Latest Updates
-
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್ -
ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ -
ಭಾಲಚಂದ್ರ ಸಂಕಷ್ಟ ಚತುರ್ಥಿ 2026: ಈ 6 ರಾಶಿಗಳಿಗೆ ಗಜಕೇಸರಿ ಯೋಗ! ಹಣದ ಮಳೆ ಸುರಿಸಲಿದ್ದಾರೆ ಗಣಪ -
ಶುಕ್ರ-ಶನಿಯ ಮೀನ ಸಂಚಾರದಿಂದ ಮಾಲವ್ಯ ಯೋಗ: ಈ 5 ರಾಶಿಯವರ ಜೀವನದಲ್ಲಿ ಬಹುದೊಡ್ಡ ಬದಲಾವಣೆ! -
ರಾತ್ರಿ ಉಳಿದ ಅನ್ನದಿಂದ ಬೆಳಗ್ಗೆ ಈ ಈರುಳ್ಳಿ ರೈಸ್ ಮಾಡಿ! ಸುಲಭದ ಟೇಸ್ಟಿ ರೆಸಿಪಿ
ಮುಖದಲ್ಲಿ ಕಪ್ಪು ಕಲೆಗಳಿವೆಯೇ? ಪ್ರತಿ ದಿನ ಈ 3 ಟಿಪ್ಸ್ ಬಳಸಿದ್ರೆ ಮಾಯವಾಗುತ್ತೆ!
Skin Care Tips In Kannada: ವಾತಾವರಣದಲ್ಲಿ ಬದಲಾವಣೆ ಆದಂತೆಲ್ಲಾ ಮುಖದ ಹೊಳಪು ಕೂಡ ಬದಲಾಗುವುದು ನೀವು ಗಮನಿಸಿರಬಹುದು. ಬೇಸಿಗೆಯಲ್ಲಿ ಮುಖ ಕಪ್ಪಾಗುವುದು, ಚಳಿಗಾಲದಲ್ಲಿ ಒಣಗುವುದು, ಹಾಗೆ ಮಳೆಗಾಲದ ಸಮಯದಲ್ಲಿ ಮೇಕ್‌ಅಪ್‌ನಿಂದ ಅಲರ್ಜಿಯಂತಹ ಕೆಲವು ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗುವುದು ನೋಡಬಹುದು. ಇದೆಲ್ಲವೂ ಮುಖದ ಮೇಲೆ ಹಾನಿ ಉಂಟು ಮಾಡುತ್ತದೆ.
ದೇಹದಲ್ಲಿ ಮುಖದ ತ್ವಚೆ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಮುಖ ಬಹುಬೇಗ ಅಂದ ಕಳೆದುಕೊಳ್ಳುತ್ತದೆ. ಅದ್ರಲ್ಲೂ ಇತ್ತೀಚಿಗೆ ಯುವ ಸಮುದಾಯ ಎದುರಿಸುವ ಸಮಸ್ಯೆಗಳಲ್ಲಿ ಹೈಪರ್‌ಪಿಗ್ಮೆಂಟೇಶನ್ ಕೂಡ ಒಂದು. ಸೂರ್ಯನ ಕಿರಣಗಳಿಗೆ ನೇರವಾಗಿ ಒಗ್ಗಿಕೊಳ್ಳುವುದು ಕಪ್ಪು ಕಲೆಗಳಿಗೆ ಕಾರಣವಾಗಲಿದೆ.

ಅದ್ರಲ್ಲೂ ಮುಖದ ಮೇಲೆ ಸಣ್ಣ ಸಣ್ಣ ಮಚ್ಚೆಗಳಂತೆ ಮೂಡುವುದರಿಂದ ಮುಖದ ಕಾಂತಿ ಹಾಳಾಗುತ್ತದೆ. ಅಲ್ಲದೆ ಇದು ಹರಡಲು ಆರಂಭಿಸುವುದು ಸಹ ಹಲವರಲ್ಲಿ ನೋಡಬಹುದು. ಈ ಸಮಸ್ಯೆಯಿಂದ ಪಾರಾಗಲು ಹಲವರು ಅಂಗಡಿಗಳಲ್ಲಿ ಸಿಗುವಂತಹ ಸಾವಿರಾರು ರೂಪಾಯಿ ಬೆಲೆಯ ಕ್ರೀಮ್‌ಗಳ ಬಳಸುವುದು ನೋಡಬಹುದು. ಆದ್ರೆ ಮನೆಯಲ್ಲೇ ಇದಕ್ಕೆ ಉತ್ತಮ ಔಷಧಿ ಇದೆ.
