Latest Updates
-
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು? -
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಪದ್ಧತಿಯಿಂದ ಇಡೀ ದಿನ ಇರಿ ಫ್ರೆಶ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಕೂಲ್ ಆಗಿರಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ! -
ಹೊಸ ಜೀವನ ಆರಂಭಿಸುವ ಮುನ್ನ ಎಚ್ಚರ: ವಿಚ್ಛೇದನ ಮತ್ತು ಕಾನೂನು ಹಕ್ಕುಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು? -
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು! -
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ!
ಪುರುಷರೇ ಒಣ ಕೂದಲಿನ ಸಮಸ್ಯೆ ನಿಮ್ಮನ್ನು ಕಾಡ್ತಿದ್ಯಾ? ಈ ಟಿಪ್ಸ್ ಟ್ರೈ ಮಾಡಿ
ಕೂದಲಿನ ಸಮಸ್ಯೆ ಕೇವಲ ಮಹಿಳೆಯರನ್ನಷ್ಟೇ ಕಾಡೋದಿಲ್ಲ. ಪುರುಷರಿಗೂ ಅನೇಕ ರೀತಿಯ ಕೂದಲಿನ ಸಮಸ್ಯೆಗಳಿರುತ್ತದೆ. ಹೊಟ್ಟಿನ ಸಮಸ್ಯೆ, ಒಣಗಿದ ಕೂದಲು, ಸೀಳು ಕೂದಲು, ಕೂದಲು ಉದುರುವುದು ಇತ್ಯಾದಿ. ಅದ್ರಲ್ಲೂ ಹೊರಗಡೆ ಹೋಗಿ ಕೆಲಸ ಮಾಡೋ ಹುಡುಗರಲ್ಲಿ ಒಣ ಕೂದಲಿನ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಒಣ ಕೂದಲಿನ ಲಕ್ಷಣಗಳೇನೆಂದರೆ ಕೂದಲು ತನ್ನ ಎಣ್ಣೆಯ ಸಾರವನ್ನು ಕಳೆದುಕೊಂಡು ಸಂಪೂರ್ಣವಾಗಿ ಒಣಗಿ ಹುಲ್ಲುಕಡ್ಡಿಯಂತಾಗುತ್ತದೆ. ಇಂತಹ ಸಂದರ್ಭದಲ್ಲಿ ಕೂದಲಿನ ಆರೈಕೆ ಮಾಡೋದು ತುಂಬಾನೇ ಮುಖ್ಯವಾಗುತ್ತದೆ. ಅಷ್ಟಕ್ಕು ಒಣ ಕೂದಲಿನ ಸಮಸ್ಯೆಯನ್ನು ತಡೆಗಟ್ಟೋದು, ಅದರ ಆರೈಕೆ ಹೇಗಿರಬೇಕು ಅನ್ನೋದನ್ನು ತಿಳಿಯೋಣ.

1. ಶಾಂಪು ಬಳಕೆಯನ್ನು ಕಡಿಮೆ ಮಾಡಿ
ಕೂದಲಿನ ಆರೋಗ್ಯದ ದೃಷ್ಟಿಯಿಂದ ಅತಿಯಾಗಿ ಶ್ಯಾಂಪು ಬಳಸೋದು ಒಳ್ಳೆಯದಲ್ಲ. ಅನೇಕ ಹುಡುಗರು ಪ್ರತಿನಿತ್ಯ ತಲೆಗೆ ಸ್ನಾನ ಮಾಡುತ್ತಾರೆ. ಇನ್ನೂ ಕೆಲವರು ದಿನಕ್ಕೆ ಎರಡು ಬಾರಿ ತಲೆಸ್ನಾನ ಮಾಡುತ್ತಾರೆ. ದಿನಕ್ಕೆ ಎರಡು ಬಾರಿ ಶ್ಯಾಂಪು ಬಳಕೆ ಮಾಡುವವರು ಇದ್ದಾರೆ. ಇದು ಕೂದಲಿನ ಆರೋಗ್ಯಕ್ಕೆ ತುಂಬಾನೇ ಕೆಟ್ಟದು. ವಾರಕ್ಕೆ ಎರಡು ಬಾರಿ ಶ್ಯಾಂಪು ಬಳಸಿದರಷ್ಟೇ ಸಾಕು. ಒಂದು ವೇಳೆ ದಿನಾಲೂ ಶ್ಯಾಂಪು ಬಳಸಲೇ ಬೇಕೆಂದಿದ್ದರೆ ಯಾವುದಾದರೂ ಸೌಮ್ಯವಾದ ಶ್ಯಾಂಪು ಬಳಸಿದರಷ್ಟೇ ಸಾಕು. ಇನ್ನೂ ಅತಿಯಾಗಿ ಕಂಡಿಷನರ್ ಬಳಸೋದು ಒಳ್ಳೆಯದಲ್ಲ.
