Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕೂದಲು ಶುದ್ಧವಾಗಿರಬೇಕೆಂದರೆ ಇದು ತುಂಬಾ ಮುಖ್ಯ

ಕೂದಲ ಬುಡವನ್ನು ಶುದ್ಧವಿರಿಸಿಕೊಳ್ಳುವ ಐದು ಮಾರ್ಗ:
1. ಕೂದಲ ಬುಡ ಶುದ್ಧವಿರದಿದ್ದರೆ ತಲೆಯಲ್ಲಿ ಹೊಟ್ಟು ಕಾಣಿಸಿಕೊಳ್ಳುತ್ತದೆ. ಕೂದಲಿನ ಬುಡ ಒಣಗಿದಂತಾಗಿ ಚರ್ಮ ಬಿರುಕು ಬಿಡುವುದೇ ಡ್ಯಾಂಡ್ರಫ್ ಗೆ ಕಾರಣ. ಆದ್ದರಿಂದ ಕೂದಲಿನ ಬುಡವನ್ನು ಒಣಗದಂತಿರಿಸಲು ವಾರಕ್ಕೊಮ್ಮೆ ಬೆಚ್ಚಗಿನ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಬೇಕು.
2. ದೇಹದ ಚರ್ಮದಂತೆ ತಲೆಯ ಚರ್ಮಕ್ಕೂ ರಂಧ್ರಗಳಿರುತ್ತದೆ. ಎಣ್ಣೆ ಹಚ್ಚುವುದಕ್ಕೆ ಮುನ್ನ ಈ ರಂಧ್ರಗಳು ತೆರೆದುಕೊಂಡಿರಬೇಕು. ಇಲ್ಲವೆಂದರೆ ಹಚ್ಚಿದ ಎಣ್ಣೆ ವ್ಯರ್ಥಗೊಳ್ಳುತ್ತದೆ. ಆದ್ದರಿಂದ ಎಣ್ಣೆ ಹಚ್ಚುವ ಮುನ್ನ ಟವಲನ್ನು ಬಿಸಿ ನೀರಿನಲ್ಲಿ ಅದ್ದಿ, ತಲೆಗೆ ಕಟ್ಟಿಕೊಂಡು 5 ನಿಮಿಷ ಹಾಗೆ ಬಿಟ್ಟು ನಂತರ ಎಣ್ಣೆ ಹಚ್ಚಿಕೊಳ್ಳಬೇಕು.
3. ಕೆಲವರು ಕೂದಲನ್ನು ತುಂಬಾ ಗಡುಸಾಗಿ ಉಜ್ಜುತ್ತಾರೆ. ಆದರೆ ಈ ರೀತಿ ಮಾಡುವುದು ಸರಿಯಲ್ಲ. ಮೊದಲು ಬುಡವನ್ನು ಚೆನ್ನಾಗಿ ತೊಳೆದುಕೊಂಡು ಉತ್ತಮ ಶಾಂಪೂವಿನಿಂದ ಮೃದುವಾಗಿ ಉಜ್ಜಬೇಕು. ಹೀಗೆ ಮಾಡದಿದ್ದ ಪಕ್ಷದಲ್ಲಿ ತಲೆಯಲ್ಲಿ ಮತ್ತೆ ಎಣ್ಣೆ ಬೇಗನೆ ಉತ್ಪತ್ತಿಯಾಗಿ ತಲೆತುರಿಕೆಯುಂಟಾಗಿ ಮತ್ತೆ ತಲೆ ಹೊಟ್ಟಿನ ಸಮಸ್ಯೆ ಬರುತ್ತದೆ.
4. ಕೂದಲು ವಾಸನೆ ಬರುತ್ತಿದ್ದರೆ ಕೂದಲಿನ ಬುಡದ ಸಮಸ್ಯೆಯೇ ಇದಕ್ಕೆ ಕಾರಣ. ಕೂದಲಿನ ಬುಡಕ್ಕೆ ಸೋಂಕು ತಗುಲಿದರೆ ಹೀಗಾಗುವುದು ಸಹಜ. ಆದ್ದರಿಂದ ಶುದ್ಧವಾದ ಟವಲ್, ದಿಂಬುಗಳನ್ನು ಬಳಸಿದರೆ ಸೋಂಕು ತಗಲದಂತೆ ನೋಡಿಕೊಳ್ಳಬಹದು. ಆಂಟಿ-ಮೈಕ್ರೋಬಿಯಲ್ ಶಾಂಪೂವಿನಿಂದ ಸ್ನಾನ ಮಾಡಿದರೆ ಉತ್ತಮ.
5. ಬುಡದಲ್ಲಿ ಉಂಟಾಗುವ ಕೆಂಪು ಗುಳ್ಳೆ, ಗಾಯಗಳು ಕೂದಲುದುರುವಿಕೆಗೆ ಕಾರಣ. ವೈದ್ಯರಿಂದ ಚಿಕಿತ್ಸೆ ಪಡೆದು ಶಾಂಪೂಗಳನ್ನು ಬಳಸಿದರೆ ಈ ಸಮಸ್ಯೆಯಿಂದ ದೂರವಾಗಬಹದು.



Click it and Unblock the Notifications
