Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಪ್ರತಿದಿನವೂ ತಲೆಗೆ ಸ್ನಾನ ಮಾಡ್ತಿರಾ ಮೇಡಂ?

ಉದಾಹರಣೆಗೆ ಒಬ್ಬ ಮಾಡಲ್ ಆದವರು ಕ್ಯಾಮೆರಾ ಎದುರಿಸಬೇಕಾಗಿ ಬರುವುದರಿಂದ ದಿನವೂ ತಲೆ ತೊಳೆಯಬೇಕು. ಆದರೆ ಒಬ್ಬ ಸ್ಕೂಲ್ ಟೀಚರ್ ಗೆ ಕ್ಯಾಮೆರಾ ಎದುರಿಸ ಬೇಕಾಗಿಲ್ಲ. ಇಲ್ಲಿದೆ ಕೆಲ ಸಲಹೆ ಅವುಗಳು ನಿಮ್ಮ ಕೂದಲನ್ನು ಹೇಗೆ ಪೋಷಿಸಬಹುದು ಎಂದು ಮಾರ್ಗದರ್ಶನ ನೀಡುತ್ತದೆ.
1. ಎಣ್ಣೆ ಕೂದಲು: ಕೆಲವರ ಕೂದಲು ಎಣ್ಣೆ ಹಾಕದಿದ್ದರೂ ಎಣ್ಣೆಣ್ಣೆಯಾಗಿ ಕಾಣುತ್ತದೆ. ಅಂತಹ ಕೂದಲಿನವರು ಪ್ರತಿ ದಿನ ತಲೆ ತೊಳೆಯಬೇಕು. ನಿಮ್ಮ ಕೂದಲು ಎಣ್ಣೆ ಕೂದಲು ಹೌದಾ ಅಂತ ತಿಳಿಯಲು ಬೆಳಗ್ಗೆ ತಲೆ ತೊಳೆದು ರಾತ್ರಿ ತಲೆಯ ಬುಡವನ್ನು ಟಿಶ್ಯೂ ಪೇಪರಿನಿಂದ ಉಜ್ಜಿದಾಗ ಟಿಶ್ಯೂ ಪೇಪರಿನಲ್ಲಿ ಎಣ್ಣೆಯಂಶ ಕಂಡು ಬಂದರೆ ನಿಮ್ಮದು ಎಣ್ಣೆ ಕೂದಲು.
2. ಒಣ ಕೂದಲು: ತಲೆ ಹೊಟ್ಟು ಕೂದಲಿನ ಬುಡ ಒಣಗುವುದರಿಂದ ಉಟಾಗುತ್ತದೆ. ಈ ರೀತಿ ಕೂದಲಿನ ಬುಡ ಒಣಗುತ್ತಿದ್ದರೆ ಎಣ್ಣೆಯನ್ನು ಬಿಸಿ ಮಾಡಿ ಅದು ಹದ ಬಿಸಿ ಇರುವಾಗ ತಲೆಗೆ ಹಚ್ಚಿ ನಂತರ ತಲೆಯನ್ನು ಚೆನ್ನಾಗಿ ತೊಳೆಯಬೇಕು. ದಿನಾ ತಲೆಗೆ ಎಣ್ಣೆ ಹಾಕಲು ಸಾಧ್ಯವಾಗದಿದ್ದರೆ ಹಾಗೆಯೆ ತಲೆಯನ್ನು ತೊಳೆಯಬೇಕು. ಈ ರೀತಿ ಮಾಡಿದರೆ ತಲೆ ತುರಿಕೆ ಕಡಿಮೆಯಾಗುತ್ತದೆ.
3. ಸತ್ವವಿಲ್ಲದ ಕೂದಲು: ಕೆಲ ಕೂದಲು ನೋಡಿದಾಗ ಯಾವುದೇ ಕಳೆ ಹೊಂದಿರುವುದಿಲ್ಲ. ಅಂತಹ ಕೂದಲಿಗೆ ದಿನವೂ ಎಣ್ಣೆ ಹಾಕಿ, ಶ್ಯಾಂಪೂ ತಿಕ್ಕಿ ತೊಳೆದರೆ ಕೂದಲು ಆರೋಗ್ಯಕರವಾಗುವುದು.
4. ಸೊಂಪಾದ ಕೂದಲು: ಕೂದಲು ದಪ್ಪ ಮತ್ತು ಹೊಳಪಿನಿಂದ ಆಕರ್ಷಕವಾಗಿದ್ದರೆ 2 ದಿನಗಳಿಗೊಮ್ಮೆ ತಲೆ ತೊಳೆದರೆ ಸಾಕು. ಇಲ್ಲದಿದರೆ ಪ್ರತಿ ನಿತ್ಯ ತಲೆ ತೊಳೆಯಬೇಕು.
5. ಕೂದಲಿನ ವಿನ್ಯಾಸ: ಕೂದಲನ್ನು ಗಾಳಿಗೆ ಸುಮ್ಮನೆ ಹಾರಲು ಬಿಡುವವರಾದರೆ ದಿನವೂ ತಲೆ ತೊಳೆಯಬಕು. ಜಡೆ ಹಾಕಿ ಬಿಗಿದು ಕಟ್ಟುವವರು 2 ದಿನಕ್ಕೊಮ್ಮೆ ತೊಳೆದರೆ ಸಾಕು.
6. ಜೀವನ ಶೈಲಿ: ಮನೆಯಲ್ಲಿಯೆ ಇರುವವರು ಪ್ರತ ನಿತ್ಯ ತಲೆ ತೊಳೆಯಬೇಕಾಗಿಲ್ಲ. ಆದರೆ ಪ್ರಯಾಣ ಮಾಡುವವರು ದೂಳಿನಲ್ಲಿ ಓಡಾಡುವುದರಿಂದ ತಲೆ ದಿನವೂ ತೊಳೆಯಬೇಕು.
7. ಕೂದಲಿನ ಉದ್ದ: ಗಿಡ್ಡ ಕೂದಲಿಗಿಂತ ಉದ್ದ ಕೂದಲಿಗೆ ಹೆಚ್ಚಿನ ಆರೈಕೆ ಬೇಕು. ಉದ್ದ ಕೂದಲನ್ನು ಪ್ರತಿ ದಿನವೂ ತೊಳೆಯಬೇಕು. ಇಲ್ಲದಿದ್ದರೆ ಕೂದಲು ಹಾಳಾಗುವುದು.
ಈ ಮೇಲಿನ ಸಲಹೆಗಳನ್ನು ಪಾಲಿಸಿ ಕೂದಲಿನ ಆರೋಗ್ಯ ಕಾಪಾಡಿ.



Click it and Unblock the Notifications
