Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಕೂದಲಿನ ರಕ್ಷಣೆಗೆ ನೈಸರ್ಗಿಕವಾದ ಪೋಷಣೆ

ಕೂದಲಿಗೆ ಮೊಟ್ಟೆಯನ್ನು ಬಳಸಬಹುದಾದರೂ ಅದನ್ನು ತಲೆಗೆ ಹಚ್ಚಿದಾಗ ಕೆಟ್ಟ ವಾಸನೆ ಬರುವುದು. ಆದರೆ ಕೆಲವೊಂದು ನೈಸರ್ಗಿಕ ವಸ್ತುಗಳು ಮೊಟ್ಟೆಯಷ್ಟೆ ಕೂದಲಿನ ಪೋಷಣೆಯನ್ನು ಮಾಡುತ್ತದೆ.
ನೈಸರ್ಗಿಕವಾದ ವಸ್ತುಗಳಿಂದ ಕೂದಲಿನ ಆರೈಕೆಗೆ ಬೇಕಾದ ಶ್ಯಾಂಪೂ, ಎಣ್ಣೆ ತಯಾರಿಸಬಹುದಾಗಿದ್ದು ಅದು ಹೇಗೆ ಎಂದು ತಿಳಿಯಲು ಮುಂದೆ ಓದಿ.
1. ಎಣ್ಣೆ: ಒಂದು ದೊಡ್ಡ ಚಮಚದಷ್ಟು ಹರಳೆಣ್ಣೆ , ಬಾದಮಿ , ಆಲೀವ್ ಮತ್ತು ತೆಂಗಿನ ಎಣ್ಣೆಗಳನ್ನು ಮಿಶ್ರ ಮಾಡಿ ಅದನ್ನು ಕಬ್ಬಿಣದ ಬಾಣಲೆಯಲ್ಲಿ ಹಾಕಿ ಕಾಯಿಸಬೇಕು. ಅದಕ್ಕೆ ಕರಿ ಬೇವಿನ ಎಲೆ ಮತ್ತು ಮೆಹಂದಿ ಎಲೆಯನ್ನು ಹಾಕಿ 2 ನಿಮಿಷ ಕಾಯಿಸಿ, ಅದು ತಣ್ಣಗಾದ ಮೇಲೆ ಒಂದು ಬಾಟಲಿನಲ್ಲಿ ಹಾಕಿ ಬಳಸಬಹುದಾಗಿದೆ.
2. ಶ್ಯಾಂಪೂ: ನೆಲ್ಲಿಕಾಯಿ ಪುಡಿಯನ್ನು ಸೀಗೆ ಕಾಯಿ ಪುಡಿ ಜೊತೆ ಮಿಶ್ರ ಮಾಡಿ ಶ್ಯಾಂಪೂ ರೀತಿಯಲ್ಲಿ ಬಳಸಬಹುದಾಗಿದೆ.
3. ತಲೆ ಹೊಟ್ಟು ನಿವಾರಣೆಗೆ: ಮೆಂತೆಯು ತಲೆ ಹೊಟ್ಟು ವಿವಾರಣೆಗೆ ಒಂದು ಉತ್ತಮ ಔಷಧಿಯಾಗಿದೆ. ಮೆಂತೆಯನ್ನು ಅರೆದು ಅದನ್ನು ಮೊಸರಿನ ಜೊತೆ ಮಿಶ್ರ ಮಾಡಿ ತಲೆಗೆ ಹಚ್ಚಿದರೆ ಅದು ಬ್ಯಾಕ್ಟೀರಿಯಾಯನ್ನು ಹೋಗಲಾಡಿಸಿ ಒಣ ಕೂದಲು ಆಗುವುದನ್ನು ತಡೆಯುತ್ತದೆ.
4. ಕೂದಲಿಗೆ ಬಣ್ಣ: ಕೂದಲು ಬಿಳಿಯಾದರೆ ಅದನ್ನು ಕಪ್ಪು ಮಾಡಲು ಸಕ್ಕರೆ ಹಾಕದ ಲೆಮನ್ ಟಿ ಗೆ ಮೆಹಂದಿಯನ್ನು ಬೆರೆಸಿ ಅದನ್ನು ಹಚ್ಚಬಹುದಾಗಿದೆ. ಇದರಿಂದ ತಲೆಯಲ್ಲಿ ತುರಿಕೆ ಉಂಟಾಗುವುದಿಲ್ಲ, ಕೂದಲಿಗೆ ಹೊಳಪು ಸಹ ದೊರೆಯುತ್ತದೆ.
ಸಲಹೆ: ಇಷ್ಟೆಲ್ಲಾ ಮಾಡಿದ ನಂತರವು ತಲೆಯಲ್ಲಿ ಹೊಟ್ಟು ಕಂಡು ಬಂದರೆ ತಲೆಯನ್ನು ತೊಳೆದು ಒಂದು ಕಪ್ ನೀರಿನಲ್ಲಿ 3-4 ಹನಿ ಬಾದಾಮಿ ಎಣ್ಣೆ ಮತ್ತು ಒಂದು ಹನಿ ವಿನಿಗರ್ ಬೆರೆಸಿ, ಹತ್ತಿಯನ್ನು ಅದರಲ್ಲಿ ಅದ್ದಿ ಬಳಸಿದರೆ ಹೊಟ್ಟಿನ ಸಮಸ್ಯೆ ನಿವಾರಣೆ ಆಗುತ್ತದೆ.



Click it and Unblock the Notifications
