Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಬಿಳಿ ಕೂದಲು ಕಪ್ಪಾಗಿಸಲು ಮನೆಯಲ್ಲೇ ಇದೆ ಸುಲಭ ದಾರಿ! ಗ್ಯಾರಂಟಿ ನ್ಯಾಚುರಲ್ ಕಲರ್..!!
ಸಾಮಾನ್ಯವಾಗಿ ಇತ್ತೀಚಿಗೆ ಯುವ ಸಮಯದಾಯದ ಬಹುದೊಡ್ಡ ಸಮಸ್ಯೆ ಅಂದ್ರೆ ಕೂದಲು ಬಹುಬೇಗ ಬಿಳಿಯಾಗುವುದು. ಸಾಮಾನ್ಯವಾಗಿ 40 ಇಲ್ಲವೆ 45 ವರ್ಷದ ದಾಟಿದ ಬಳಿಕೆ ಬಿಳಿ ಕೂದಲು ಕಾಣಿಸಿಕೊಳ್ಳಬೇಕು. ಆದರೆ ಈಗ ಚಿಕ್ಕ ಮಕ್ಕಳಿಂದ ಹಿಡಿದು ಮಧ್ಯ ವಯಸ್ಕರಲ್ಲೂ ಕೂದಲು ಬಿಳಿಯಾಗುವ ಸಮಸ್ಯೆಯನ್ನು ನೋಡಬಹುದು. ಈ ಸಮಸ್ಯೆಗೆ ಹತ್ತಾರು ಕಾರಣಳಿಗೆ ಹಾಗೆ ಪರಿಹಾರಗಳು ಕೂಡ ಹೆಚ್ಚಾಗಿವೆ.
ಬಿಳಿ ಕೂದಲು ಕಪ್ಪಾಗಿಸಲು ಸುಲಭದ ಉಪಯಾವಾಗಿ ಮಾರುಕಟ್ಟೆಯಲ್ಲಿ ಸಿಗುವಂತಹ ಕಪ್ಪು ಬಣ್ಣವನ್ನು ಬಹುತೇಕರು ಹಚ್ಚಿಕೊಳ್ಳುತ್ತಾರೆ. ಇದು 30 ದಿನಗಳ ಕಾಲ ಕೂದಲಿಗೆ ಬಣ್ಣ ನೀಡಬಹುದು. ಆದ್ರೆ ನೀವು ನೈಸರ್ಗಿಕವಾಗಿ ಕಪ್ಪು ಕೂದಲು ಬರುವುದನ್ನೇ ಶಾಶ್ವತವಾಗಿ ತಡೆಯುವುದು ಬಹಳ ಉತ್ತಮ. ಹಾಗೆ ಮನೆಯಲ್ಲೇ ನಾವು ಈ ರೀತಿಯ ಉಪಾಯ ಮಾಡುವ ಮೂಲಕ ಬಿಳಿ ಕೂದಲಿಗೆ ಕಡಿವಾಣ ಹಾಕಬಹುದು.

ವಯಸ್ಸಿಗೂ ಮುನ್ನವೇ ಬಿಳಿ ಕೂದಲು ಬಂದರೆ ಎಲ್ಲರಲ್ಲೂ ಆತಂಕ ಮನೆ ಮಾಡೋದು ಕಾಮನ್. ವಯಸ್ಸಾದಂತೆ ಕಾಣಿಸಲು ಆರಂಭಿಸುತ್ತಾರೆ ಎಂಬ ಭಯದಲ್ಲೇ ಕಳೆಯುಬೇಕಾಗುತ್ತೆ. ಹಾಗೆ ಸಿಕ್ಕ ಸಿಕ್ಕ ಔಷಧಿಗಳು, ಕ್ರೀಮ್‌ಗಳು, ಚಿಕಿತ್ಸೆ, ಶಾಂಪೂ, ನಾಟಿ ಔಷಧಿ ಬಳಸುವುದು ನೋಡಬಹುದು. ಇದರಿಂದ ಮತ್ತಷ್ಟು ಸಮಸ್ಯೆಗಳು ಉಂಟಾಗುವುದು ಕೂಡ ಇದೆ.
ಆದ್ರೆ ನಾವಿಂದು ಬಿಳಿ ಕೂದಲು ಸಮಸ್ಯೆಗೆ ಸುಲಭವಾಗಿ ಮನೆಯಲ್ಲೇ ಒಂದು ನೈಸರ್ಗಿಕ ಚಿಕಿತ್ಸೆ ಅಥವಾ ನೈಸರ್ಗಿಕ ಪರಿಹಾರ ಮಾಡಿಕೊಳ್ಳುವ ಕುರಿತಾಗಿ ತಿಳಿದುಕೊಳ್ಳೋಣ. ಇದರಿಂದ ಬಿಳಿ ಕೂದಲು ಸಮಸ್ಯೆಗೆ ಪರಿಹಾರ ಪಡೆಯುವುದು ಹೇಗೆ ಎಂಬುದನ್ನು ತಿಳಿಯೋಣ. ಅದ್ರಲ್ಲೂ ಮೆಹಂದಿಯನ್ನು ಬಳಸಿಕೊಂಡು ಹೇಗೆ ಕೂದಲನ್ನು ಕಪ್ಪು ಮಾಡಬಹುದು ಎಂಬುದನ್ನು ನಾವಿಂದು ತಿಳಿಯೋಣ.
