Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮುಖದಲ್ಲಿ ನೆರಿಗೆ ಬಾರದಂತೆ ಮಾಡೋಕೆ 2 ವಸ್ತು ಸಾಕು: ಮನೆಯಲ್ಲೇ ಸಿಗುತ್ತೆ ಮದ್ದು
ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಬೇಕು ಹಾಗೆ ಸುಂದರವಾಗಿ, ಹೊಳೆಯುವ ಕಾಂತಿಯುತ ಮುಖವನ್ನು ಹೊಂದಬೇಕು ಎಂಬುದು ಬಹುತೇಕ ಎಲ್ಲರ ಆಸೆಯಾಗಿರುತ್ತೆ. ಆದ್ರೆ ಇದಕ್ಕಾಗಿ ಹಲವು ರೀತಿಯ ವಸ್ತುಗಳನ್ನು ಬಳಸುವುದು ನೋಡಬಹುದು. ಅದ್ರಲ್ಲೂ ವಯಸ್ಸಾದಂತೆ ಮುಖದಲ್ಲಿ ಕಾಣುವ ಸುಕ್ಕುಗಳನ್ನು ನಿವಾರಿಸಿಕೊಳ್ಳಲು ಹಲವು ರೀತಿಯ ಕ್ರೀಮ್‌ಗಳು, ಮನೆಮದ್ದುಗಳನ್ನ ಬಳಸುವುದು ನೋಡಿರುತ್ತೇವೆ.
ಹಾಗೆ ಮುಖವು ಯಾವಾಗಲು ಹೊಳಪಿನಿಂದ ಕೂಡಿರಬೇಕು ಎಂದು ದುಬಾರಿ ಕ್ರೀಮ್‌ಗಳ ಬಳಸುವ ಜೊತೆಗೆ ಹಲವು ಪಾರ್ಲರ್‌ಗೆ ತೆರಳುವುದು ದುಬಾರಿ ಫೇಶಿಯಲ್‌ಗಳು, ಟ್ರೀಟ್‌ಮೆಂಟ್ ಕೂಡ ಮಾಡುವುದು ನೋಡಿರುತ್ತೇವೆ. ಇಷ್ಟಾದರು ಸಹ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಬಹಳ ಕಷ್ಟವಾಗುತ್ತೆ. ಹಾಗೆ ಕೆಲವು ಬಾರಿ ಮುಖದ ಅಂದ ಹೆಚ್ಚಿಸಿಕೊಳ್ಳಲು ಬಳಸುವ ವಸ್ತುವಿನಿಂದ ಹಾನಿಯಾಗುವುದು ಸಹ ನೋಡಬಹುದು.

ಆದ್ರೆ ನಾವಿಂದು ಸುಲಭವಾಗಿ ಮನೆಯಲ್ಲೇ ನಿಮ್ಮ ಅಂದ ಹೆಚ್ಚಿಸುವಂತಹ ಹಾಗೆ 40 ವರ್ಷದವರು ಕೂಡ ನೆರಿಗೆ ಇಲ್ಲದ ಸುಂದರ ತ್ವಚೆಯನ್ನು ಪಡೆಯುವ ಮನೆಮದ್ದು ಮಾಡಿಕೊಳ್ಳುವ ಕುರಿತಾಗಿ ಹೇಳಲಿದ್ದೇವೆ. ನೀವು ಕೂಡ ಈ ಸುಲಭದ ಟ್ರಿಕ್ ಮಾಡಿಕೊಳ್ಳುವ ಮೂಲಕ ಮುಖದ ಸೌಂದರ್ಯವನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ.
