Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕೂದಲು ಉದುರಲು ನಾವೇ ಮಾಡುವ 6 ತಪ್ಪುಗಳು
ದಪ್ಪವಾದ, ಆಕರ್ಷಕವಾದ ಕೂದಲು ಆರೋಗ್ಯದ ಸಂಕೇತ. ಆದರೆ ಕೂದಲು ಉದುರುವುದು ಹೆಚ್ಚಿನವರ ಸಮಸ್ಯೆಯಾಗಿದೆ. ದೇಹದಲ್ಲಿ ಪೌಷ್ಠಿಕ ಆಹಾರದ ಕೊರತೆ, ಖಾಯಿಲೆ, ಕೂದಲಿನ ಆರೈಕೆ ಸರಿಯಾಗಿ ಮಾಡದಿರುವುದು, ಕ್ಲೋರಿನ್ ಅಂಶವಿರುವ ನೀರನ್ನು ತಲೆ ಸ್ನಾನಕ್ಕೆ ಬಳಸುವುದು ಇವೆಲ್ಲಾ ಕೂದಲು ಉದುರಲು ಮುಖ್ಯ ಕಾರಣಗಳಾಗಿವೆ. ಆದರೆ ಇವಷ್ಟೇ ಅಲ್ಲದೆ ನಾವು ಮಾಡುವ ಕೆಲ ತಪ್ಪುಗಳು ಕೂದಲು ಉದುರುವ ಸಮಸ್ಯೆ ಹೆಚ್ಚಲು ಮುಖ್ಯ ಕಾರಣಗಳಾಗಿವೆ. ಆ ತಪ್ಪುಗಳು ಯಾವುವು ಎಂದು ತಿಳಿಯಲು ಮುಂದೆ ಓದಿ.

1. ಬಿಸಿ ನೀರಿನಲ್ಲಿ ತಲೆ ಸ್ನಾನ: ಬಿಸಿ ನೀರು ಬದಲು ತಣ್ಣೀರು ಬಳಸಿ ಸ್ನಾನ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೂದಲಿನ ಆರೈಕೆಗೆ ತಣ್ಣೀರಿನಿಂದಲೇ ತಲೆ ತೊಳೆಯಬೇಕು. ಆದರೆ ತಣ್ಣೀರು ಸ್ನಾನ ಮಾಡಿದರೆ ಶೀತವಾಗುತ್ತದೆ ಎಂದು ಹೆಚ್ಚಿನವರು ಬಿಸಿ ನೀರಿನಲ್ಲಿ ತಲೆ ತೊಳೆಯುತ್ತಾರೆ. ಬಿಸಿ ನೀರು ತಲೆಗೆ ಸುರಿಯುವುದರಿಂದ ಕೂದಲಿಗೆ ಹಾನಿಯಾಗುವುದು.
2. ಹೆಲ್ಮೆಟ್: ಹೆಲ್ಮೆಟ್ ಧರಿಸಿದರೆ ಪ್ರಾಣ ಉಳಿಸಬಹುದು, ಆದರೆ ಕೂದಲು ಮಾತ್ರ ಇಲ್ಲದಾಗುವುದು. ಕೂದಲಿಗಿಂತ ಪ್ರಾಣ ಮುಖ್ಯ ಆದ್ದರಿಂದ ಹೆಲ್ಮೆಟ್ ಧರಿಸಲೇ ಬೇಕು. ಹೀಗೆ ಹೆಲ್ಮೆಟ್ ಧರಿಸಿದಾಗ ಕೂದಲನ್ನು ರಕ್ಷಿಸಲು ಮೊದಲು ತಲೆಗೆ ಒಂದು ದೊಡ್ಡ ಕರ್ಚೀಪ್ ಕಟ್ಟಿ ನಂತರ ಹೆಲ್ಮೆಟ್ ಧರಿಸಿದರೆ ಕೂದಲು ಉದುರುವುದಿಲ್ಲ.
