Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬಕ್ಕ ತಲೆ ಸಮಸ್ಯೆಗೆ ಪರಿಹಾರ ಈ ಮನೆಮದ್ದಿನಲ್ಲಿದೆ

ಬಕ್ಕತಲೆಗೆ ಕಾರಣಗಳು:
* ಹಾರ್ಮೋನ್ ಗಳಲ್ಲಿ ವ್ಯತ್ಯಾಸ ಉಂಟಾದಾಗ
* ಅನುವಂಶೀಯ
* ಒತ್ತಡ ಮತ್ತು ಕಾಯಿಲೆ
* ವಯಸ್ಸಾದಾಗ
* ಅತಿ ಹೆಚ್ಚಿನ ಶಾಖ ಮತ್ತು ಉಷ್ಣತೆ
* ಥೈರಾಯಿಡ್, ರಕ್ತಹೀನತೆ, ಶಸ್ತ್ರ ಚಿಕಿತ್ಸೆ
* ಕ್ಯಾನ್ಸರ್ ಗೆ ಚಿಕಿತ್ಸೆ ನೀಡಿದಾಗ
ಈ ರೀತಿಯ ಬಕ್ಕ ತಲೆಗೆ ಟ್ರಾನ್ಸ್ ಪ್ಲಾಂಟ್ ನಂತಹ ದುಬಾರಿ ಚಿಕಿತ್ಸೆ ಇದೆ. ಆದರೆ ಇದಕ್ಕೆ ತಗುಲುವ ವೆಚ್ಚ ಮಾತ್ರ ದುಬಾರಿ. ಈ ರೀತಿಯ ಚಿಕಿತ್ಸೆಯು ವ್ಯಕ್ತಿಯ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಕೂಡ ಹೆಚ್ಚು. ಆದರೆ ಈ ಕೆಳಗಿನ ಕೆಲವು ಸರಳವಾದ ಉಪಾಯಗಳಿಂದ ಬಕ್ಕ ತಲೆಯನ್ನು ನಿವಾರಿಸಬಹುದು. (ಈ ಸಲಹೆ ಸಣ್ಣ ಪ್ರಾಯದಲ್ಲಿ ಬಕ್ಕತಲೆ ಉಂಟಾದವರೆಗೆ ಹೆಚ್ಚು ಪರಿಣಾಮಕಾರಿ)
1. ಕಾಫಿ: ಕಾಫಿಪುಡಿಗೆ ಸ್ವಲ್ಪ ನೀರು ಹಾಕಿ ಪೇಸ್ಟ್ ರೀತಿ ಮಾಡಿ ಅದನ್ನು ತಲೆಗೆ ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆಯುವುದರಿಂದ ಕೂದಲು ಉದುರಿ ಬಕ್ಕ ತಲೆ ಉಂಟಾಗುವುದನ್ನು ತಡೆಗಟ್ಟಬಹುದು. ಕಾಫಿಯಲ್ಲಿರುವ ಕೆಫಿನ್ ಬಕ್ಕತಲೆಯಲ್ಲಿ ಕೂದಲು ಬೆಳೆಯಲು ಸಹಾಯಕವಾಗಿದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.
2. ಕೊತ್ತಂಬರಿ ಜ್ಯೂಸ್: ಕೊತ್ತಂಬರಿ ಸೊಪ್ಪಿನ ರಸವನ್ನು ಬಕ್ಕತಲೆಯ ಮೇಲೆ ಹಚ್ಚಿದರೆ ಕೂದಲು ಮರು ಉತ್ಪತ್ತಿಯಾಗುವುದು.
3. ಸಾಸಿವೆ ಎಣ್ಣೆ ಮತ್ತು ಮೆಹಂದಿ: ಮೆಹಂದಿ ಎಲೆಯನ್ನು ಸಾಸಿವೆ ಎಣ್ಣೆ ಜೊತೆ ಹಾಕಿ ಎಣ್ಣೆಯನ್ನು ಕುದಿಸಬೇಕು. ಈ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಕೂದಲು ಉದುರುವುದನ್ನು ತಡೆಯಬಹುದು.
4. ಮೆಂತೆ: ಮೆಂತೆಯನ್ನು ಅರೆದು ಸ್ನಾನ ಮಾಡುವ ಅರ್ಧಗಂಟೆ ಮುಂಚೆ ಹಚ್ಚಬೇಕು. ಈ ರೀತಿ ಮಾಡಿದರೆ ಕೂದಲು ಉದುರುವುದನ್ನು ತಡೆಗಟ್ಟಬಹುದು.
5. ಆಲೀವ್ ಎಣ್ಣೆ, ಜೇನು ಮತ್ತು ಚಕ್ಕೆ: ಆಲೀವ್ ಎಣ್ಣೆ, ಚಕ್ಕೆಪುಡಿ ಮತ್ತು ಜೇನು ಮಿಶ್ರ ಮಾಡಿ ಸ್ನಾನ ಮಾಡುವ ಮೊದಲು ಬಕ್ಕತಲೆಗೆ ಹಚ್ಚಿದರೆ ಕ್ರಮೇಣ ಕೂದಲು ಬರುತ್ತದೆ.
6. ಕರಿಮೆಣಸು ಮತ್ತು ಮೊಸರು : ಕರಿಮೆಣಸಿನ ಪುಡಿಯನ್ನು ಮೊಸರಿನ ಜೊತೆ ಮಿಶ್ರ ಮಾಡಿ ವಾರಕ್ಕೊಮ್ಮೆ ತಲೆಗೆ ಹಚ್ಚಿದರೆ ಕೂದಲು ಉದುರುವುದಿಲ್ಲ.
7. ಹರ್ಬ್ಸ್: ಒಣ ಬ್ರಿಂಗಾರಾಜ, ನೆಲ್ಲಿಕಾಯಿ, ಹರಿಟಕಿ, ವಿಭಿಟಕಿ ಮಿಶ್ರ ಮಾಡಿ ಪೇಸ್ಟ್ ರೀತಿಯಲ್ಲಿ ಮಾಡಿ ಹಚ್ಚಿದರೆ ಹೊಸ ಕೂದಲು ಉತ್ಪತ್ತಿಯಾಗುತ್ತದೆ (ಆರ್ಯುವೇದ ಅಂಗಡಿಗಳಲ್ಲಿ ದೊರೆಯುತ್ತದೆ).



Click it and Unblock the Notifications