ಅಂಗಡಿಯಲ್ಲಿ ಸಿಗುವ 100% ಪ್ಯೂರ್ ಮೆಹಂದಿ ಪೌಡರ್ ತೆಗೆದುಕೊಳ್ಳಬೇಕು. ಹಾಗೆ ನೆಲ್ಲಿಕಾಯಿ ಪುಡಿ ಸಹ ಖರೀದಿಸಿ ತರಬೇಕು. ನಂತರ ಈಗ ಒಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಒಂದು ಲೋಟ ನೀರು ಹಾಕಿ 2 ಸ್ಪೂನ್ 1ಟೀ ಪುಡಿ 1 ಸ್ಪೂನ್ ಕಾಫಿ ಪುಡಿ ಹಾಕಿ ಕುದಿಬರಲು ಬಿಡಿ.
ಈಗ ಒಂದು ದೊಡ್ಡ ಪಾತ್ರೆಯಲ್ಲಿ ಮೆಹಂದಿ ಪುಡಿ ಹಾಗೆ ಅರ್ಧ ಕಪ್ ನೆಲ್ಲಿಕಾಯಿ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಡ್ರೈ ಮಿಕ್ಸ್ ಮಾಡಿಕೊಂಡು ಇಟ್ಟುಕೊಳ್ಳಿ. ಈಗ ಒಲೆಯಲ್ಲಿ ಕುದಿಬರುತ್ತಿರುವ ಮಿಶ್ರಣ ಆಗಾಗ ಮಿಕ್ಸ್ ಮಾಡಿ. ಬಹಳ ಸಮಯ ಕುದಿಸಿ. ನೀರು ಅರ್ಧವಾಗುವಷ್ಟು ಕಡಿಮೆಯಾಗಬೇಕು. ಇದು ಕಹಿ ಕಾಫಿಯಂತೆ ಬರಬೇಕು.
ನಂತರ ಒಲೆ ಆಫ್ ಮಾಡಿಕೊಂಡು ಜರಡಿ ಹಿಡಿದು ಬರೀ ನೀರನ್ನು ತೆಗೆದುಕೊಳ್ಳಿ. ನಂತರ ಇದನ್ನು ತಣ್ಣಗಾಗಲು ಬಿಡಿ. ಈಗ ಈ ಕಪ್ಪು ಬಣ್ಣದ ನೀರನ್ನು ಪಾತ್ರೆಯಲ್ಲಿನ ಮೆಹಂದಿ ನಿಂಬೆ ಪುಡಿಯ ಮಿಶ್ರಣಕ್ಕೆ ಹಾಕಿಕೊಳ್ಳಿ. ನಂತರ ಚೆನ್ನಾಗಿ ಕಲಸಿಕೊಳ್ಳಿ. ಗಂಟುಗಳು ಇಲ್ಲದಂತೆ ಇಟ್ಟಿನಂತೆ ಅದು ಬರಬೇಕು. ಗಟ್ಟಿ ಮೊಸರಿನ ಹದದಲ್ಲಿ ಇದು ಬರುವಂತೆ ಮಿಕ್ಸ್ ಮಾಡಿಕೊಳ್ಳಿ.
ಇದು ಮಿಕ್ಸ್ ಆದ ಬಳಿಕ 6 ರಿಂದ 7 ಗಂಟೆಗಳ ಕಾಲ ಹಾಗೆಯೇ ಬಿಡಬೇಕು. ಬೆಳಗ್ಗೆ ಈ ಮಿಕ್ಸ್ ಮಾಡಿದ್ರೆ ಸಂಜೆ ಬಳಸಬಹುದು. ಈಗ ಇದನ್ನು ಒಮ್ಮೆ ಮಿಕ್ಸ್ ಮಾಡಿಕೊಂಡು ತಲೆ ಕೂದಲಿಗೆ ಹಚ್ಚಬೇಕು. ಕೈಗೆ ಗ್ಲೌಸ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ತಲೆ ಕೂದಲಿಗೆ ಹಚ್ಚಿಕೊಳ್ಳಬೇಕು. ಹೀಗೆ ಹಚ್ಚಿಕೊಂಡ ಬಳಿಕ 2 ಗಂಟೆಯಾದರು ಬಿಟ್ಟು ತಲೆ ಸ್ನಾನ ಮಾಡಬೇಕು.
ತಲೆ ಸ್ನಾನ ಮಾಡುವಾಗ ಯಾವುದೇ ಸೋಪು ಅಥವಾ ಶಾಂಪೂ ಬಳಸಬೇಡಿ. ಹಾಗೆಯೆ ಚೆನ್ನಾಗಿ ನೀರಿನಿಂದ ತೊಳೆದುಕೊಳ್ಳಿ. ಸ್ನಾನದ ಬಳಿಕ ತಲೆಗೆ ಕೊಬ್ಬರಿಯನ್ನು ಕೈಗೆ ಸವರಿಕೊಂಡು ಮೆಲ್ಲಗೆ ಹಚ್ಚಿಕೊಳ್ಳಿ. ಇದರಿಂದ ಕೂದಲು ಮತ್ತಷ್ಟು ಕಪ್ಪಗೆ ಬರಲಿದೆ. ಈ ರೀತಿಯಾಗಿ ವಾರದಲ್ಲಿ 1 ಬಾರಿ ಮಾಡಿ ನೋಡಿ.



Click it and Unblock the Notifications