ಕೆಲವೇ ವಸ್ತುಗನ್ನು ಬಳಸಿಕೊಂಡು ನಾವೇ ಇದಕ್ಕೆ ಪರಿಹಾರ ಮಾಡಿಕೊಳ್ಳಬಹುದು, ಖರ್ಚು ಕೂಡ ಕಡಿಮೆಯಾಗಲಿದೆ ಹಾಗೆ ರಾಸಾಯನಿಕದಿಂದ ಮುಖ ಹಾಳಾಗುವ ಭಯವೂ ಇರುವುದಿಲ್ಲ. ಹಾಗಾದ್ರೆ ನೈಸರ್ಗಿಕವಾಗಿ ಹೈಪರ್‌ಪಿಗ್ಮೆಂಟೇಶನ್ ತೊಡೆದು ಹಾಕಲು ಯಾವ ರೀತಿಯ ಪರಿಹಾರ ಮಾಡಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಅಲೋವೆರಾ
ಅಲೋವೆರಾ ಹಲವು ರೀತಿಯಲ್ಲಿ ನಿಮ್ಮ ತ್ವಚೆಗೆ ಕಾಂತಿ ಮರಳಿ ನೀಡುವ ಒಂದು ಪದಾರ್ಥ. ಇದನ್ನು ನೇರವಾಗಿ ನೀವು ಬಳಕೆ ಮಾಡಬಹುದು. ರಾತ್ರಿ ಮಲಗುವ ಮುನ್ನ ಕಪ್ಪು ಕಲೆಗಳ ಮೇಲೆ ಇದರ ಜೆಲ್ ಅನ್ನು ಹಚ್ಚಿಕೊಂಡು ಮಲಗಿ. ಮರುದಿನ ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಬೇಕು. ಈ ರೀತಿ ನಿತ್ಯವೂ ಮಾಡಿದರೆ ಮುಖದಲ್ಲಿನ ಕಪ್ಪು ಕಲೆಗಳು ಸುಲಭವಾಗಿ ನಿವಾರಣೆಯಾಗಲಿದೆ. ಆದ್ರೆ ನೀವಿದನ್ನು 1 ವಾರ ಅಥವಾ 15 ದಿನಗಳ ಕಾಲ ಮಾಡಿದರೆ ಫಲಿತಾಂಶ ಸಿಗುವುದಿಲ್ಲ. ದೀರ್ಘಕಾಲದ ಫಲಿತಾಂಶಕ್ಕಾಗಿ ಈ ಉಪಾಯ ಮಾಡಬಹುದು.
ನಿಂಬೆ ರಸ ಮತ್ತು ಜೇನುತುಪ್ಪದ ಮಿಶ್ರಣ
ನಿಂಬೆ ಮತ್ತು ಜೇನುತುಪ್ಪದಲ್ಲಿ ಕಲ್ಮಶಗಳ ತೆಗೆದು ಹಾಕುವ ಶಕ್ತಿ ಇದೆ. ಹೀಗಾಗಿ ವಿಟಮಿನ್ ಸಿ ನಿಮ್ಮ ತ್ವಚೆಗೆ ಬಹಳ ಉಪಯೋಗಗಕಾರಿ. ಒಂದು ಸ್ಪೂನ್ ನಿಂಬೆ ರಸಕ್ಕೆ 1 ಸ್ಪೂನ್ ಜೇನುತುಪ್ಪದೊಂದಿಗೆ ಬೆರೆಸಿ. ನಂತರ ಮುಖದಲ್ಲಿ ಆಗಿರುವ ಕಪ್ಪು ಕಲೆಯ ಮೇಲೆ ನಿಧಾನವಾಗಿ ಹಚ್ಚಿ. 20 ನಿಮಿಷಗಳ ಬಿಟ್ಟು ನಂತರ ತಣ್ಣೀರಿನಲ್ಲಿ ತೊಳೆಯಿರಿ. ವಾರದಲ್ಲಿ 2ರಿಂದ 3 ಬಾರಿ ಈ ರೀತಿ ಮಾಡುತ್ತಾ ಬನ್ನಿ, ಒಂದು ತಿಂಗಳಲ್ಲಿ ಅದರ ಫಲಿತಾಂಶ ಆರಂಭವಾಗುತ್ತದೆ. ಇದರಿಂದ ಯಾವುದೇ ರೀತಿಯ ಹಾನಿಯೂ ಆಗುವುದಿಲ್ಲ.
ಹಾಲು
ಲ್ಯಾಕ್ಟಿಕ್ ಆಮ್ಲ ಹೊಂದಿರುವ ಹಾಲು ನಿಮ್ಮ ತ್ವಚೆಗೆ ಬಹಳ ಉತ್ತಮ ಪದಾರ್ಥ. ಇದಕ್ಕಾಗಿ ನೀವು ಹಸಿ ಹಾಲನ್ನು ಮುಖಕ್ಕೆ ಹಚ್ಚಬೇಕು. ಬಹಳ ತೆಳುವಾಗಿದ್ದರೆ ನೀವು ಮೈದಾ ಹಿಟ್ಟು ಬೆರೆಸಿ ಸ್ವಲ್ಪ ದಪ್ಪ ಮಾಡಿಕೊಂಡು ಮುಖಕ್ಕೆ ಹಚ್ಚಬಹುದು. 10 ನಿಮಿಷಗಳ ಕಾಲ ಬಿಟ್ಟು ಅನಂತರ ಮುಖವನ್ನು ತಣ್ಣೀರಿನಿಂದ ತೊಳೆದು ಬಿಡಿ. ಇದನ್ನು ವಾರದಲ್ಲಿ ಎಷ್ಟು ಬಾರಿ ಬೇಕಾದರೂ ಮಾಡಬಹುದು, ಇದರಿಂದ ಮುಖದಲ್ಲಿನ ಕಪ್ಪು ಕಲೆಗಳು ನಿವಾರಣೆಯಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಯ ಬಗ್ಗೆ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications












