Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಮುಖದಲ್ಲಿ ಮೊಡವೆ ಕಲೆ ಹೋಗುತ್ತಿಲ್ಲವೇ? ಈ ಫೇಸ್‌ಮಾಸ್ಕ್ ತುಂಬಾ ಪರಿಣಾಮಕಾರಿ, ಮುಖದ ಕಾಂತಿಯೂ ಹೆಚ್ಚುವುದು
ಮೊಡವೆ ಕಡಿಮೆಯಾದರೂ ಮೊಡವೆಯ ಕಲೆಗಳು ಹಾಗೆಯೇ ಉಳಿದುಕೊಂಡರೆ ನಮ್ಮ ಅಂದವನ್ನು ಕಳೆಕುಂದಿಸುತ್ತದೆ ಆದರೆ ಈ ಮೊಡವೆ ಕಲೆ ಹೋಗಿಸುವುದು ಹೇಗೆ ಎಂದು ತಿಳಿಯದೆ ಸಿಕ್ಕ ಕ್ರೀಮ್‌ಗಳನ್ನೆಲ್ಲಾ ಟ್ರೈ ಮಾಡ್ತಾ ಇರ್ತಾರೆ, ಆದರೆ ಬಗೆಯ ಕಲೆ ನಿವಾರಣೆಗೆ ಕೆಲವೊಂದು ಮನೆಮದ್ದು ತುಂಬಾನೇ ಪರಿಣಾಮಕಾರಿಯಾಗಿದೆ, ಆ ಮನೆಮದ್ದೇನು ಎಂದು ನೋಡೋಣ:

ಈ ಫೇಸ್ ಮಾಸ್ಕ್ ತುಂಬಾನೇ ಪರಿಣಾಮಕಾರಿ
1 ಚಮಚ ಶ್ರೀಗಂಧದ ಹುಡಿ
2-3 ಎಸಳು ಕೇಸರಿ
2 ಚಮಚ ಹಾಲು
1 ಚಮಚ ರೋಸ್ ವಾಟರ್
ಮಾಡುವ ವಿಧಾನ
ನೀವು ಹಾಲಿನಲ್ಲಿ ಕೇಸರಿ ಹಾಕಿಡಿ, ಒಂದು 20 ನಿಮಿಷ ಬಿಟ್ಟು ಅದರಲ್ಲಿ ಶ್ರೀಗಮಧದ ಪುಡಿ ಸೇರಿಸಿ
ರೋಸ್‌ವಾಟರ್ ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಡಿ
ನಂತರ ಹದ ಬಿಸಿ ನೀರಿನಿಂದ ಮುಖ ತೊಳೆಯಿರಿ
ಈ ರೀತಿ ನೀವು ವಾರದಲ್ಲಿ 3-4 ಬಾರಿ ಮಾಡ್ತಾ ಇದ್ದರೆ ಕೆಲವೇ ತಿಂಗಳಿನಲ್ಲಿ ಕಲೆಗಳು ಸಂಪೂರ್ಣ ನಿವಾರಣೆಯಾಗುವುದು.
ಫೇಸ್‌ಮಾಸ್ಕ್ 2
1 ಚಮಚ ಶ್ರೀಗಂಧದ ಪುಡಿ
2-3 ಎಸಳು ಕೇಸರಿ
1/4 ಚಮಚ ಶುದ್ಧ ಅರಿಶಿಣ ಪುಡಿ
2 ಚಮಚ ಮೊಸರು
ಈ ಸಾಮಗ್ರಿ ಹಾಕಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಮುಖ ತೊಳೆಯಿರಿ. ಈ ರೀತಿ ವಾರದಲ್ಲಿ 3-4 ಬಾರಿ ಮಾಡ್ತಾ ಬಂದರೆ ಮುಖದ ಕಲೆ ಕಡಿಮೆಯಾಗುವುದು. ಆದರೆ ಅರಿಶಿಣ ಕೆಲ ತ್ವಚೆಯವರಿಗೆ ಸೂಟ್ ಆಗಲ್ಲ, ಅವರು ಈ ಫೇಸ್ ಮಾಸ್ಕ್ ಹಾಕಬೇಡಿ.
