Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಕೂದಲಿನ ತುದಿ ಆಗಾಗ ಕತ್ತರಿಸುತ್ತಿದ್ದರೆ ಕೂದಲು ಉದ್ದ ಬೆಳೆಯುವುದೇ?
ಕೂದಲು ಚೆನ್ನಾಗಿ ಉದ್ದ ಬರಬೇಕಾ, ಹಾಗಾದರೆ ಟ್ರಿಮ್ ಮಾಡಬೇಕು ಎಂದು ಹೇಳುವುದನ್ನು ಕೇಳಿರಬಹುದು. ಟ್ರಿಮ್ ಮಾಡಿದರೆ ಕೂದಲು ಉದ್ದ ಬರಲು ಸಹಕಾರಿಯಾಗುವುದೇ? ಯಾವಾಗ ಕೂದಲನ್ನು ಟ್ರಿಮ್ ಮಾಡಬೇಕು? ಕೂದಲಿನ ಆರೋಗ್ಯಕ್ಕೆ ಅನುಸರಿಸಬೇಕಾದ ಸೂಕ್ತ ಕ್ರಮಗಳೇನು ಎಂದು ನೋಡೋಣ:
ಕೂದಲನ್ನು ಕತ್ತರಿಸುವುದರಿಂದ ಕೂದಲು ಉದ್ದ ಬರುವುದೇ?
ತುಂಬಾ ಉದ್ದ ಕೂದಲು ಹೊಂದಿರುವವರನ್ನು ನೀವು ಕೇಳಿದರೆ ನಾನು ಆಗಾಗ ಟ್ರಿಮ್ ಮಾಡ್ತೀನಿ ಎಂದು ಹೇಳುತ್ತಾರೆ. ತುಂಬಾ ಜನ ಈ ರೀತಿ ಹೇಳುವುದನ್ನು ನಾನು ಕೇಳಿದ್ದೇನೆ. ಹಾಗಾದರೆ ಕೂದಲು ಟ್ರಿಮ್ ಮಾಡುತ್ತಿದ್ದರೆ ಕೂದಲು ಉದ್ದ ಬೆಳೆಯುವುದೇ? ಖಂಡಿತ ಇಲ್ಲ.

ಏಕೆಂದರೆ ಕೂದಲು ಟ್ರಿಮ್ ಮಾಡಿದಾಗ ಉದ್ದ ಬೆಳೆಯುವುದಿಲ್ಲ. ಬದಲಿಗೆ ಕೂದಲಿನ ಬುಡ ಬಲವಾಗಿದ್ದರೆ ಮಾತ್ರ ಕೂದಲು ಉದ್ದ ಬರುವುದು.
ಹಾಗಾದರೆ ಕೂದಲನ್ನು ಕತ್ತರಿಸಬಾರದೇ?
ಕತ್ತರಿಸಬೇಕು, ಸೀಳು ಕೂದಲು ಉಂಟಾದಾಗ ಅಂದರೆ ಕೂದಲು ಕವಲೊಡೆದರೆ ಕೂದಲು ಉದ್ದ ಬೆಳೆಯುವುದಿಲ್ಲ, ಈ ರೀತಿಯಾದಾಗ ಕೂದಲಿನ ತುದಿಗೆ ಕತ್ತರಿ ಹಾಕಿದರೆ ಮಾತ್ರ ಉದ್ದ ಬೆಳೆಯುವುದು.
ಕೂದಲು ಉದ್ದ ಬೆಳೆಯಲು ಈ ಅಂಶಗಳು ಪ್ರಮುಖವಾಗುವುದು:
ಜೀನ್ ತುಂಬಾನೇ ಮುಖ್ಯ
ಹೌದು ನಮ್ಮ ಕೂದಲಿನ ಆರೋಗ್ಯ ವಂಶಪಾರಂಪರ್ಯವಾಗಿಯೂ ದೊರೆಯುವುದು. ಪೋಷಕರಿಗೆ ದಟ್ಟವಾದ ಕೂದಲಿದ್ದರೆ ಅಥವಾ ಅಜ್ಜ-ಅಜ್ಜಿ ಹೀಗೆ ಯಾರ ಜೀನ್ ಬೇಕಾದರೂ ಸಿಗಬಹುದು.