ಹಾಗಾದ್ರೆ ಮುಖದ ಕಾಂತಿ ಹೆಚ್ಚಿಸುವ ನೆರಿಗೆ ಇಲ್ಲದಂತೆ ಹೊಳಪಿನ ತ್ವಚೆ ಪಡೆಯಲು ಯಾವ ರೀತಿಯ ಮನೆ ಮದ್ದು ಮಾಡಿಕೊಳ್ಳಬೇಕು ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ಬಾಳೆಹಣ್ಣಿನ ಮದ್ದು
ನಿಮ್ಮ ಮನೆಯಲ್ಲಿರುವ ಯಾವುದಾದರು ಒಂದು ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ಒಂದು ಬೌಲ್‌ಗೆ ಹಾಕಿ ಪುಡಿ ಮಾಡಿಕೊಳ್ಳಿ. ಇದು ಹಣ್ಣಿನ ರಸಾಯನದಂತೆ ಬರಬೇಕು. ಹಾಗೆ ಇದಕ್ಕೆ ಒಂದು ಸ್ಪೂನ್ ಜೇನು ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಇದನ್ನು ಪೇಸ್ಟ್ ಅಂತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದು ಬಹಳ ಅಂಟು ಅಂಟಾಗಿ ಬರಬೇಕು. ಈ ಮಿಶ್ರಣವನ್ನು ಮುಖಕ್ಕೆ ಹಚ್ಚುವ ಮುನ್ನ ಒಮ್ಮೆ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಅನಂತರ ಮುಖಕ್ಕೆ ಚೆನ್ನಾಗಿ ಈ ಮಿಶ್ರಣವನ್ನು ಹಚ್ಚಿಕೊಳ್ಳಿ. ಮುಖ, ಕುತ್ತಿಗೆಗೆ ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿಕೊಳ್ಳಬೇಕು. 10ರಿಂದ 15 ನಿಮಿಷ ಬಿಟ್ಟು ಮುಖವನ್ನು ತಣ್ಣೀರಿನಲ್ಲಿ ತೊಳೆಯಿರಿ. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿ ನೋಡಿ. ನಿಧಾನವಾಗಿ ನಿಮ್ಮ ಮುಖ ಕಾಂತಿ ವಾಪಾಸು ಬರುವುದು ನೋಡಬಹುದು.
ಅಲೊವೆರಾ
ಅಲೊವೆರಾದ ಜೆಲ್ ತ್ವಚೆಯ ಆರೋಗ್ಯಕ್ಕೆ ಉತ್ತಮ ಎಂದು ನೀವು ಸಹ ತಿಳಿದಿದ್ದೀರಿ. ಆದ್ರೆ ಇದರಿಂದ ಮಾಡುವ ಒಂದು ಮದ್ದು ನಿಮ್ಮ ಮುಖದ ಕಾಂತಿ ಉಳಿಸಲು ಸಹಾಯ ಮಾಡಲಿದೆ. ಅದ್ರಲ್ಲೂ ನೆರಿಗೆ ಬರುವುದನ್ನು ಕಡಿಮೆ ಮಾಡಲಿದೆ. 2 ಸ್ಪೂನ್ ಅಲೊವೆರಾ ಜೆಲ್‌ಗೆ 1 ಸ್ಪೂನ್ ಜೇನು ತುಪ್ಪ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಅನಂತರ ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಮಸಾಜ್ ಮಾಡಿಕೊಳ್ಳಿ. ಅನಂತರ ಮುಖವನ್ನು ತೊಳೆದುಕೊಳ್ಳಿ. ಈ ರೀತಿಯ ಪೇಸ್ಟ್ ತಯಾರಿಸಿ ಇಟ್ಟುಕೊಂಡು ವಾರದಲ್ಲಿ 3ರಿಂದ 4 ಬಾರಿ ಮಾಡುತ್ತಾ ಹೋಗಿ. ಇದು ನಿಮ್ಮ ಚರ್ಮವನ್ನು ಹೊಳಪಾಗಿಸಲಿದೆ. ಹಾಗೆ ಟೈಟನ್ ಮಾಡಲು ಸಹಕಾರಿಯಾಗಲಿದೆ.
ಈ ಎರಡು ವಿಧಾನಗಳನ್ನು ಮುಖದಲ್ಲಿ ನೆರಿಗೆ ಇಲ್ಲದಂತೆ ಮಾಡಲು ಬಳಸಬಹುದು. ಆದ್ರೆ ಈ ತಯಾರಿಯನ್ನು ಮುಖಕ್ಕೆ ಹಚ್ಚುವ ಮೊದಲು ಕೈನ ಒಂದು ಭಾಗಕ್ಕೆ ಸ್ವಲ್ಪ ಹಚ್ಚಿ ಮೊದಲು ಪರೀಕ್ಷಿಸಬೇಕು. ಕೈಗೆ ಹಚ್ಚಿದಾಗ ತುರಿಕೆ, ಅಲರ್ಜಿ ಉಂಟಾದರೆ ಇದರಿಂದ ದೂರ ಇರುವುದು ಉತ್ತಮ. ಹಾಗೆ ತಜ್ಞರ ಅಭಿಪ್ರಾಯ ಪಡೆದು ಬಳಸುವುದು ಉತ್ತಮ.



Click it and Unblock the Notifications
