Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹೂವಿನಂತಹ ಕೂದಲು ಪಡೆಯಲು ಹೀಗೆ ಮಾಡಿ

ಒಣಗೂದಲಿಗೆ 4 ನೈಸರ್ಗಿಕ ಕಂಡೀಶನರ್:
* ಮೊಸರಿನ ಕಂಡೀಶನರ್: ಕಳಾಹೀನ ಕೂದಲಿಗೆ ಮೊಸರು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ. ಮೆಂತ್ಯೆ ಕಾಳನ್ನು ರಾತ್ರಿಯಿಡೀ ನೆನೆಸಿ ಬೆಳಗ್ಗೆ ಮೊಸರಿನೊಂದಿಗೆ ರುಬ್ಬಿ ತಲೆಗೆ ಹಚ್ಚಿಕೊಂಡು 1 ಗಂಟೆ ವಿಶ್ರಾಂತಿ ತೆಗೆದುಕೊಂಡು ಶಾಂಪುವಿನಿಂದ ತೊಳೆದುಕೊಳ್ಳಬೇಕು. ಇದರಿಂದ ಕೂದಲು ಹೊಳೆಯುವುದರೊಂದಿಗೆ ಬುಡ ಒಣಗುವುದೂ ತಪ್ಪುತ್ತದೆ.
* ದಾಸವಾಳದ ಪ್ಯಾಕ್: ಕೆಂಪು ದಾಸವಾಳ ಅಥವಾ ಎಲೆಯನ್ನು ರುಬ್ಬಿ ಪೇಸ್ಟ್ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ಬಸಿದು ಗಾಳಿಯಾಡದಂತೆ ಮುಚ್ಚಿಡಬೇಕು. ತಲೆ ಸ್ನಾನ ಮಾಡುವ ಮುನ್ನ ಕೂದಲಿಗೆ ಮತ್ತು ಕೂದಲಿನ ಬುಡಕ್ಕೆ ಹಚ್ಚಿಕೊಂಡು 10 ನಿಮಿಷದ ನಂತರ ತೊಳೆದುಕೊಂಡರೆ ತಕ್ಷಣವೇ ಕೂದಲಿಗೆ ಹೊಳಪು ಬರುತ್ತದೆ.
* ಬೆಣ್ಣೆ ಹಣ್ಣಿನ ಉಪಯೋಗ: ಚೆನ್ನಾಗಿ ಕಳಿತ ಬೆಣ್ಣೆ ಹಣ್ಣನ್ನು ನಿಂಬೆರಸ ಮತ್ತು ಕೂದಲಿಗೆ ಹಚ್ಚುವ ಯಾವುದಾದರೂ ಎಣ್ಣೆಯೊಂದಿಗೆ ಬೆರೆಸಿ ಹಚ್ಚಿಕೊಂಡರೆ ಕೂದಲು ಮೃದು ಮತ್ತು ಹೊಳಪುಭರಿತವಾಗಿರುತ್ತದೆ. ಇದರಲ್ಲಿರುವ ವಿಟಮಿನ್ ಕೂದಲಿಗೆ ಪೋಷಣೆ ನೀಡುತ್ತದೆ ಮತ್ತು ಕೂದಲು ಬೇಗನೆ ಬೆಳೆಯುತ್ತದೆ. ಇದು ಉತ್ತಮ ಕಂಡೀಶನರ್ ಕೂಡ ಹೌದು.
* ಲೋಳೆಸರದ ಜೆಲ್: ಲೋಳೆಸರದ ರಸವೂ ಉತ್ತಮ ಕಂಡೀಶನರ್. ಇದು ಕೆಟ್ಟ ವಾಸನೆಯನ್ನೂ ಹೋಗಿಸುತ್ತದೆ. ಸ್ವಲ್ಪ ಬಿಸಿ ನೀರಿನೊಂದಿಗೆ ಬೆರೆಸಿ ಲೋಳೆ ಸರ ಹಚ್ಚಿಕೊಳ್ಳಬಹುದು.



Click it and Unblock the Notifications
