Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಬಾಳೆಹಣ್ಣಿನ ಸಿಪ್ಪೆ ಮುಖ ಹೊಳೆಯುವಂತೆ ಮಾಡುತ್ತಾ? ತಪ್ಪು ಮಾಹಿತಿ ನೀಡಿದ್ರಾ ಆರೀಫಾ
ಮುಖದ ಅಂದ ಹೆಚ್ಚಿಸಲು ನಾವು ಹಲವು ರೀತಿಯ ಪ್ರಯತ್ನಗಳ ಮಾಡಿರುತ್ತೇವೆ, ದುಬಾರಿ ಕ್ರೀಮ್‌ಗಳು, ಸೀರಮ್‌ಗಳಿಂದ ಹಿಡಿದು ಪಾರ್ಲರ್, ಚಿಕಿತ್ಸೆಯಂತಹ ಕೆಲಸಗಳಿಗೂ ಮುಂದಾಗುತ್ತೇವೆ. ಆದ್ರೆ ನಮಗೆ ಕುಳಿತಲ್ಲೇ ಪಾರ್ಲರ್ ಸ್ಟೈಲ್‌ನಲ್ಲಿ ಅಂದ ಹೆಚ್ಚಿಸಿಕೊಳ್ಳುವ ಟ್ರಿಕ್ಸ್‌ಗಳು ತಿಳಿದಿರೋದಿಲ್ಲ. ನಮ್ಮ ನಡುವೆ ಇರುವ ಹಲವು ವಸ್ತುಗಳೆ ನಮ್ಮ ಸೌಂದರ್ಯ ವೃದ್ಧಿಯ ಸಾಧನಗಳಾಗಿರುತ್ತವೆ. ಆದ್ರೆ ಈ ಕುರಿತು ನಮಗೆ ಅರಿವಿರುವುದಿಲ್ಲ.
ಹಲವು ಹಣ್ಣುಗಳಲ್ಲಿ ಇಂತಹ ಪ್ರಯೋಜನಗಳಿವೆ ಎಂಬುದನ್ನು ನಾವು ಅರಿತಿದ್ದೇವೆ. ಹಲವು ಹಣ್ಣಿನ ಫೇಸ್ ಮಾಸ್ಕ್‌ಗಳನ್ನು ನಾವು ಮನೆಯಲ್ಲೇ ಮಾಡಿ ಬಳಸಿರುತ್ತೇವೆ. ಹಣ್ಣುಗಳಲ್ಲಿರುವ ಕೆಲವು ಅಂಶ ನಮ್ಮ ಚರ್ಮಕ್ಕೆ ಉತ್ತಮವಾಗಿದೆ. ಅದರಲ್ಲಿ ಬಾಳೆಹಣ್ಣಿನ ಸಿಪ್ಪೆ ನಮ್ಮ ತ್ವಚೆಗೆ ಬಹಳ ಉಪಯೋಗಕಾರಿ ಎಂಬುದು ನಿಮಗೆ ತಿಳಿದಿದ್ಯಾ?

ಬಾಳೆಹಣ್ಣಿನ ಸಿಪ್ಪೆಗಳು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಹಾಗೆ ಬಾಳೆಹಣ್ಣಿನ ಸಿಪ್ಪೆಯಿಂದ ಮುಖವನ್ನು ಉಜ್ಜಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚಿಸಬಹುದು, ಕಪ್ಪು ಕಲೆಗಳ ನಿವಾರಣೆಗೆ ಇದು ಸೂಕ್ತವಾದ, ಸುಲಭವಾದ ಚಿಕಿತ್ಸಕ ಎಂದು ನಾವು ಅರಿತ್ತಿದ್ದೇವೆ. ಬಹುತೇಕ ಮಂದಿ ಈ ರೀತಿ ಮಾಡಿಕೊಳ್ಳುತ್ತಾರೆ ಕೂಡ.
ಬಾಳೆ ಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ಉಜ್ಜಿಕೊಳ್ಳುವುದರಿಂದ ಕಪ್ಪು ಕಲೆಗಳ ನಿವಾರಣೆಗೆ ಸಹಕಾರಿಯಾಗಲಿದೆ ಎಂಬುದು ಅವರ ವಾದವಾಗಿದೆ. ಇದರಿಂದ ಕಪ್ಪು ಕಲೆಗಳ ನಿವಾರಣೆಯಾಗಲಿದೆ ಇದು ಬಹುತೇಕ ಸತ್ಯವೂ ಹೌದು. ಬಾಳೆಹಣ್ಣಿನ ಸಿಪ್ಪೆ ಹಾಗೂ ಓಟ್ಸ್ ಬಳಸಿ ರುಬ್ಬಿಕೊಂಡು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚುತ್ತಾರೆ ಇದು ಮೊಡವೆಗಳ ಕಡಿಮೆ ಮಾಡುತ್ತದೆ ಹಾಗೆ ಕಪ್ಪು ಕಲೆಗಳ ಕಡಿಮೆ ಮಾಡಲಿದೆ.
ಆದ್ರೆ ಇಲ್ಲೊಬ್ಬಾಕೆ ಬಾಳೆಹಣ್ಣಿನ ಸಿಪ್ಪೆ ಬಳಸಿ ಮುಖದ ಸುಕ್ಕು ನಿವಾರಣೆ ಮಾಡಬಹುದು ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ಅಮ್ಮು ಬ್ಯೂಟಿ ಬ್ರಾಂಡ್‌ನ ಸಂಸ್ಥಾಪಕಿ ಆರೀಫಾ ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವೊಂದರಲ್ಲಿ 'ನಿಮಗೆ ಬೊಟೊಕ್ಸ್ ಅಗತ್ಯವಿಲ್ಲ, ನಮಗೆ ಬೇಕಾಗಿರುವುದು ಬಾಳೆಹಣ್ಣಿನ ಸಿಪ್ಪೆ' ಎಂದು ಅದರಿಂದ ಮುಖವನ್ನು ಮಸಾಜ್ ಮಾಡಿಕೊಳ್ಳುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.
ಬಾಳೆಹಣ್ಣಿನ ಸಿಪ್ಪೆ ಬೊಟೊಕ್ಸ್‌ನಂತೆ ಕೆಲಸ ಮಾಡುತ್ತಾ?
ಬಾಳೆಹಣ್ಣಿನ ಸಿಪ್ಪೆಯ ಒಳಭಾಗ ತ್ವಚೆಯ ಹೊಳಪು, ಸೂಕ್ಷ್ಮ ರೇಖೆ ಮತ್ತು ಸುಕ್ಕುಗಳ ನಿವಾರಣೆಗೆ ಅದ್ಭುತವಾಗಿದೆ ಎಂದು ಆರೀಫಾ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ವಾರದಲ್ಲಿ ಎಲ್ಲಾ ದಿನ ಈ ರೀತಿ ಮಾಡಿ. ನಿಮ್ಮ ಚರ್ಮಕ್ಕೆ ಹೊಳಪು, ಜಲಸಂಚಯನ, ಸುಕ್ಕುಗಳಲ್ಲಿ ಬಹುದೊಡ್ಡ ವ್ಯತ್ಯಾಸ ನೋಡಬಹುದು. ಒಮ್ಮೆ ಬಾಳೆಹಣ್ಣಿನ ಸಿಪ್ಪೆಯಲ್ಲಿ ಉಜ್ಜಿಕೊಂಡು ಬಳಿಕ 10 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಇದನ್ನು ಸತತವಾಗಿ ಮಾಡಿದರೆ ಮುಖದ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳು ಮತ್ತು ನೀವು ಹೈಪರ್ಪಿಗ್ಮೆಂಟೇಶನ್ ಇರುವವರಿಗೆ ಇದು ಸಹಕಾರಿಯಾಗುತ್ತೆ ಎಂದು ಆಕೆ ಹೇಳಿದ್ದಾರೆ.
ಆದರೆ ಇದು ಸತ್ಯವಲ್ಲ ಎಂಬುದು ಈಗ ಎದ್ದಿರುವ ವಾದವಾಗಿದೆ. ಬೊಟೊಕ್ಸ್ ಒಂದು ಸೌಂದರ್ಯ ವರ್ಧಕಗಳ ದೊಡ್ಡ ಬ್ರಾಂಡ್ ಆಗಿದೆ. ಮುಖದ ಹೊಳಪಿಗೆ ಬೊಟೊಕ್ಸ್‌ನ ಹಲವು ಬಗೆಯ ಕ್ರೀಮ್ ಇದೆ. ಆದ್ರೆ ಬಾಳೆಹಣ್ಣಿನಿಂದ ಈ ಬೊಟೊಕ್ಸ್ ಬ್ರಾಂಡ್ ಬಳಕೆಯಿಂದ ನಿವಾರಣೆಯಾಗದ ಕಲೆಗಳನ್ನು ನಿವಾರಿಸಲು ಸಾಧ್ಯವಿಲ್ಲ.
ಬೊಟೊಕ್ಸ್ ಹೇಗೆ ಕೆಲಸ ಮಾಡುತ್ತದೆ?
ಬೊಟುಲಿನಮ್ ಟಾಕ್ಸಿನ್ - ಸಾಮಾನ್ಯವಾಗಿ ಬೊಟೊಕ್ಸ್ ಎಂಬ ಬ್ರಾಂಡ್ ನೇಮ್‌ನಿಂದ ಫೇಮಸ್ ಆಗಿದೆ. ಇದರ ಒಂದೊಂದು ಉತ್ಪನ್ನವೂ ಬಲು ದುಬಾರಿಯಾಗಿದೆ. ಈ ಕಾಸ್ಮೆಟಿಕ್ ಬಳಕೆಯು ಮುಖದಲ್ಲಿನ ಸುಕ್ಕುಗಳು, ಕಲೆಗಳ ನಿವಾರಣೆಗೆ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹಾಗೆ ಈ ಉತ್ಪನ್ನವನ್ನು ಚರ್ಮ ವೈದ್ಯರ ಶಿಫಾರಸಿನ ಮೇಲೆ ಬಳಸಲಾಗುತ್ತದೆ. ಆದ್ರೆ ಈ ವಿಡಿಯೋದಲ್ಲಿ ಹೇಳಿದಂತೆ ಬಾಳೆಹಣ್ಣಿನ ಸಿಪ್ಪೆಯು ಬೊಟೊಕ್ಸ್‌ನಂತೆ ಕೆಲಸ ಮಾಡುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.



Click it and Unblock the Notifications
