Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ನಿಮ್ಮ ಕೂದಲಿಗೆ ಯಾವ ಎಣ್ಣೆ ಮಸಾಜ್ ಸೂಕ್ತ?

ಕೂದಲು ಬಯಸುವ ರಕ್ಷಣೆ ನೀಡುವ ಕೆಲವು ಎಣ್ಣೆಯನ್ನು ಇಲ್ಲಿ ಹೆಸರಿಸಲಾಗಿದೆ. ನಿಮ್ಮ ಕೂದಲಿನ ಅವಶ್ಯಕತೆಗೆ ತಕ್ಕಂತೆ ಯಾವ ಎಣ್ಣೆ ಸೂಕ್ತ ಎಂಬುದನ್ನು ತಿಳಿದುಕೊಂಡು ಪ್ರಯೋಜನ ಪಡೆದುಕೊಳ್ಳಿ.
ಕೂದಲಿನ ಪೋಷಣೆಗೆ 5 ಸೂಕ್ತ ಎಣ್ಣೆ:
1. ಕೊಬ್ಬರಿ ಎಣ್ಣೆ: ಕೂದಲಿಗೆ ಎಲ್ಲಾ ರೀತಿಯ ಪೋಷಣೆ ನೀಡಲು ಬಯಸುವುದಾದರೆ ಕೊಬ್ಬರಿ ಎಣ್ಣೆ ಸೂಕ್ತ. ಸುಲಭವಾಗಿ ದೊರೆಯುವ ಕೊಬ್ಬರಿ ಎಣ್ಣೆಯನ್ನು ಭಾರತದಲ್ಲಿ ಹೆಚ್ಚು ಬಳಸುತ್ತಾರೆ. ಇದರ ಉತ್ತಮ ಫಲಿತಾಂಶದಿಂದಲೇ ಎಣ್ಣೆ ಪ್ರಸಿದ್ಧಿ ಪಡೆದುಕೊಂಡಿದೆ. ಕೂದಲಿನ ವೇಗದ ಬೆಳವಣಿಗೆಗೆ, ಒಣ ಕೂದಲಿಗೆ, ತಲೆ ಹೊಟ್ಟು ಮತ್ತು ಕಪ್ಪು ಕೂದಲಿಗೆ ಕೊಬ್ಬರಿ ಎಣ್ಣೆ ತುಂಬಾ ಸಹಕಾರಿ. ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಹಚ್ಚಿಕೊಂಡರೆ ಎಲ್ಲ ರೀತಿಯ ಪೋಷಣೆಯನ್ನೂ ನೀಡಿದಂತೆ.
2. ಆಲಿವ್ ಎಣ್ಣೆ: ಆಲಿವ್ ಎಣ್ಣೆಯಲ್ಲಿ ಒಳ್ಳೆಯ ಕೊಬ್ಬು ಇರುವುದಷ್ಟೇ ಅಲ್ಲ, ಕೂದಲಿಗೆ ಅಗತ್ಯವಿರುವ ಅಂಶಗಳೂ ತುಂಬಿಕೊಂಡಿದೆ. ಕೂದಲುದುರುವ ಸಮಸ್ಯೆ ನಿಮ್ಮನ್ನು ಹೆಚ್ಚು ಕಾಡುತ್ತಿದ್ದರೆ ವಾರಕ್ಕೊಮ್ಮೆ ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿಕೊಂಡರೆ ಬದಲಾವಣೆಯನ್ನು ನೀವೇ ಕಾಣುತ್ತೀರ. ಆಲಿವ್ ಎಣ್ಣೆ ಅತ್ಯುತ್ತಮ ಕಂಡೀಶನರ್ ಆದ್ದರಿಂದ ಇದರ ಬಳಕೆಯಿಂದ ಹೆಚ್ಚು ಉಪಯೋಗ ಕಂಡುಕೊಳ್ಳಬಹುದು.
3. ಬಾದಾಮಿ ಎಣ್ಣೆ: ಅತ್ಯಾಶ್ಚರ್ಯವಾಗಿ ಕೂದಲ ಬೆಳವಣಿಗೆ ಮಾಡುವಲ್ಲಿ ಬಾದಾಮಿ ಎಣ್ಣೆ ತುಂಬಾ ಸಹಕಾರಿ. ಬಾದಾಮಿ ಎಣ್ಣೆಯನ್ನು ನಿರಂತರ ಬಳಕೆ ಮಾಡುತ್ತಿದ್ದರೆ 3 ತಿಂಗಳಿನಲ್ಲಿ 4 ಇಂಚು ಕೂದಲು ಬೆಳೆದಿರುತ್ತೆ. ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಹೆಚ್ಚಿರುವುದರಿಂದ ಕೂದಲಿಗೆ ಅಗತ್ಯವಾದ ಎಲ್ಲಾ ಪೋಷಣೆಯೂ ದೊರೆಯುತ್ತದೆ.
4. ಹರಳೆಣ್ಣೆ: ಕೆಲವರಿಗೆ ಹುಬ್ಬು ಸರಿಯಿಲ್ಲದಿದ್ದರೆ ಹರಳೆಣ್ಣೆ ಹಚ್ಚಿಕೊಳ್ಳಲು ಸಲಹೆ ನೀಡಲಾಗುತ್ತೆ. ಹಾಗಾದರೆ ಕೂದಲಿನ ಮೇಲೆ ಇದು ಎಂತಹ ಪರಿಣಾಮ ಬೀರುತ್ತದೆ ಎಂಬುದನ್ನು ನೀವೇ ಯೋಚಿಸಿ. ಹರಳೆಣ್ಣೆ ಮಸಾಜ್ ನಿಂದ ರಕ್ತ ಸಂಚಲನ ಹೆಚ್ಚಾಗಿ ಕೂದಲು ಗಟ್ಟಿಗೊಳ್ಳುತ್ತದೆ. ಆದರೆ ಈ ಎಣ್ಣೆಯನ್ನು ಸ್ವಲ್ಪವೇ ಬಳಸಬೇಕು. ಒಂದು ಚಮಚದಷ್ಟು ಹಚ್ಚಿಕೊಂಡರೆ ಸಾಕು.
5. ಜೋಜೊಬಾ ಎಣ್ಣೆ: ತ್ವಚೆಗೆ ಪೋಷಣೆ ನೀಡುವ ಜೊಜೊಬಾ ಎಣ್ಣೆ ಕೂದಲಿಗೂ ತುಂಬಾ ಸಹಕಾರಿ. ಕೂದಲಿಗೆ ಬೆಳವಣಿಗೆ ನೀಡಿ ಕೂದಲಿನ ಬುಡ ತಂಪಿರುವಂತೆ ನೋಡಿಕೊಳ್ಳುತ್ತದೆ. ಅಂಟಿಲ್ಲದಿರುವುದ ಜೊಜೊಬಾ ಎಣ್ಣೆಯ ಮತ್ತೊಂದು ಗುಣ. ಇದನ್ನು ಹಚ್ಚಿಕೊಂಡರೆ ಕೂದಲು ಎಣ್ಣೆ ಹಚ್ಚಿದಂತೆ ಕಾಣುವುದಿಲ್ಲ.



Click it and Unblock the Notifications
