Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತಲೆಹೊಟ್ಟು ನಿವಾರಣೆಗೆ 6 ನೈಸರ್ಗಿಕ ವಿಧಾನ

ಈ ತಲೆ ಹೊಟ್ಟು ಸಮಸ್ಯೆಯ ಬಗ್ಗೆ ತಲೆ ಕೆಡಿಸಿಕೊಂಡು ಕೂರುವ ಬದಲು ಈ ಕೆಳಗಿನ ಮನೆಮದ್ದು ಬಳಸಿದರೆ ಸಾಕು, ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುವುದು:
1. ಮೆಂತೆ ಬೀಜ: ಮೆಂತೆಯ ಬೀಜವನ್ನು ಅರೆದು ಪೇಸ್ಟ್ ರೀತಿ ಮಾಡಿ ತಲೆಕೂದಲಿಗೆ ಹಚ್ಚಿದರೆ ತಲೆ ಹೊಟ್ಟು ಕಡಿಮೆಯಾಗುವುದು. ಕೊಬ್ಬರಿಯೆಣ್ಣೆಯಲ್ಲಿ ಮೆಂತೆಯ ಬೀಜಗಳನ್ನು ನೆನೆಯಿಸಿ ಅದನ್ನು ತಲೆಗೆ ಬಳಸಿದರೆ ಅದರ ಔಷಧೀಯ ಗುಣದಿಂದ ತಲೆಗೆ ತಂಪು ಕೊಡುವುದು.
2. ಮೊಟ್ಟೆಯ ಬಿಳಿ: ಮೊಟ್ಟೆಯ ಬಿಳಿಗೆ ಸ್ವಲ್ಪ ನಿಂಬೆ ರಸ ಹಾಕಿ ಅದನ್ನು ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯಬೇಕು. ಈ ರೀತಿ ಮಾಡಿದರೆ ಕೂದಲು ಆಕರ್ಷಕವಾಗಿ, ಸೊಂಪಾಗಿಯೂ ಬೆಳೆಯುತ್ತದೆ.
3. ಅಡುಡೆ ಸೋಡಾ: ಒಂದು ಚಮಚ ಅಡುಗೆ ಸೋಡಾವನ್ನು ಮೊಸರಿನಲ್ಲಿ ಹಾಕಿ ತಲೆಗೆ ಹಚ್ಚಿದರೆ ತಲೆಯಲ್ಲಿ ತುರಿಕೆ ಕಡಿಮೆಯಾಗುವುದು.
4. ನಿಂಬೆ ಮತ್ತು ಮೊಸರು: ಉದ್ಯೋಗಕ್ಕೆ ಹೋಗುವ ಪುರುಷರು ತಮ್ಮ ಕೂದಲಿನ ಬಗ್ಗೆ ಸಾಕಷ್ಟು ನಿಗಾ ವಹಿಸಲು ಸಾಧ್ಯವಿಲ್ಲ. ಆದ್ದರಿಂದ ಮುಕ್ಕಾಲು ಕಪ್ ಮೊಸರಿಗೆ ನಿಂಬೆರಸ ಹಿಂಡಿ ತಲೆಗೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ಶಾಂಪೂವಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು. ಇದು ಅತಿ ಸುಲಭವಾದ ನೈಸರ್ಗಿಕ ವಿಧಾನ.
4. ಎಣ್ಣೆ ಮತ್ತು ಬೆಳ್ಳುಳ್ಳಿ: ನಿಮಗೆ ಎಣ್ಣೆ ಹಚ್ಚಲು ಸಮಯವಿಲ್ಲವೆಂದು ಎಣ್ಣೆ ಹಚ್ಚುವುದನ್ನು ನಿಲ್ಲಿಸಬೇಡಿ. ಇದು ಮುಂದೆ ಕೆಟ್ಟ ಪರಿಣಾಮ ಬೀರಬಹುದು. ಕೊಬ್ಬರಿ ಎಣ್ಣೆಯೊಂದಿಗೆ 3-4 ಬೆಳ್ಳುಳ್ಳಿ ಎಸಳನ್ನು ಸೇರಿಸಿ ಬಿಸಿ ಮಾಡಿ ಹಚ್ಚಿಕೊಳ್ಳಬೇಕು. ತಲೆಯ ಬುಡಕ್ಕೆ ಚೆನ್ನಾಗಿ ಮಸಾಜ್ ಮಾಡಿ ಮೂರು ಗಂಟೆ ನಂತರ ಸ್ನಾನ ಮಾಡಿದರೆ ತಲೆಯ ಚರ್ಮ ಒಣಗಿ ತಲೆಹೊಟ್ಟು ಉಂಟಾಗುವುದನ್ನು ನಿಲ್ಲಿಸುತ್ತದೆ.
6. ಶುಂಠಿ ಮತ್ತು ಆಲಿವ್ ಎಣ್ಣೆ: ಈ ಮೇಲಿನ ಸಲಹೆಗಳನ್ನು ಪಾಲಿಸಲು ಸಮಯವಿಲ್ಲ ಎಂದಾದರೆ ತಲೆಹೊಟ್ಟು ನಿವಾರಿಸಲು ಸುಲಭ ವಿಧಾನವೊಂದು ಇಲ್ಲಿದೆ. ಶುಂಠಿಯನ್ನು ಆಲಿವ್ ಎಣ್ಣೆಗೆ ಸೇರಿಸಿ ಬಿಸಿ ಮಾಡಿ ಸ್ನಾನಕ್ಕೆ ಹೋಗುವ ಕೆಲವು ನಿಮಿಷಗಳ ಮುನ್ನ ತಲೆಗೆ ಹಚ್ಚಿ ಮಸಾಜ್ ಮಾಡಿಕೊಂಡು 5 ನಿಮಿಷದ ನಂತರ ಸ್ನಾನ ಮಾಡಿದರೆ ಬೇಗನೆ ತಲೆಹೊಟ್ಟು ತೊಲಗುತ್ತದೆ.



Click it and Unblock the Notifications
