Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಬಿಸಿಲಿಗೆ ತುಟಿಗಳು ಕಪ್ಪಾಗಿದ್ಯಾ? ಈ 4 ಮನೆಮದ್ದು ಮ್ಯಾಜಿಕ್ ಮಾಡಲಿವೆ..!
ಬೇಸಿಗೆಯಲ್ಲಿ ಮುಖದ ಸೌಂದರ್ಯ ಕಾಪಾಡಿಕೊಳ್ಳುವುದು ಅಂದ್ರೆ ಹರಸಾಹಸ ಮಾಡಿದಂತೆ. ಬೇಸಿಗೆಯಲ್ಲಿ ಮುಖದ ಚರ್ಮ ಎಷ್ಟು ಹಾನಿಗೆ ಒಳಗಾಗಲಿದೆ ಎಂಬುದು ನಿಮಗೆಲ್ಲಾ ತಿಳಿದಿದೆ. ಹಾಗೆ ತುಟಿಗಳು ಕೂಡ ಬೇಸಿಗೆಯಲ್ಲಿಯೇ ಕಪ್ಪಾಗುವುದು ಕೂಡ ನೋಡಬಹುದು. ಹಾಗೆ ತುಟಿಗಳು ಮುಖದ ಸೌಂದರ್ಯ ಹೆಚ್ಚಿಸುವ ಅಂಗಗಳು, ಅದರಲ್ಲೂ ಮಹಿಳೆಯರು ತುಟಿಗಳ ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡುವುದು ನಾವು ನೋಡಬಹುದು.
ಅವರು ಹೆಚ್ಚಾಗಿ ತುಟಿಗಳ ಅಂದ ಹೆಚ್ಚಿಸಲು ಹಲವು ಬಗೆಯ ಕಾಸ್ಮೆಟಿಕ್ಸ್ ಬಳಸುತ್ತಾರೆ. ಲಿಪ್‌ಸ್ಟಿಕ್‌ನಿಂದ ಹಿಡಿದು, ಲಿಪ್ ಬಾಮ್ ಸೇರಿ ಬ್ಯೂಟಿ ಪಾರ್ಲರ್‌ನಲ್ಲಿ ಹಲವು ಬಗೆಯ ಕಸರತ್ತು ಮಾಡೋದು ನೋಡಬಹುದು. ಹಾಗೆ ತುಟಿಗಳ ಅಂದ ಹೆಚ್ಚಿಸಲು ಈಗ ದುಬಾರಿ ಬೆಲೆಯ ಸೌಂದರ್ಯ ವರ್ಧಕ ವಸ್ತುಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.

ಆದ್ರೆ ಬೇಸಿಗೆಯಲ್ಲಿ ತುಟಿಗಳ ಮೇಲೆ ಸೂರ್ಯ ಕಿರಣಗಳು ಬೀಳುವ ಕಾರಣ ಕಪ್ಪಾಗುವುದು ಸಾಮಾನ್ಯ. ನೀವು ಯಾವುದೇ ಕ್ರೀಮ್ ಬಳಸಿ ಸನ್ಸ್‌ಕ್ರೀನ್ ಬಳಸಿದರೂ ಕೂಡ ತುಟಿ ಕಪ್ಪಾಗುವುದನ್ನು ತಡೆಯಲು ಆಗುವುದಿಲ್ಲ. ನಿಮ್ಮ ತುಟಿಯು ಕಪ್ಪು ಬಣ್ಣಕ್ಕೆ ತಿರುವುದು, ಹಾಗೆ ತುಟಿಯ ಸುತ್ತ ಕಪ್ಪು ವೃತ್ತಾಕಾರದ ಗೆರೆಗಳು ಮೂಡುವುದು ನೋಡಬಹುದು. ಇದು ಬಿಸಿಲಿಗೆ ಒಡ್ಡಿಕೊಳ್ಳುವುದರಿಂದಾಗುವ ಸಮಸ್ಯೆಯಾಗಿದೆ.
ಹಾಗಾದ್ರೆ ನಾವಿಂದು ಈ ರೀತಿ ಬಿಸಿಲಿಗೆ ತುಟಿ ಕಪ್ಪಾಗಿದ್ದರೆ ಅದರಿಂದ ಹೊರಬರಲು ಹಾಗೆ ನಿಮ್ಮ ತುಟಿಗಳು ಎಂದಿನಂತೆ ಗುಲಾಬಿ ಬಣ್ಣದಲ್ಲಿ ಹೊಳೆಯುವಂತೆ ಮಾಡಲು ಮನೆಯಲ್ಲೇ ಮದ್ದು ಮಾಡಿಕೊಳ್ಳುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ನಿಂಬೆ ಮತ್ತು ಸಕ್ಕರೆ
ತುಟಿಗಳ ಬಣ್ಣ ಕಪ್ಪಾಗಿದ್ದರೆ ಅಥವಾ ಬಿಸಿಲಿಗೆ ಕಂದು ಬಣ್ಣಕ್ಕೆ ತಿರುಗಿದ್ದರೆ ಈ ನಿಂಬೆ ಮತ್ತು ಸಕ್ಕರೆ ಅದ್ಭುತವಾಗಿ ಪರಿಹಾರ ನೀಡಲಿದೆ. ನೀವು ಮಲಗುವ ಮುನ್ನ ತುಟಿಯ ಮೇಲೆ ನಿಂಬೆ ರಸವನ್ನು ಉಜ್ಜಿ ಹಾಗೆ ಅದಕ್ಕೆ ಸಕ್ಕೆಯನ್ನು ದಪ್ಪವಾಗಿ ಹಚ್ಚಿ. ಚೆನ್ನಾಗಿ ಉಜ್ಜಿ 15 ನಿಮಿಷ ಬಿಡಿ. ಅನಂತರ ತಣ್ಣೀರಿನಲ್ಲಿ ತುಟಿಗಳ ತೊಳೆದುಕೊಳ್ಳಿ. ಹೀಗೆ ವಾರದಲ್ಲಿ ಮೂರು ಬಾರಿಯಾದರು ಮಾಡಿದ್ರೆ ನೀವೆ ವ್ಯತ್ಯಾಸ ಗಮನಿಸುತ್ತೀರಿ.
