Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಕೂದಲಿನ ಸಕಲ ಪೋಷಣೆಗೆ ಏನು ಮಾಡಬೇಕು?

ಆದರೆ ಮೊಟ್ಟೆಯನ್ನು ಕೂದಲಿಗೆ ಬಳಸುವ ಕೆಲವು ರೀತಿಯನ್ನು ತಿಳಿದುಕೊಂಡರೆ ಸಂಪೂರ್ಣ ಉಪಯೋಗವನ್ನು ಪಡೆಯಬಹುದು. ಮೊಟ್ಟೆಯನ್ನು ಬಳಸಿಕೊಂಡು ಕೂದಲಿಗೆ ಯಾವ ರೀತಿ ಪೋಷಣೆ ನೀಡಬಹುದು ಎಂದು ಇಲ್ಲಿ ತಿಳಿದುಕೊಳ್ಳಿ.
1. ಕೂದಲು ಗಟ್ಟಿಗೊಳ್ಳಲು: ಹರಳೆಣ್ಣೆ ಅಥವಾ ಆಲಿವ್ ಎಣ್ಣೆಯೊಂದಿಗೆ ಮೊಟ್ಟೆಯ ಹಳದಿ ಭಾಗ ಬೆರೆಸಿ ಹಚ್ಚಿಕೊಂಡರೆ ಕೂದಲು ಗಟ್ಟಿಗೊಳ್ಳುವುದಲ್ಲದೆ ಉದ್ದವಾಗಿ ಬೆಳೆಯುತ್ತೆ.
2. ಒರಟು ಕೂದಲಿಗೆ: ವಿನೆಗರ್ ಮತ್ತು ನೀರಿನೊಂದಿಗೆ ಎರಡು ಮೊಟ್ಟೆ ಬೆರೆಸಿ ಹಚ್ಚಿಕೊಂಡು 15 ನಿಮಿಷದ ನಂತರ ತೊಳದುಕೊಳ್ಳಬೇಕು. ಮೊಸರಿನೊಂದಿಗೆ ಹಳದಿ ಭಾಗ ಮತ್ತು ಬಾದಾಮಿ ಪೇಸ್ಟನ್ನು ಸೇರಿಸಿ ಹಚ್ಚಿಕೊಂಡರೂ ಮೃದುಗೊಳ್ಳುತ್ತದೆ. ಮೊಸರು ಮತ್ತು ಮೊಟ್ಟೆ ಕಾಂಬಿನೇಶನ್ ಒರಟು ಕೂದಲಿಗೆ ತುಂಬಾ ಉಪಯುಕ್ತ.
3. ಕೂದಲಿಗೆ ಹೊಳಪು ನೀಡಲು: ಸಂಪೂರ್ಣ ಮೊಟ್ಟೆಯನ್ನು ನಿಂಬೆರಸದೊಂದಿಗೆ ಬೆರೆಸಿ ಕೂದಲಿಗೆ ಮತ್ತು ಕೂದಲಿನ ಬುಡಕ್ಕೆ ಮಸಾಜ್ ಮಾಡಿಕೊಳ್ಳಬೇಕು. ಇದರಿಂದ ಕೂದಲು ಹೊಳಪು ಪಡೆದುಕೊಳ್ಳುವುದಲ್ಲದೆ ತಲೆಹೊಟ್ಟೂ ನಿವಾರಣೆಯಾಗುತ್ತದೆ.
4. ಕಂಡೀಶನರ್: 1 ಚಮಚ ಕೊಬ್ಬರಿ ಎಣ್ಣೆಗೆ ಮೊಟ್ಟೆ ಹಳದಿ ಭಾಗವನ್ನು ಚೆನ್ನಾಗಿ ಕದಡಿ ಬೆರೆಸಿ ಈ ಮಿಶ್ರಣವನ್ನು ಸ್ನಾನಕ್ಕೆ ಮುನ್ನ ಕೂದಲಿಗೆ ಹಚ್ಚಿಕೊಂಡು ಒಣಗಿದ ನಂತರ ನೀರಿನಲ್ಲಿ ತೊಳೆದುಕೊಂಡರೆ ಒರಟು ಕೂದಲು ತುಂಬಾ ಮೃದುವಾಗುತ್ತೆ. ನಿಮಗೆ ಅಷ್ಟು ಸಮಯವಿಲ್ಲದಿದ್ದರೆ ಮೊಟ್ಟೆಯನ್ನು ಹರ್ಬಲ್ ಶಾಂಪೂ ಜೊತೆ ಬೆರೆಸಿಯೂ ಹಚ್ಚಿ ತೊಳೆಯಬಹುದು.
ಆದರೆ ಮೊಟ್ಟೆ ಬಳಕೆಯಲ್ಲಿರುವ ಒಂದೇ ತೊಂದರೆಯೆಂದರೆ ಅದರ ವಾಸನೆ. ಸ್ವಲ್ಪ ನಿಂಬೆರಸ ಬೆರೆಸಿ ಹಚ್ಚಿಕೊಳ್ಳುವುದರಿಂದ ವಾಸನೆಯನ್ನೂ ತಡೆಗಟ್ಟಲು ಸಾಧ್ಯವಿದೆ.



Click it and Unblock the Notifications
