Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಮುಖದ ಕಾಂತಿ ಹಾಗೆ ಉಳಿಯಲು ಮಲಗುವ ಮುನ್ನ ಈ ರೀತಿ ಮಾಡಿ.!
ಚರ್ಮದ ಆರೈಕೆಗಾಗಿ ರಾತ್ರಿಯ ಸಮಯವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಚರ್ಮವು ತನ್ನನ್ನು ತಾನೇ ಸರಿಪಡಿಸಿಕೊಳ್ಳಲು ವೇಗವಾಗಿ ಕೆಲಸ ಮಾಡುವ ಸಮಯ ಇದು. ಹೀಗಾಗಿ ರಾತ್ರಿ ಮಲಗುವಾಗ ಚೆನ್ನಾಗಿ ಮುಖ ತೊಳೆಯಬೇಕು ಎಂದು ಹಿರಿಯರು ಸಹ ಹೇಳುತ್ತಾರೆ. ಇದಿಷ್ಟೇ ಅಲ್ಲ ಹಲವು ಬ್ಯೂಟಿ ಕ್ರೀಮ್‌ಗಳು ಕೂಡ ರಾತ್ರಿ ಮಲಗುವ ಮುನ್ನವೇ ಹಚ್ಚಿಕೊಂಡು ಮಲಗಬೇಕಾಗುತ್ತದೆ.
ನಿಮ್ಮ ತ್ವಚೆಯು ಯಾವಾಗಲೂ ಹೊಳೆಯುವ ಮತ್ತು ಯಂಗ್ ಆಗಿರಬೇಕೆಂದು ನೀವು ಬಯಸುತ್ತೀರಾ? ಆದರೆ ಈ ಜೀವನ ಶೈಲಿಯಲ್ಲಿ ಹಾಗೆಲ್ಲಾ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಸುಲಭದ ಮಾತಲ್ಲ. ಧೂಳು, ಒತ್ತಡ ಮತ್ತು ಕಳಪೆ ಆಹಾರದಂತಹ ಅನೇಕ ಕಾರಣಗಳಿಂದ ಚರ್ಮವು ತನ್ನ ಹೊಳಪನ್ನು ಕಳೆದುಕೊಳ್ಳುವುದಲ್ಲದೆ, ಮೊಡವೆಗಳು, ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳ ಸಮಸ್ಯೆಗಳು ಸಹ ಹೆಚ್ಚಾಗಲು ಪ್ರಾರಂಭಿಸುತ್ತವೆ.

ಜನರು ಸಾಮಾನ್ಯವಾಗಿ ತಮ್ಮ ವಯಸ್ಸಿಗಿಂತ ವಯಸ್ಸಾದವರಂತೆ ಕಾಣಲು ಪ್ರಾರಂಭಿಸುತ್ತಾರೆ ಆದರೆ ಈ ಕಾರಣದಿಂದಾಗಿ ಆತ್ಮವಿಶ್ವಾಸವು ಗಣನೀಯವಾಗಿ ಕಡಿಮೆಯಾಗುತ್ತದೆ. ನೀವು ಸಹ ಈ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರೆ. ಆದ್ರೆ ನಮ್ಮ ತ್ವಚೆಯ ಈ ಸಮಸ್ಯೆ ಬಗೆಹರಿಸಲು ಹಲವು ರೀತಿಯ ಔಷಧಿ ಇದೆ.
