Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಕೂದಲಿನ ಪೋಷಣೆಗೆ ಬೇಕು ಮೊಟ್ಟೆಯ ರಕ್ಷಣೆ

ಮೊಟ್ಟೆಯನ್ನು ಯಾವ ರೀತಿ ಉಪಯೋಗಿಸಿ ಕೂದಲನ್ನು ಸುಪೋಷಿತಗೊಳಿಸುವ ಕೆಲವು ಟಿಪ್ಸ್ :
1. ಮೊಟ್ಟೆಯನ್ನು ಕೂದಲಿಗೆ ಉಪಯೋಗಿಸಬಹುದಾದ ಅತಿ ಸುಲಭ ಮಾರ್ಗವೆಂದರೆ ಎರಡು ಮೊಟ್ಟೆಯನ್ನು ಒಡೆದು, ಅದರ ಲೋಳೆಗೆ 1 ಚಮಚ ಹರಳೆಣ್ಣೆ, ಒಂದೆರಡು ಹನಿ ನೀರು ಬೆರೆಸಿ ತಲೆಯ ಬುಡದಿಂದ ತುದಿಯವರೆಗೂ ಮಸಾಜ್ ಮಾಡಿ 30 ನಿಮಿಷ ಬಿಡಬೇಕು. ನಿಮಗೆ ಹೊಟ್ಟಿನ ಸಮಸ್ಯೆಯಿದ್ದರೆ ಅದಕ್ಕೆ ಒಂದೆರಡು ಹನಿ ನಿಂಬೆರಸವನ್ನು ಸೇರಿಸಬಹುದು.
2. ಕೂದಲು ಸೊಂಪಾಗಿ ಬೆಳೆಯಬೇಕೆಂದರೆ ಮೊಟ್ಟೆಯ ಲೋಳೆಗೆ ಬಾದಾಮಿ ಎಣ್ಣೆ ಸೇರಿಸಿ ಮಸಾಜ್ ಮಾಡಿಕೊಳ್ಳಬೇಕು.
3. ಮೊಟ್ಟೆಯಿಂದ ಕೂದಲಿಗೆ ಪ್ಯಾಕ್ ಹಾಕಿಕೊಳ್ಳಬೇಕೆಂದರೆ 1 ಚಮಚ ನೀರಿನೊಂದಿಗೆ ಒಂದು ಮೊಟ್ಟೆಯ ಹಳದಿ ಲೋಳೆ ಸೇರಿಸಿ ಬುಡದಿಂದ ತುದಿಯವರೆಗೂ ಹಚ್ಚಿಕೊಳ್ಳಬೇಕು. 10-15 ನಿಮಿಷ ಬಿಟ್ಟು ಶಾಂಪೂವಿನಿಂದ ತೊಳೆದುಕೊಳ್ಳಬೇಕು. ಇದು ತುಂಬಾ ಪರಿಣಾಮಕಾರಿ ಹೇರ್ ಕಂಡೀಶನರ್.
4. ಎರಡು ಮೊಟ್ಟೆಗಳನ್ನು ಒಡೆದು ಚೆನ್ನಾಗಿ ಕಲಕಿ ತಲೆಯ ಮೇಲೆ ಹಾಕಿಕೊಂಡು 3 ನಿಮಿಷ ಮಸಾಜ್ ಮಾಡಬೇಕು. ಅದು ಒಣಗಲು ಬಿಟ್ಟು ಆನಂತರ ಶಾಂಪೂ ಹಾಕಿ ವಿನಿಗರ್ ಮತ್ತು ನೀರಿನ ಮಿಶ್ರಣವನ್ನು ಸ್ವಲ್ಪ ಬೆರೆಸಿ ತೊಳೆದುಕೊಳ್ಳಬೇಕು. ಇದು ಕೂದಲನ್ನು ಮೃದುವಾಗಿ ಮಾಡುತ್ತದೆ.
5. ಮೊಟ್ಟೆಗೆ ಮೊಸರು ಮತ್ತು ನಿಂಬೆರಸ ಸೇರಿಸಿ ತಲೆಗೆ ಹಚ್ಚಿ 10 ನಿಮಿಷ ಬಿಡಬೇಕು. ಇದನ್ನು ತಣ್ಣೀರಿನಿಂದ ತೊಳೆದುಕೊಂಡರೆ ಕೂದಲು ಸೊಂಪಾಗಿ ಬೆಳೆಯಲು ಅನುಕೂಲವಾಗುತ್ತದೆ. ಅಷ್ಟೇ ಅಲ್ಲ ತಲೆಹೊಟ್ಟನ್ನು ಹೋಗಲಾಡಿಸಿ ನಿರ್ಜೀವ ಕೂದಲಿಗೆ ಬಲ ಬರುವಂತೆ ಮಾಡುತ್ತದೆ.
6. ಆದರೆ ಮೊಟ್ಟೆಯನ್ನು ಹಚ್ಚಿಕೊಂಡು ತೊಳೆದುಕೊಳ್ಳುವಾಗ ಎಚ್ಚರದಿಂದಿರಬೇಕು. ಕೂದಲು ತೊಳೆದ ನಂತರ ತಲೆಯಲ್ಲಿ ಎಣ್ಣೆಯಂತೆ ಉಳಿದುಕೊಳ್ಳದಿರಲಿ, ಉತ್ತಮವಾದ ಶಾಂಪೂ ಬಳಸಿ ಮತ್ತು ಮೊಟ್ಟೆ ವಾಸನೆ ಕೂದಲಲ್ಲಿ ಉಳಿಯದಂತೆ ಚೆನ್ನಾಗಿ ತೊಳೆದುಕೊಳ್ಳಬೇಕು.



Click it and Unblock the Notifications