ಕೂದಲಿನ ಆರೈಕೆ ಮುಖ್ಯ
ಕೂದಲಿನ ಆರೋಗ್ಯಕ್ಕೆ ಆರೈಕೆ ತುಂಬಾನೇ ಮುಖ್ಯ. ಕೂದಲಿಗೆ ನಿಯಮಿತವಾಗಿ ಎಣ್ಣೆ ಮಸಾಜ್ ಅವಶ್ಯಕ. ವಾರದಲ್ಲಿ ಎರಡು ಬಾರಿ ಮಸಾಜ್ ಮಾಡಿದರೆ ತುಂಬಾನೇ ಒಳ್ಳೆಯದು. ಕೂದಲನ್ನು ಪ್ರತಿದಿನ ಎರಡು ಬಾರಿ ಬಾಚಬೇಕು, ಈ ರೀತಿ ಮಾಡುವುದರಿಂದ ಕೂದಲಿನ ಬುಡದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯುವುದು.
ಆಹಾರಕ್ರಮ ತುಂಬಾನೇ ಮುಖ್ಯ
ಕೂದಲಿಗೆ ಬಾಹ್ಯ ಪೋಷಣೆ ಮಾತ್ರವಲ್ಲ, ಆಂತರಿಕ ಪೋಷಣೆ ತುಂಬಾನೇ ಮುಖ್ಯವಾಗುವುದು. ಕೆರಾಟಿನ್ ಅಧಿಕವಿರುವ ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಬೀನ್ಸ್, ಬ್ರೊಕೋಲಿ, ಸೋಯಾಬೀನ್, ಸಾಲಮೋನ್. ಮೀನಿನ ಎಣ್ಣೆ, ನಟ್ಸ್, ಚಿಕನ್, ಮೊಟ್ಟೆ, ಪೋರ್ಕ್ ಈ ಬಗೆಯ ಆಹಾರಗಳು ತುಂಬಾನೇ ಒಳ್ಳೆಯದು.
ಪರಿಣಿತರ ಭೇಟಿಯಾಗಿ
ಕೂದಲು ಉದುರುತ್ತಿದ್ದರೆ ತುಂಬಾ ಕಾಯದೆ ಪರಿಣಿತರನ್ನು ಭೇಟಿಯಾದರೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕು, ಅವರು ನಿಮಗೆ ಸಪ್ಲಿಮೆಂಟ್ಸ್ ಹಾಗೂ ಶ್ಯಾಂಪೂ, ಕಂಡೀಷನರ್ ಸೂಚಿಸಬಹುದು. ಇದರಿಂದ ಕೂದಲು ಉದುರುವುದನ್ನು ತಡೆಗಟ್ಟಬಹುದು, ಕೂದಲು ಸೊಂಪಾಗಿ ಬೆಳೆಯಲು ಸಹಕಾರಿಯಾಗುವುದು.
ಕೂದಲು ಉದುರಲು ಕಾರಣವೇನು?
ಅನೇಕ ಕಾರಣಗಳಿಂದ ಕೂದಲು ಉದುರುತ್ತದೆ. ಕೆಲವರಿಗೆ ಮಾನಸಿಕ ಒತ್ತಡದ ಕಾರಣದಿಂದಾಗಿ ಉಂಟಾಗುತ್ತದೆ. ವಾಯುಮಾಲಿನ್ಯ, ಪೋಷಕಾಂಶವಿರುವ ಆಹಾರಗಳ ಕೊರತೆ, ಹಾರ್ಮೋನ್‌ಗಳ ಬದಲಾವಣೆ, ಕೆಲವೊಂದು ಆರೋಗ್ಯ ಸಮಸ್ಯೆ, ಕೂದಲ ಆರೈಕೆ ಕಡೆಗೆ ಗಮನ ಕೊಡದಿರುವುದು ಹೀಗೆ ಅನೇಕ ಕಾರಣಗಳಿಂದ ಕೂದಲು ಉದುರುವುದು.
ಕೂದಲು ಉದುರುವುದು, ಕೂದಲು ಕವಲೊಡೆಯುವುದರ ನಡುವಿನ ವ್ಯತ್ಯಾಸವೇನು?
ಕೂದಲು ಉದುರುವುದು ಅಥವಾ ಕೂದಲು ಕವಲೊಡೆಯುವುದು ಒಂದೇ ಅಲ್ಲ, ಕೂದಲು ಕವಲೊಡೆಯುವುದರಿಂದ ಕೂದಲು ಉದುರುವುದಿಲ್ಲ, ಆದರೆ ಕೂದಲು ಉದ್ದ ಬರುವುದಿಲ್ಲ. ಅದೇ ಕೂದಲು ಉದುರುವುದು ಎಂದರೆ ಕೂದಲಿನ ಆರೋಗ್ಯ ಹಾನಿಯಾಗಿ ಬುಡದಿಂದಲೇ ಉದುರುವುದು.



Click it and Unblock the Notifications