ಅರಿಶಿನ ಮತ್ತು ಹಾಲಿನ ಮಾಡಿದ ಪೇಸ್ಟ್
ಅರಿಶಿನದಲ್ಲಿ ಎಷ್ಟು ಆರೋಗ್ಯಕರ ಅಂಶ ಅಡಗಿದೆ ಎಂಬುದು ನಿಮಗೂ ತಿಳಿಸಿದೆ. ಹೀಗಾಗಿ ಒಂದು ಬೌಲ್‌ನಲ್ಲಿ ಅರಶಿಣ ಹಾಗೂ ಹಾಲು ತೆಗೆದುಕೊಂಡು ಪೇಸ್ಟ್ ಮಾಡಿಕೊಳ್ಳಿ. ನಂತರ ತುಟಿಗಳಿಗೆ ಚೆನ್ನಾಗಿ ಹಚ್ಚಿಕೊಳ್ಳಿ. 5 ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. ಈ ರೀತಿ ನಿತ್ಯ 15 ದಿನಗಳ ಮಾಡಿದರೆ ನಿಮ್ಮ ತುಟಿಗಳು ಕಡು ಕೆಂಪು ಬಣ್ಣಕ್ಕೆ ತಿರುಗುತ್ತವೆ.
ಜೇನು ತುಪ್ಪ ಮಸಾಜ್
ಜೇನುತುಪ್ಪ ಆಂಟಿಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣಗಳಿಂದ ತುಂಬಿದೆ. ಹೀಗಾಗಿ ಹಲವು ಔಷಧಿ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ಇನ್ನು ತುಟಿಗಳ ಅಂದ ಹೆಚ್ಚಿಸಲು ಕೂಡ ಇದು ಬೆಸ್ಟ್ ಆಗಿದೆ. ಜೇನುತುಪ್ಪಕ್ಕೆ ಸ್ವಲ್ಪ ಸಕ್ಕರೆ ಬೆರೆಸಿ ಮಿಶ್ರಣ ಮಾಡಿ ವೃತ್ತಾಕಾರವಾಗಿ ನಿಮ್ಮ ತುಟಿಗಳಿಗೆ ಹಚ್ಚಿಕೊಂಡು ನಂತರ ತೊಳೆಯಿರಿ. ವಾರದಲ್ಲಿ ಒಂದು ಬಾರಿ ಮಾಡಿದರೆ ಸಾಕಾಗುತ್ತದೆ.
ದಾಳಿಂಬೆಯ ಮಸಾಜ್
ದಾಳಿಂಬೆ ಎಷ್ಟೊಂದು ಆರೋಗ್ಯಕರ ಅಂಶಗಳ ಹೊಂದಿದೆ ಎಂಬುದು ನಿಮಗೂ ತಿಳಿದಿರಬಹುದು. ದಾಳಿಂಬೆ ಚರ್ಮದ ಹೈಪರ್‌ಪಿಗ್ಮೆಂಟೇಶನ್ ಅನ್ನು ಹಗುರಗೊಳಿಸುತ್ತದೆ. 1 ಚಮಚ ದಾಳಿಂಬೆ ಬೀಜಗಳು, ರೋಸ್ ವಾಟರ್ ಮತ್ತು ತಾಜಾ ಡೈರಿ ಕ್ರೀಮ್ ಮಿಶ್ರಣ ಮಾಡಿಕೊಳ್ಳಿ. ನಂತರ ಈ ಪೇಸ್ಟ್ ಅನ್ನು ತುಟಿಗಳಿಗೆ ಹಚ್ಚಿ 5 ನಿಮಿಷ ಬಿಡಿ ನಂತರ ತಣ್ಣೀರಿನಲ್ಲಿ ತೊಳೆಯಿರಿ. ಪ್ರತಿದಿನ ಹೀಗೆ ಮಾಡಿದರೆ ತುಟಿಯ ಬಣ್ಣ ದಾಳಿಂಬೆಯಂತೆ ಹೊಳೆಯಲಿದೆ.



Click it and Unblock the Notifications
