ: ಬಿಸಿ ಎಣ್ಣೆಯಿಂದ ಮಸಾಜ್ ಮಾಡಿದರೆ ತಲೆಹೊಟ್ಟನ್ನು ಹೋಗಲಾಡಿಸಬಹುದು ಅಲ್ಲದೆ ತಲೆಹೊಟ್ಟು ಮರುಕಳಿಸುವುದಿಲ್ಲ.
5. ಕೂದಲು ಬಲವಾಗುತ್ತದೆ: ಬಿಸಿ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಕೂದಲಿನ ಬುಡದ ಆರೈಕೆ ಆಗುವುದರಿದ ಕೂದಲು ಕೂಡ ಬಲವಾಗುತ್ತದೆ. ಹಾಗೂ ಕೂದಲು ದಪ್ಪವಾಗಿ ಬೆಳೆಯುತ್ತದೆ.
6. ಕೂದಲು ಕವಲೊಡೆಯುವುದಿಲ್ಲ: ಬಿಸಿ ಎಣ್ಣೆಯಿಂದ ಮಸಾಜ್ ಅನ್ನು ವಾರದಲ್ಲಿ ಎರಡು ಬಾರಿ ಮಾಡುತ್ತಾ ಬನ್ನಿ, ಕೂದಲು ಕವಲೊಡೆಯುವ ಸಮಸ್ಯೆ ಉಂಟಾಗುವುದಿಲ್ಲ.
7. ಕೂದಲಿನಲ್ಲಿರುವ ರಾಸಾಯನಿಕಗಳನ್ನು ಹೋಗಲಾಡಿಸುತ್ತೆ: ಗಾಡಿಯಲ್ಲಿ ಹೋಗುವಾಗ, ಅಧಿಕ ದೂಳಿರುವ ಪ್ರದೇಶದಲ್ಲಿ ಓಡಾಡುವಾಗ ದೂಳು ಕೂದಲಿಗೆ ತಾಗಿ ಕೂದಲು ಹಾಳಾಗುವುದು. ಬಿಸಿ ಎಣ್ಣೆ ಹಚ್ಚಿದರೆ ತಲೆಯಲ್ಲಿರುವ ದೂಳು ಹಾಗೂ ರಾಸಾಯನಿಕಗಳನ್ನು ಹೋಗಲಾಡಿಸುತ್ತದೆ ಇದರಿಂದ ಆರೋಗ್ಯಕರ ಕೂದಲನ್ನು ಪಡೆಯಬಹುದು.



Click it and Unblock the Notifications