ಫೇಸ್‌ಮಾಸ್ಕ್ 3
ಬೇಕಾಗುವ ಸಾಮಗ್ರಿ
1 ಚಮಚ ಶ್ರೀಗಂಧಧ ಪುಡಿ
2 ಎಸಳುಕೇಸರಿ
1 ಚಮಚ ಜೇನು
1 ಚಮಚ ರೋಸ್ ವಾಟರ್
ಮಾಡುವ ವಿಧಾನ
ರೋಸ್ ವಾಟರ್‌ಗೆ 2 ಎಸಳು ಕೇಸರಿ ಹಾಕಿಟ್ಟು ಅದಕ್ಕೆ ಜೇನು ಮತ್ತು ಶ್ರೀಗಂಧ ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಹದಿ ಬಿಸಿ ನೀರಿನಿಂದ ಮುಖ ತೊಳೆದರೆ ಮುಖ ಫಳ ಫಳ ಹೊಳೆಯುತ್ತದೆ, ಮೊಡವೆಯಿಂದ ಉಂಟಾದ ಕಲೆ ಕಡಿಮೆಯಾಗುವುದು.
ಫೇಸ್‌ಮಾಸ್ಕ್ 4
1 ಚಮಚ ಗಂಧದ ಪುಡಿ
2-3 ಕೇಸರಿ
1 ಚಮಚ ಬಾದಾಮಿ ಎಣ್ಣೆ
1 ಚಮಚ ರೋಸ್ ವಾಟರ್
ಮಾಡುವ ವಿಧಾನ
ನೀವು ರೋಸ್ ವಾಟರ್‌ನಲ್ಲಿ ಕೇಸರಿ ಹಾಕಿಡಿ
ಶ್ರೀ ಗಂಧದಪುಡಿ ಸೇರಿಸಿ, ಬಾದಾಮಿ ಎಣ್ಣೆ ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ.
ಈ ಫೇಸ್ ಮಾಸ್ಕ್‌ಗಳಲ್ಲಿ ನಿಮಗೆ ಇಷ್ಟವಾದ ಫೇಸ್ ಮಾಸ್ಕ್ ಮುಖಕ್ಕೆ ಬಳಸಬಹುದು, ಇಲ್ಲಾ ಈ ಫೇಸ್ ಮಾಸ್ಕ್ ಅನ್ನು ಒಂದೊಂದೇ ಟ್ರೈ ಮಾಡಲು ಬಯಸಿದರೂ ಈ ಫೇಸ್ ಮಾಸ್ಕ್ ಬಳಸಬಹುದು.
ಈ ಫೇಸ್ ಮಾಸ್ಕ್ ಮುಖದ ಕಲೆ ಹೋಗಲಾಡಿಸಲು ಸಹಕಾರಿ, ಈ ಫೇಸ್ ಮಾಸ್ಕ್ ಮುಖದ ಕಲೆಯನ್ನು ಹೋಗಿಸುವುದು ಮಾತ್ರವಲ್ಲ, ಮುಖಕ್ಕೆ ಫೇಶಿಯಲ್ ರೀತಿ ಹೊಳೆಯುತ್ತದೆ.
ಸೂಚನೆ: ನೀವು ಶುದ್ಧ ಶ್ರೀಗಂಧದ ಪುಡಿ ಬಳಸಬೇಕು.
ಕೇಸರಿ ದುಬಾರಿ, ಆದರೆ ಕ್ರೀಮ್‌ಗಳಿಗೆ ಹೋಲಿಸಿದರೆ ಇದನ್ನು ಬಳಸಬಹುದು, ಅಲ್ಲದೆ ಈ ಕೇಸರಿ ಮುಖದ ಕಾಂತಿಗೆ ತುಂಬಾನೇ ಒಳ್ಳೆಯದು.



Click it and Unblock the Notifications
