Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮುದ್ದಾದ ಮುಂಗುರುಳಿದ್ದರೆ ಮನಸೋಲಲೇ ಬೇಕು

ಮುಂಗುರುಳಿನಲ್ಲೂ ಅನೇಕ ಬಗೆಯಿದೆ. ಅದರಲ್ಲಿ ನಿಮ್ಮ ಕೇಶ ಶೈಲಿಗೆ ಮತ್ತು ನಿಮ್ಮ ಮುಖಕ್ಕೆ ತಕ್ಕಂತಹ ಮುಂಗುರುಳನ್ನು ಬಿಟ್ಟು ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣಬಹುದು.
ಮುಂಗುರುಳಿನ ವಿಧಗಳು:
* ಸೈಡ್ ಕ್ರಾಫ್ ಮುಂಗುರುಳು: ನಿಮ್ಮ ಕೂದಲನ್ನು ಓರೆಯಾಗಿ ಒಂದೆಡೆ ಭಾಗ ಮಾಡಿ ಬಾಚುತ್ತೀರ (ಸೈಡ್ ಕ್ರಾಫ್) ಎಂದಾದರೆ ಮುಂಗುರುಳು ನಿಮಗೆ ಚೆಂದವಾಗಿ ಒಪ್ಪುತ್ತದೆ. ಹೆಗಲಿನ ಮೇಲೆ ಬರುವಂತೆ ಅಥವಾ ಸ್ವಲ್ಪ ತುಂಡವಾಗಿ ಕತ್ತರಿಸಿದರೆ ನೋಡಲು ಚೆಂದ. ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾಳ ಇತ್ತೀಚಿನ ಹೇರ್ ಸ್ಟೈಲ್ ಇದು. ಹುಡುಗಿಯರು ಬೋಲ್ಡ್ ಆಗಿ ಕಾಣಲು ಇಚ್ಛಿಸಿದರೆ ಈ ಹೇರ್ ಸ್ಟೈಲ್ ಮಾಡಿನೋಡಿ.
* ಉದ್ದ ಕೂದಲಿನ ಮುಂಗುರುಳು: ನಿಮಗೆ ಉದ್ದ ಕೂದಲಿದ್ದರೆ ಮುಂದಲೆಯ ಕೂದಲನ್ನು ನಿಮ್ಮ ಹಣೆಯ ಮೇಲೆ ನಿಲ್ಲುವಂತೆ ಸ್ವಲ್ಪ ತುಂಡವಾಗಿ ಕತ್ತರಿಸಿ ನೋಡಿ, ಅದು ನಿಮ್ಮನ್ನು ಬೊಂಬೆಯಂತೆ ಸುಂದರವಾಗಿ ಕಾಣುವಂತೆ ಮಾಡುತ್ತದೆ. ಕತ್ರೀನಾ ಕೈಫ್ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವುದು ಇದೇ ಶೈಲಿಯಲ್ಲಿ.
* ತುಂಡು ಕೂದಲಿನ ಮುಂಗುರುಳು: ನಿಮಗೆ ಚಿಕ್ಕದಾದ ಮತ್ತು ಗುಂಗುರು ಕೂದಲಿದ್ದರೆ ಮಧ್ಯೆ ಭಾಗ ಮಾಡಿಕೊಂಡು ಎರಡೂ ಪಕ್ಕಕ್ಕೂ ಕೂದಲು ಕತ್ತರಿಸಿಕೊಳ್ಳಬಹುದು. ಈ ಹಿಂದೆ ಮಾಧುರಿ ದೀಕ್ಷಿತ್ ಕೇಶ ವಿನ್ಯಾಸ ಇದ್ದುದ್ದು ಇದೇ ರೀತಿ. ಈ ಕೇಶಶೈಲಿ ನಿಮ್ಮನ್ನು ಮುದ್ದಾಗಿ ಕಾಣುವಂತೆ ಮಾಡುತ್ತದೆ.
* ಚಿಕ್ಕ ಕೂದಲಿಗೆ ಉದ್ದವಾದ ಮುಂಗುರುಳು: ಚಿಕ್ಕ ಕೂದಲಿದ್ದವರು ಒಂದು ಕಡೆ ಮಾತ್ರ ಉದ್ದವಾದ ಮುಂಗುರುಳನ್ನು ಬಿಡುವುದು ರೂಢಿ. ಒಂದು ಕಡೆ ಮಾತ್ರ ಮುಂಗುರುಳು ಬಿಟ್ಟರೂ ಕೆಲವೊಬ್ಬರಿಗೆ ಚೆಂದವಾಗಿ ಕಾಣುತ್ತದೆ.
ನಿಮಗೂ ಮುಂಗುರುಳನ್ನು ಬಿಡಬೇಕೆಂಬ ಆಸೆಯಿದ್ದರೆ ಇದರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ಮುಂಗುರುಳು ಬಿಟ್ಟು ನೋಡಿ.



Click it and Unblock the Notifications
