Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪುರುಷರ ಸೌಂದರ್ಯ ಹೆಚ್ಚಿಸುವ ಹೇರ್ ಕಲರ್

1. ನೆರೆ ಕೂದಲು ಮರೆ ಮಾಚಬಹುದು
2. ಇದು ಫ್ಯಾಷನ್ ಲುಕ್
ಪುರುಷರು ತಮ್ಮ ಕೂದಲಿಗೆ ಬಣ್ಣ ಹಚ್ಚುವಾಗ ಸರಿಯಾದ ಬಣ್ಣ ಆಯ್ಕೆ ಮಾಡದಿದ್ದರೆ ತಲೆಕೂದಲಿನ ಬಣ್ಣನದಿಂದ ಆಕರ್ಷಕವಾಗಿ ಕಾಣುವ ಬದಲು ವಿಚಿತ್ರವಾಗಿ ಕಾಣುವುದು. ಈ ರೀತಿ ತಲೆಗೆ ಬಣ್ಣ ಹಚ್ಚುವಾಗ 'ಪರ್ಮನೆಂಟ್ ಕಲರ್' ಮಾಡಿಸದಿರುವುದು ಒಳ್ಳೆಯದು. ಏಕೆಂದರೆ ಇದರಲ್ಲಿ ಅಮೋನಿಯಂ ಅಂಶ ಹೆಚ್ಚಾಗಿ ಇರುವುದರಿಂದ ಕೂದಲಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚು.
ಹೇರ್ ಕಲರ್ ಮಾಡಿಸುವ ಪುರುಷರಾಗಿ ಕೆಲ ಸಲಹೆ ಇಲ್ಲಿದೆ ನೋಡಿ.
1. ಚಿಕ್ಕದಾಗಿ ಕತ್ತರಿಸಿದ ಕೂದಲಿಗೆ: ಬೇಸಿಗೆಯಲ್ಲಿ ತುಂಬಾ ಬೆವರುವುದರಿಂದ ತುಂಬಾ ಕೂದಲು ಇಟ್ಟುಕೊಳ್ಳಲು ಹೆಚ್ಚಿನ ಪುರುಷರು ಇಷ್ಟಪಡುವುದಿಲ್ಲ. ಕೂದಲನ್ನು ತುಂಬಾ ಚಿಕ್ಕದಾಗಿ ಕತ್ತರಿಸುತ್ತಾರೆ. ಇಂತಹವರು ಕೂದಲನ್ನು ಕಲರ್ ಮಾಡಬೇಕು ಎಂದು ಬಯಸುವುದಾದರೆ ತೆಳು ಕಂದು ಬಣ್ಣ ಮಾಡಿಸಿಕೊಳ್ಳಬಹುದು.
2. ನೇರ ಕೂದಲು ಹೊಂದಿರುವವರು: ನೇರ ಕೂದಲು ಹೊಂದಿರುವವರು ಕಪ್ಪು ಬಣ್ಣ ಅಥವಾ ಕೂದಲಿಗೆ ಮೆಹಂದಿ ಹಚ್ಚಿದಾಗ ಬರುವ ಕೆಂಪು ಬಣ್ಣ ಬರುವಂತಹ ಕೆಂಪು ಬಣ್ಣ ಕೂಡ ಆಕರ್ಷಕವಾಗಿ ಕಾಣುತ್ತದೆ.
3. ಸ್ಪೈಕ್ ಹೇರ್: ಸ್ಪೈಕ್ ಹೇರ್ ಹೆಚ್ಚಿನ ಹುಡುಗರು ಇಷ್ಟಪಡುವ ಹೇರ್ ಸ್ಟೈಲ್ ಆಗಿದೆ. ಸ್ಪೈಕ್ ಹೇರ್ ಇರುವವರಿಗೆ ಬ್ರೌನ್ ಹೇರ್ ಕಲರ್ ಚೆನ್ನಾಗಿ ಕಾಣುತ್ತದೆ.
ಕಲರ್ ಹೇರ್ ಗೆ (ಬಣ್ಣದ ಕೂದಲು) ಹೊಂದಿಕೆಯಾಗುವ ಹೇರ್ ಕಂಡೀಷನರ್ ಬಳಸಿ ಕೂದಲಿನ ಆರೈಕೆ ಮಾಡುವುದು ಒಳ್ಳೆಯದು.



Click it and Unblock the Notifications