2. ಸರಿಯಾದ ಪ್ರಾಡಕ್ಟ್ ಬಳಕೆ ಮಾಡಿ
ಹೆಚ್ಚಿನ ಪುರುಷರು ತಮ್ಮ ಕೂದಲಿನ ಬಗ್ಗೆ ಹೆಚ್ಚಾಗಿ ಚಿಂತಿಸೋದಕ್ಕೆ ಹೋಗೋದಿಲ್ಲ. ಮನೆಯಲ್ಲಿರುವ ಸೋಪು ಅಥವಾ ಮಹಿಳೆಯರು ಬಳಸುವ ಶ್ಯಾಂಪುವನ್ನು ಬಳಕೆ ಮಾಡುತ್ತಾರೆ. ಹೆಚ್ಚು ಕೆಮಿಕಲ್ ಇರುವ ಶ್ಯಾಂಪುಗಳನ್ನು ನಿತ್ಯ ಬಳಕೆ ಮಾಡುವುದರಿಂದ ನಿಮ್ಮ ಕೂದಲು ಒಣಗಿದಂತಾಗುತ್ತದೆ. ಹೀಗಾಗಿ ವೈದ್ಯರ ಸಲಹೆ ಪಡೆದು ಸೌಮ್ಯವಾದ ಶ್ಯಾಂಪುಗಳನ್ನೇ ಬಳಕೆ ಮಾಡಿ. ಇದರಿಂದ ನಿಮ್ಮ ಕೂದಲು ಆರೋಗ್ಯವಾಗಿರುತ್ತದೆ.
3. ಬ್ಲೋ ಡ್ರೈ ಬಳಕೆ ಮಾಡದಿರಿ
ಅತಿಯಾಗಿ ಬ್ಲೋ ಡ್ರೈ ಬಳಕೆ ಮಾಡೋದು ಒಳ್ಳೆಯದಲ್ಲ. ಪುರುಷರು ಸಾಮಾನ್ಯವಾಗಿ ಹೊರಗಡೆ ಹೋಗುವಾಗ ತರಾತುರಿಯಲ್ಲಿ ಹೊರಡುತ್ತಾರೆ. ಹೀಗಾಗಿ ಸ್ನಾನ ಮಾಡಿದ ನಂತರ ಕೂದಲು ಒಣಗಿಸೋದಕ್ಕೆ ಸಮಯವಿಲ್ಲ ಎಂದು ಬ್ಲೋ ಡ್ರೈ ಬಳಕೆ ಮಾಡ್ತಾರೆ. ಬ್ಲೋ ಡ್ರೈಯಿಂದ ಬರುವ ಬಿಸಿಗಾಳಿ ನಿಮ್ಮ ಕೂದಲಿನ ಬುಡವನ್ನು ದುರ್ಬಲಗೊಳಿಸೋದು ಮಾತ್ರವಲ್ಲ. ಜೊತೆಗೆ ಕೂದಲನ್ನು ಒಣಗಿದಂತೆ ಮಾಡುತ್ತದೆ. ಹೀಗಾಗಿ ಕೂದಲು ಒಣಗಿಸಲು ಟವಲ್ ಬಳಸೋದೇ ಉತ್ತಮ.
4. ಎಣ್ಣೆಯಿಂದ ಮಸಾಜ್ ಮಾಡಿ
ಒಣ ಕೂದಲು ಹಾಗೂ ಒಣ ಚರ್ಮಕ್ಕೆ ಅತ್ಯತ್ತಮ ಪರಿಹಾರವೆಂದರೆ ಎಣ್ಣೆಯಿಂದ ಮಸಾಜ್ ಮಾಡೋದು. ರಾತ್ರಿ ಕೂದಲಿಗೆ ಎಣ್ಣೆ ಹಚ್ಚಿಕೊಂಡು ಮಾರನೇ ದಿನ ಶ್ಯಾಂಪುವಿನಿಂದ ಕೂದಲನ್ನು ತೊಳೆಯಿರಿ. ಸಾಧ್ಯವಾದಷ್ಟು ತೆಂಗಿನ ಎಣ್ಣೆ, ಆಲಿವ್ ಎಣ್ಣೆ, ಸೂರ್ಯಕಾಂತಿ ಎಣ್ಣೆ ಅಥವಾ ಸಾವಯಾವ ಎಣ್ಣೆಯನ್ನೇ ತಲೆಗೆ ಬಳಸಿ. ಇದು ನಿಮ್ಮ ಕೂದಲಿಗೆ ಮಸಾಜ್ ಮಾಡೋದು ಮಾತ್ರವಲ್ಲದೇ ನಿಮ್ಮ ನೆತ್ತಿಯನ್ನು ತೇವಗೊಳಿಸಲು ಸಹಾಯ ಮಾಡುತ್ತದೆ.
5. ತಣ್ಣೀರಿನಿಂದ ಸ್ನಾನ ಮಾಡಿ
ಅನೇಕ ಜನರಿಗೆ ಬಿಸಿ ನೀರಿಲ್ಲದೇ ಸ್ನಾನ ಮಾಡೋದಿಕ್ಕೆ ಆಗೋದಿಲ್ಲ. ಅತಿಯಾಗಿ ಬಿಸಿಯಾದ ನೀರನ್ನು ಬಳಸುವ ಅಭ್ಯಾಸ ಖಂಡಿತ ಒಳ್ಳೆಯದಲ್ಲ. ಇದು ನಿಮ್ಮ ನೆತ್ತಿಯನ್ನು ಸುಡುವುದು ಮಾತ್ರವಲ್ಲದೇ ಕೂದಲಿನ ಬುಡಕ್ಕೂ ಹಾನಿಯುಂಟು ಮಾಡುತ್ತದೆ. ಇದರಿಂದ ನಿಮ್ಮ ಕೂದಲು ತೇವ ಕಳೆದುಕೊಂಡು ಹುಲ್ಲು ಕಡ್ಡಿಯಂತಾಗುತ್ತದೆ. ಹೀಗಾಗಿ ತೆಲೆ ಸ್ನಾನಕ್ಕೆ ಆದಷ್ಟು ತಣ್ಣೀರನ್ನು ಉಪಯೋಗಿಸಿದರೆ ಒಳ್ಳೆಯದು. ಬಿಸಿ ನೀರು ಬಳಸೋದೇ ಬೇಡ.
6. ಕಂಡೀಷನಿಂಗ್ ಚಿಕಿತ್ಸೆ ಮಾಡಿಸಿ
ನಿಮ್ಮ ಕೂದಲಿನ ಶುಷ್ಕತೆ ತೀವ್ರವಾಗಿದ್ದರೆ ಮತ್ತು ದಿನದಿಂದ ದಿನಕ್ಕೆ ಕೂದಲು ಉದುರುತ್ತಿದ್ದರೆ ನೀವು ಆಳವಾದ ಕಂಡೀಷನಿಂಗ್ ಚಿಕಿತ್ಸೆ ಮಾಡಿಸೋದೇ ಒಳ್ಳೆಯದು. ಅಥವಾ ನಿಮ್ಮ ಕೂದಲಿಗೆ ಒಪ್ಪುಂತಹ ಆಳವಾದ ಕಂಡೀಷನಿಂಗ್ ಶ್ಯಾಂಪೂ ಮತ್ತು ಕಂಡೀಷನರ್ ಅನ್ನು ಖರೀದಿಸಿ. ಮತ್ತು ಅವುಗಳನ್ನು ಸರಿಯಾಗಿ ಮನೆಯಲ್ಲೇ ಬಳಕೆ ಮಾಡಿ. ಇನ್ನೂ ಕಂಡೀಷನಿಂಗ್ ಹೇರ್ ಮಾಸ್ಕ್ ಅನ್ನು ಕೂಡ ಬಳಸಬಹುದು. ಹೇರ್ ಸಿರಮ್ ಅನ್ನು ಕೂಡ ಬಳಕೆ ಮಾಡಬಹುದು.
ಪುರುಷರು ಕೂಡ ತಮ್ಮ ಕೂದಲಿನ ಆರೋಗ್ಯದ ಕಾಳಜಿ ಮಾಡುವುದು ತುಂಬಾನೇ ಅಗತ್ಯವಾಗಿದೆ. ಇತ್ತೀಚಿಗಂತೂ ಕೂದಲಿಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಈಗಿನಿಂದಲೇ ಎಚ್ಚೆತ್ತುಕೊಂಡ್ರೆ ತುಂಬಾನೇ ಒಳ್ಳೆಯದು. ದಿನ ನಿತ್ಯ ಕೂದಲಿನ ಆರೈಕೆ ಮಾಡುತ್ತಿದ್ದರೆ ಇಂತಹ ಯಾವುದೇ ಸಮಸ್ಯೆಗಳು ಕಾಣಿಸಿಕೊಳ್ಳೋದಿಲ್ಲ.



Click it and Unblock the Notifications
