Latest Updates
-
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ!
ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದವನ್ನು ಪ್ರತಿನಿಧಿಸಲಿದ್ದಾರೆ ಈ ಸುಂದರಿ: ಯಾರೀಕೆ?
ಫ್ಯಾಷನ್ ಜಗತ್ತಿನ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಗಳಲ್ಲಿ ಒಂದು ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್. 2024ರಫೆಮಿನಾ ಮಿಸ್ ವರ್ಲ್ಡ್ ಪಟ್ಟ ನಿಖಿತಾ ಪೊರ್ವೆಲಾ ಪಾಲಾಗಿದೆ, ಸೌಂದರ್ಯ ಕಿರೀಟ ಧರಿಸಿ ನಗು ಚೆಲ್ಲಿದ್ದಾರೆ ಮಧ್ಯಪ್ರದೇಶದ ಈ ಬೆಡಗಿ.
ಭಾರತದ ಎಲ್ಲಾ ರಾಜ್ಯಗಳಿಂದ 30 ಸುಂದರಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು
ಈ ಸ್ಪರ್ಧೆಗೆ ಪ್ರತಿಯೊಂದು ರಾಜ್ಯವನ್ನು ಪ್ರತಿನಿಧಿಸಿ ಮಾಡೆಲ್‌ಗಳು ಭಾಗವಹಿಸಿದ್ದರು, ಒಬ್ಬರು ಕೇಂದ್ರಾಡಳಿತ ಪ್ರದೇಶದಿಂದ ಭಾಗಿಯಾಗಿದ್ದರು, ಹಲವು ಸುತ್ತುಗಳಲ್ಲಿ ಸ್ಪರ್ಧೆ ನಡೆಯಿತು, ಈ ಎಲ್ಲಾ ಸ್ಪರ್ಧೆಗಳಲ್ಲಿ ನಿಖಿತಾ ಪೊರ್ವೆಲಾ ಗೆದ್ದು ಈ ಬಾರಿಯ ಮಿಸ್ ವರ್ಲ್ಡ್ ಸ್ಪರ್ಧೆ ಸ್ಪರ್ಧಿಸುವ ಸ್ಪರ್ಧಿಯಾಗಿದ್ದಾರೆ.


ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಪ್ರಾಮುಖ್ಯತೆ
ಪ್ರತಿವರ್ಷ ಮಿಸ್ ವರ್ಲ್ಡ್ ಸ್ಪರ್ಧೆ ನಡೆಯುತ್ತದೆ, ಮಿಸ್ ವರ್ಲ್ಡ್ ಸ್ಪರ್ಧೆಗೆ ವಿವಿಧ ರಾಷ್ಟ್ರಗಳಿಂದ ಸ್ಪರ್ಧಿಗಳನ್ನು ಕಳುಹಿಸಲಾಗುವುದು. ಭಾರತದಿಂದ ಮಿಸ್ ವರ್ಲ್ಡ್ ಸ್ಪರ್ಧೆಯ ಸ್ಪರ್ಧಿಯಾಗಿ ಫೆಮಿನಾ ಮಿಸ್ ಇಂಡಿಯಾ ವಿಜೇತೆಯನ್ನು ಕಳುಹಿಸಲಾಗುವುದು.
ಯಾರು ಈ ರೂಪಸಿ?
ನಿಖಿತಾ ಪೊರ್ವೆಲಾ ಎಂಬ ಸುಂದರಿ ಮಧ್ಉಪ್ರದೇಶದ ಉಜ್ವೈನ್‌ನ ಹುಡುಗಿ. ಬರೋಡಾ ಯೂನಿವರ್ಸಿಟಿಯ ವಿದ್ಯಾರ್ಥಿನಿ, ಕಲೆಯಲ್ಲಿ ಅತೀವ ಆಸಕ್ತಿಯಿದೆ, ಅಲ್ಲದೆ ಯಾವುದನ್ನು ಕಣ್ಮುಚ್ಚಿ ನಂಬುವ ಹುಡುಗಿಯಲ್ಲ ನಿಖಿತಾ.
60ಕ್ಕೂ ಹೆಚ್ಚು ಡ್ರಾಮಗಳಲ್ಲಿ ನಟಿಸಿದ್ದಾರೆ
ನಟನೆಯಲ್ಲಿ ಆಸಕ್ತಿ ಇರುವ ನಿಖಿತಾ ಪೂರ್ವೆಲಾ 60ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಈ ಸುಂದರಿ 250 ಪೇಜ್‌ನ ಕೃಷ್ಣ-ಲೀಲಾ ಎಂಬ ನಾಟಕ ಕೂಡ ಬರೆದಿದ್ದಾರೆ. ಕೆಲವು ಫೀಚರ್ ಫಿಲ್ಮಂನಲ್ಲಿಯೂ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಆ ಸಿನಿಮಾ ಇಂಟರ್ನ್ಯಾಷನ್ ಸಿನಿಮಾ ಫೆಸ್ಟಿವಲ್‌ನಲ್ಲಿ ಪ್ರದರ್ಶನವಾಗಿದೆ.
ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಗೆ ಸ್ಪರ್ಧಿಗಳನ್ನು ಹೇಗೆ ಆಯ್ಕೆ ಮಾಡಲಾಗುವುದು?