ಅಂದರೆ ನಾವು ರಾತ್ರಿ ಮಲಗುವ ಮುನ್ನ ಈ 3 ಕ್ರಮಗಳನ್ನು ಅನುಸರಿಸಿದರೆ ನಿಮ್ಮ ಮುಖದ ಹೊಳಪನ್ನು ಹಾಗೆ ಉಳಿಸಿಕೊಳ್ಳಬಹುದು. ಹಾಗಾದ್ರೆ ಯಾವುದು ಆ 3 ನಿಯಮ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೊದಲ ಹಂತ
ಮೇಕಪ್ ನಮ್ಮ ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ ನೀವು ಅದನ್ನು ನಿಮ್ಮ ಮುಖಕ್ಕೆ ಹಚ್ಚಿ ರಾತ್ರಿ ಮಲಗಿದರೆ ಅದು ನಿಮ್ಮ ಚರ್ಮಕ್ಕೆ ದೊಡ್ಡ ಅಪಾಯವಾಗಿ ಪರಿಣಮಿಸುತ್ತದೆ. ಹೀಗಾಗಿ ನಾವು ರಾತ್ರಿ ಊಟವಾದ ಬಳಿಕ ಇಲ್ಲವೆ ಹೊರಗೆ ಊಟ ಮಾಡಿ ಬಂದ ಬಳಿಕ ಮುಖವನ್ನು ಚೆನ್ನಾಗಿ ತೊಳೆಯಬೇಕು. ಹಾಗೆ ಬೆಳಗ್ಗೆಯಿಂದ ಮಾಡಿರುವ ಮೇಕ್ ಅಪ್ ಅನ್ನು ತೆಗೆದ ಬಳಿಕವೇ ಮಲಗಬೇಕು. ಇದೇ ನಿಯಮವನ್ನು ಹಿಂದೊಮ್ಮೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸಹ ಹೇಳಿದ್ದರು. ಒಂದು ವೇಳೆ ನೀವು ಹೀಗೆ ಮಾಡದಿದ್ದರೆ ಮುಖದಲ್ಲಿ ಮೊಡವೆಗಳು ಹೆಚ್ಚಾಗುವುದು, ಸುಕ್ಕುಗಳು ಕಾಣಿಸಿಕೊಳ್ಳುವುದು, ಕೆಮಿಕಲ್ ರಿಯಾಕ್ಷನ್ ಉಂಟಾಗುವ ಸಾಧ್ಯತೆ ಸಹ ಇರಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
2ನೇ ಹಂತ
ಮೇಕಪ್ ಅಪ್ ತೆಗೆದ ಬಳಿಕ ಮುಖವನ್ನು ತಣ್ಣೀರಿನಿಂದ ಅಥವಾ ರೋಸ್ ವಾಟರ್‌ನಿಂದ ತೊಳೆಯಬೇಕು. ಹಾಗೆ ಶುದ್ಧವಾದ, ಮೃದುವಾದ ಬಟ್ಟೆಯಿಂದ ಒರೆಸಬೇಕು. ನಿಮ್ಮ ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಕ್ರೀಮ್‌ಗಳ ಆಯ್ಕೆ ಮಾಡಿಕೊಳ್ಳಬೇಕು. ರಾತ್ರಿ ಮಲಗುವಾಗ ಯಾವುದೇ ಕ್ರೀಮ್ ಹಚ್ಚುವ ಅಭ್ಯಾಸ ಇಟ್ಟುಕೊಳ್ಳುವುದು ಉತ್ತಮವಲ್ಲ.
ಹಂತ 3
ರಾತ್ರಿ ಮಲಗುವ ಮುನ್ನ ಯಾವುದಾದರು ಫೇಸ್ ವಾಷ್‌ನಿಂದ ತೊಳೆದು ಬಳಿಕ ಹತ್ತಿ ಬಟ್ಟೆಯಿಂದ ಒರೆಸಬೇಕು. ಅದರಲ್ಲೂ ಆಲ್ಕೋಹಾಲ್ ಮುಕ್ತ ಟೋನರ್ ಅನ್ನು ಬಳಸುವುದು ಸೂಕ್ತ. ಹಾಗೆ ರಾತ್ರಿ ಮಲಗುವ ಮುನ್ನ ರೋಸ್ ವಾಟರ್‌ನಿಂದ ತೊಳೆಯುವುದು ಒಳ್ಳೆಯದು.



Click it and Unblock the Notifications

