Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಮದುಮಗಳೇ... ಕೆಲ ವಾರಗಳಿರುವಾಗ ತ್ವಚೆ ಆರೈಕೆ ಹಾಗೂ ಡಯಟ್‌ನಲ್ಲಿ ಈ ಮಿಸ್ಟೇಕ್ಸ್ ಮಾಡಲೇಬೇಡಿ
ಮದುವೆಗೆ ಇನ್ನೇನು ಒಂದೆರಡು ವಾರವಿದೆ ಎಂದಾಗ ತ್ವಚೆ ಆರೈಕೆ ಕಡೆ ತುಂಬಾನೇ ಗಮನ ಕೊಡುತ್ತಾರೆ. ಈ ರೀತಿ ಮಾಡುವುದು ಇದೆಯೆಲ್ಲಾ ಅದು ದೊಡ್ಡ ಬ್ಯೂಟಿ ಮಿಸ್ಟೇಕ್ಸ್. ಹೌದು ಮದುವೆಗೆ ಇನ್ನೇನು ಒಂದು ಅಥವಾ ಎರಡು ವಾರವಿರುವಾಗ ತ್ವಚೆ ಮೇಲೆ ಯಾವುದೇ ಪ್ರಯೋಗ ಮಾಡಬಹುದು ಅಲ್ಲದೆ ಆಹಾರಕ್ರಮದಲ್ಲೂ ಬದಲಾವಣೆ ತರಬಾರದು.
ಹೌದು ನೀವು ಮದುವೆಗೆ ಕೆಲವು ವಾರಗಳಿರುವಾಗ ನೀವು ತ್ವಚೆ ಆರೈಕೆಯಲ್ಲಿ ಈ ಮಿಸ್ಟೇಕ್ಸ್ ಮಾಡಲೇಬೇಡಿ, ಡಯಟ್‌ನಲ್ಲೂ ಅಷ್ಟೇ...
1. ಹೊಸ ಫೇಶಿಯಲ್ ಮಾಡಿಸುವುದು
ಮದುಮಗಳು ಅಂತ ಪಾರ್ಲರ್ ಅವರಿಗೆ ಗೊತ್ತಾದ ತಕ್ಷಣ ಅವರು ನಿನಗೆ ಈ ಅನೇಕ ಫೇಶಿಯಲ್ ಹೆಸರು ಹೇಳಿ ಮದುಮಗಳಿಗೆ ಈ ಬಗೆಯ ಫೇಶಿಯಲ್ ತುಂಬಾನೇ ಅಂತೆಲ್ಲಾ ಸಲಹೆ ನೀಡುತ್ತಾರೆ.

ನಿಮಗೂ ಮತ್ತಷ್ಟು ಆಕರ್ಷಕವಾಗಿ ಕಾಣಬೇಕೆಂಬ ಆಸೆ ಇರುವುದರಿಂದ ಟ್ರೈ ಮಾಡೋಣ ಅಂತ ಅನಿಸಿ ಒಕೆ ಅಂತ ಹೇಳುತ್ತೀರಿ, ಆದರೆ ಆ ಫೇಶಿಯಲ್ ನಿಮ್ಮ ಮುಖಕ್ಕೆ ಸೂಟ್ ಆಗುತ್ತೋ, ಇಲ್ವೋ ಎಂಬುವುದು ಗೊತ್ತಿರುವುದಿಲ್ಲ. ಸೂಟ್ ಆಗದಿದ್ದರೆ ಮೊಡವೆ ಅಥವಾ ಬಿಳಿ ಬಿಳಿ ಪ್ಯಾಚ್ ಉಂಟಾಗುವ ಅಪಾಯವಿದೆ. ಇತ್ತೀಚೆಗೆ ಹಾಸನದಲ್ಲಿ ಮದುಮಗಳು ಫೇಶಿಯಲ್ ಮಾಡಿಸಿ ಮುಖದ ಆಕಾರ ಬದಲಾಗಿ ಮದುವೆ ನಿಂತ ಹೋದ ಪ್ರಸಂಗ ನೆನಪಿರಬಹುದು ಅಲ್ವಾ? ಆದ್ದರಿಂದ ಮದುವೆ ಹತ್ರ ಬರುವಾಗ ಯಾವುದೇ ಹೊಸ ಬಗೆಯ ಸ್ಕಿನ್ ಕೇರ್ ಮಾಡದೆ ಇರುವುದು ಒಳ್ಳೆಯದು.
2. ಹೊಸ ಕ್ರೀಮ್‌ಗಳನ್ನು ಬಳಸಬೇಡಿ
ಮದುವೆ ದಿನಾಂಕ ಹತ್ರ ಬರುತ್ತಿದ್ದಂತೆ ಹೊಸ ಕ್ರೀಮ್ ಬಳಸಬೇಡಿ. ಒಂದು ವೇಳೆ ನಿಮ್ಮ ಸ್ಕಿನ್‌ಗೆ ಸೂಟ್ ಆಗದಿದ್ದರೆ ಮುಖದಲ್ಲಿ ಮೊಡವೆ ಬರಬಹುದು, ಕೆಲ ಕ್ರೀಮ್‌ಗಳಿಂದ ರಿಯಾಕ್ಷನ್ ಆಗಬಹುದು ಆದ್ದರಿಂದ ಈ ಬಗ್ಗೆಯ ಪ್ರಯತ್ನ ಬೇಡ್ವೆ ಬೇಡ.
3. ತುಂಬಾ ಎಕ್ಸ್‌ಫೋಲೆಟ್ ಮಾಡಬೇಡಿ
ಎಕ್ಸ್‌ಫೋಲೆಟ್ ಮಾಡುವುದರಿಂದ ಕಶ್ಮಲಗಳನ್ನು ಹೋಗಲಾಡಿಸಲು ಸಹಕಾರಿ. ಹಾಗಂತ ತುಂಬಾ ಎಕ್ಸ್‌ಫೋಲೆಟ್ ಮಾಡಬೇಡಿ, ಇದುವರೆಗೆ ಹೇಗೆ ಎಕ್ಸ್‌ಫೋಲೆಟ್ ಮಾಡುತ್ತಿದ್ದೀರಿ ಹಾಗೇ ಮಾಡಿ.
4. ಸನ್‌ಸ್ಕ್ರೀನ್ ಬಳಸದೆ ಇರುವುದು
ಸನ್‌ಸ್ಕ್ರೀನ್ ಬಳಸದಿದ್ದರೆ ಸ್ಕಿನ್ ಟ್ಯಾನ್ ಆಗುವುದು, ಇದರಿಂದ ಮುಖ ಕಳೆಕುಂದುವುದು. ಮನೆಯಲ್ಲಿಯೇ ಇದ್ದರೂ ಕೂಡ ಮುಖಕ್ಕೆ ಸನ್‌ಸ್ಕ್ರೀನ್ ಹಚ್ಚಲು ಮರೆಯದಿರಿ.
5. ಮೊಡವೆ ಇದ್ದರೆ ಚಿವುಟಬೇಡಿ
ಮೊಡವೆಯನ್ನು ಚಿವುಟುವುದರಿಂದ ಮುಖ ಕಲೆ ಕಲೆ ಕಾಣುವುದು. ಆದ್ದರಿಂದ ಮೊಡವೆ ಸಮಸ್ಯೆ ಇದ್ದರೆ ಮುಖವನ್ನು ಚಿವುಟಬೇಡಿ ಅಲ್ಲದೆ ಕ್ಲೀನ್‌ಅಪ್ ಮಾಡಿಸಬೇಡಿ. ನೀವು ಮದುವೆಗೆ ಒಂದು ವಾರ ಇರುವಾಗ ಕ್ಲೀನ್‌ಅಪ್ ಮಾಡಿಸಿದರೆ ಮೊಡವೆ ಸಮಸ್ಯೆ ಹೆಚ್ಚಾಗುವುದು. ಮೊಡವೆ ಸಮಸ್ಯೆ ಇದ್ದರೆ ಮುಖಕ್ಕೆ ಯಾವುದೇ ಫೇಶಿಯಲ್ ಆಗಲಿ, ಹೊಸ ಪ್ರಯೋಗಗಳನ್ನಾಗಲಿ ಮಾಡಿದಿರುವುದು ಒಳ್ಳೆಯದು. ನೀವು ಇಷ್ಟು ದಿನ ಹೇಗೆ ಆರೈಕೆ ಮಾಡುತ್ತಿದ್ದೀರೋ ಹಾಗೆ ಆರೈಕೆ ಮಾಡಿ.
ಆಹಾರಕ್ರಮದ ಕಡೆಯೂ ಗಮನವಿರಲಿ
ನೀವು ಏನು ತಿನ್ನುತ್ತೀರಿ ಅದು ನಿಮ್ಮ ತ್ವಚೆಯ ಮೇಲೆ ಪ್ರಭಾವ ಬೀರುವುದು. ಆದ್ದರಿಂದ ಅಧಿಕ ಎಣ್ಣೆಯಲ್ಲಿ ಕರಿದ ಪದಾರ್ಥ ತಿನ್ನುವುದು, ನಾನ್‌ವೆಜ್ ತಿನ್ನುವುದು ಮಾಡಬೇಡಿ. ಅಲ್ಲದೆ ಹೊಸ ಆಹಾರಕ್ರಮ ಕೂಡ ಟ್ರೈ ಮಾಡಬೇಡಿ, ಡಯಟ್ ಮಾಡುವುದೆಲ್ಲಾ ಮಾಡಬೇಡಿ. ಕೆಲವರು ಮದುವೆ ಹತ್ರ ಬರುವಾಗ ಸ್ಲಿಮ್ ಕಾಣಬೇಕು ಎಂದು ಡಯಟ್ ಮಾಡುತ್ತಾರೆ. ಅದೆಲ್ಲಾ ಮಾಡಲೇಬಾರದು. ಇದ್ದಕ್ಕಿದ್ದಂತೆ ಮೈ ತೂಕ ಕಡಿಮೆ ಮಾಡಿಕೊಂಡರೆ ಮುಖ ಇಳಿದು ಹೋದಂತೆ ಕಾಣುವುದರಿಂದ ಚೆನ್ನಾಗಿ ಕಾಣಿಸಲ್ಲ, ಆದ್ದರಿಂದ ಈ ರೀತಿಯ ಮಿಸ್ಟೇಕ್ಸ್ ಮಾಡಲೇಬೇಡಿ.
ಡಯಟ್ ಹೇಗಿರಬೇಕು?
ಮದುವೆ ಹತ್ರ ಬರುತ್ತಿದ್ದಂತೆ ನಿಮ್ಮ ಆಹಾರಕ್ರಮದ ಕಡೆಗೆ ತುಂಬಾನೇ ಗಮನ ನೀಡಿ. ತರಕಾರಿ, ಹಣ್ಣುಗಳನ್ನು ಸೇವಿಸಿ, ತಾಜಾ ಹಣ್ಣಿನ ಜ್ಯೂಸ್ ಸೇವಿಸಿ, ಇದರಿಂದ ಮುಖದ ಗ್ಲೋ ಹೆಚ್ಚಾಗುವುದು. ನೀವು ಮದುವೆಯಲ್ಲಿ ಗ್ಲೋ ಹೆಚ್ಚಿಸಲು ಆರೋಗ್ಯಕರ ಆಹಾರವನ್ನಷ್ಟೇ ಸೇವಿಸಿ.



Click it and Unblock the Notifications