3. ಕೂದಲನ್ನು ಬಲವಾಗಿ ಬಾಚುವುದು: ಕೂದಲನ್ನು ಬಾಚುವಾಗ ಸರಿಯಾದ ರೀತಿಯ ಬಾಚಣಿಕೆ ಬಳಸಬೇಕು. ಅಲ್ಲದೆ ಅದರ ಸಿಕ್ಕನ್ನು ನಿಧಾನಕ್ಕೆ ಬಿಡಿಸಬೇಕು. ಬಾಚಣಿಕೆಯಿಂದ ಕೂದಲನ್ನು ಬಲವಾಗಿ ಎಳೆದರೆ ಕೂದಲು ಕಿತ್ತು ಬರುತ್ತದೆ. ಆದ್ದರಿಂದ ಅವಸರವಾಗಿ ಕೂದಲನ್ನು ಬಾಚದೇ ಸಿಕ್ಕನ್ನು ಸಾವಧಾನವಾಗಿ ಬಿಡಿಸಿ ನಂತರ ತಲೆ ಕಟ್ಟಬೇಕು.
4. ಒದ್ದೆ ತಲೆ ಬಾಚುವುದು: ಒದ್ದೆ ತಲೆ ಯಾವುದೇ ಕಾರಣಕ್ಕೂ ಬಾಚಬಾರದು. ಹೀಗೆ ಬಾಚಿದರೆ ಕೂದಲಿನ ಬುಡಕ್ಕೆ ಹಾನಿ ಉಂಟಾಗಿ ಅಧಿಕ ಕೂದಲು ಉದುರಲಾರಂಭಿಸುತ್ತದೆ. ಕೂದಲನ್ನು ಸಂಪೂರ್ಣವಾಗಿ ಒಣಗಿಸಿದ ನಂತರವೇ ತಲೆ ಬಾಚಬೇಕು. ಆದರೆ ಎಣ್ಣೆ ಹಚ್ಚಿ ತಲೆ ಬಾಚುವುದು ಒಳ್ಳೆಯದು. ಎಣ್ಣೆ ಹಚ್ಚಿ ತಲೆ ಬಾಚಿದರೆ ಕೂದಲಿಗೆ ಮಸಾಜ್ ಮಾಡಿದ ರೀತಿಯಾಗುತ್ತದೆ.
5. ಕೂದಲನ್ನು ಬಿಗಿಯಾಗಿ ಕಟ್ಟುವುದು: ಕೂದಲನ್ನು ಬಿಗಿಯಾಗಿ ಕಟ್ಟಿದರೆ, ಕೂದಲು ಉದ್ದ ಬರುತ್ತದೆ ಅನ್ನುವುದು ಕೆಲವರ ತಪ್ಪು ಅಭಿಪ್ರಾಯ. ಆದರೆ ಕೂದಲು ಆರೋಗ್ಯಕರವಾಗಿರಬೇಕೆಂದರೆ ಕೂದಲನ್ನು ಸಡಿಲವಾಗಿ ಕಟ್ಟಬೇಕೆ ಹೊರತು ಬಿಗಿಯಾಗಿಲ್ಲ. ತುಂಬಾ ಬಿಗಿಯಾಗಿ ಕೂದಲನ್ನು ಕಟ್ಟಿದರೆ ಕೂದಲು ತುಂಡಾಗುವ ಸಮಸ್ಯೆ ಕಂಡು ಬರುತ್ತದೆ.
6. ತಲೆ ತುಂಬಾ ಎಣ್ಣೆ ಹಾಕುವುದು: ಕೂದಲಿನ ಆರೈಕೆಗೆ ಎಣ್ಣೆ ಹಾಕಬೇಕು. ಹಾಗಂತ ದಿನದ 24 ಗಂಟೆಯೂ ತಲೆ ತುಂಬಾ ಎಣ್ಣೆ ಸುರಿದುಕೊಂಡು ಇರಬಾರದು. ತಲೆ ತುಂಬಾ ಎಣ್ಣೆ ಹಾಕಿದರೆ ಕೂದಲಿನ ಬುಡದ ರಂಧ್ರಗಳಿಗೆ ಉಸಿರಾಡುವುದು ಕಷ್ಟವಾಗುವುದು.



Click it and Unblock the Notifications