ದೇಶದೆಲ್ಲಡೆ ಆಡಿಷನ್ ನಡೆಸಲಾಗುವುದು: ಎಲ್ಲಾ ರಾಜ್ಯಗಳಲ್ಲಿ ಈ ಸ್ಪರ್ಧೆಗಾಗಿ ಆಡಿಷನ್ ಮಾಡಲಾಗುವುದು. 29 ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶ ಸೇರಿ 30 ಸ್ಪರ್ಧಿಗಳಲ್ಲಿ ಈ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು
ರಾಜ್ಯದಲ್ಲಿ ಗೆದ್ದ ಸ್ಪರ್ಧಿ ಬೂಟ್ ಕ್ಯಾಂಪ್, ಟ್ರೈನಿಂಗ್ ಪ್ರೋಗ್ರಾಂ, ಡಿಜಿಟಲ್ ಕಂಟೆಂಟ್ ಶೂಟ್, ಪರ್ಸನಲ್ ಇಂಟರ್‌ವ್ಯೂವ್ ರೌಂಡ್ ಅಂತ ನಡೆಸಲಾಗುವುದು.
ಫೈನಲ್ ಸ್ಪರ್ಧೆಯಲ್ಲಿ ಸ್ಪರ್ಧಿಗಳ ಸೌಂದರ್ಯ ಮಾತ್ರವಲ್ಲ ಅವರ ವ್ಯಕ್ತಿತ್ವವನ್ನು ಕೂಡ ಪರಿಶೀಲಿಸಿ ಬಳಿಕ ಈ ಸ್ಪರ್ಧೆಯ ವಿಜೇತೆಯನ್ನು ಘೋಷಿಸಲಾಗುವುದು.
ಈ ಬಾರಿಯ ಸ್ಪರ್ಧೆಯಲ್ಲಿ ಟಾಪ್ ನಿಖಿತಾ ಪೂರ್ವೆಲಾ ವಿಜೇತರಾದರೆ ಈ ಸ್ಪರ್ಧೆಗಳು ಟಾಪ್ 5ನಲ್ಲಿ ಬಂದಿದ್ದಾರೆ
ಅಬಾ ಕತ್ರೆ: ಫೆಮಿನಾ ಮಿಸ್ ಇಂಡಿಯಾ ಹಿಮಾಚಲ ಪ್ರದೇಶ 2024
ಅಮೃತಾ ಸೇಠ್: ಫೆಮಿನಾ ಮಿಸ್ ಇಂಡಿಯಾ ಪಂಜಾಬ್ 2024
ಸಾಕ್ಷಿ ಜೋಷಿ: ಫೆಮಿನಾ ಮಿಸ್ ಇಂಡಿಯಾ ಉತ್ತರಾಖಂಡ 2024
ಸುಪ್ರಿಯಾ ದಾಹಿಯಾ : ಮಿಸ್ ಇಂಡಿಯಾ ಹರಿಯಾಣ 2024
ಸಿಫ್ಟಿ ಸಿಂಗ್ ಸಾರಂಗ್: ಫೆಮಿನಾ ಮಿಸ್ ಇಂಡಿಯಾ ದೆಹಲಿ 2024
ವಿಶ್ವ ಸುಂದರಿ ಸ್ಪರ್ಧೆ ದೃಷ್ಟಿಯಿಂದ ಈ ಸ್ಪರ್ಧೆ ತುಂಬಾ ಮುಖ್ಯವಾಗಿದೆ
ಹೌದು ವಿಶ್ವ ಸುಂದರಿ ಸ್ಪರ್ಧೆ ಗೆದ್ದರೆ ಅದು ದೇಶಕ್ಕೆ ಹೆಮ್ಮೆ, ದೇಶವನ್ನು ಪ್ರತಿನಿಧಿಸಿ ವಿಶ್ವ ಸುಂದರಿ ಸ್ಪರ್ಧೆಗೆ ಫೆಮಿನಾ ಮಿಸ್ ಇಂಡಿಯಾ ವಿಜೇತೆ ಸ್ಪರ್ಧಿಸಲಿದ್ದಾರೆ. ಹೀಗಾಗಿ ನಿಖಿತಾ ಮೇಲೆ ದೇಶದ ಜನರ ನಿರೀಕ್ಷೆ ಹೆಚ್ಚಿದೆ, ವಿಶ್ವ ಸುಂದರಿ ಪಟ್ಟ ಭಾರತದ ಪಾಲಿಗೆ ಒಲಿಯುವಂತಾಗಲಿ ಎಂಬುವುದೇ ಜನರ ಬಯಕೆ...
ಭಾರತದಲ್ಲಿ ವಿಶ್ವ ಸುಂದರಿ ಪಟ್ಟ ಇದುವರೆಗೆ 6 ಬಾರಿ ಲಭಿಸಿದೆ,ಅವರಲ್ಲಿ ನಂತರ ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಹೆಸರು ಮಾಡಿದವರು ಐಶ್ವರ್ಯ ರೈ, ಪ್ರಿಯಾಂಕಾ ಚೋಪ್ರಾ....



Click it and Unblock the Notifications