Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಯಂಗ್ ಲುಕ್‌ಗೆ ಮರಳಿದ ದರ್ಶನ್ :ಪುರುಷರಿಗೆ ಯಂಗ್ ಲುಕ್ ನೀಡುವ ಸೌಂದರ್ಯವರ್ಧಕ ಚಿಕಿತ್ಸೆಗಳಿವು
ದರ್ಶನ್‌ರವರ ಇತ್ತೀಚಿನ ಲುಕ್ ನೋಡಿದ ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ, ನಮ್ಮ ಡಿಬಾಸ್ ಮೊದಲಿನಂತೆ ಕಾಣುತ್ತಿದ್ದಾರೆ ಎಂದು ಸಂಭ್ರಮ ಪಡುತ್ತಿದ್ದಾರೆ, ಅವರ ಹಿಂದಿನ ಲುಕ್‌ಗಿಂತ 5-6 ವರ್ಷ ಚಿಕ್ಕವರಂತೆ ಕಾಣುತ್ತಿದ್ದಾರೆ. ಅವರ ಬದಲಾದ ಲುಕ್ ನೋಡಿದವರು ದರ್ಶನ್ ಅವರ ಬದಲಾದ ಲುಕ್‌ಗೆ ಸವಂದರ್ಯವರ್ಧಕ ಚಿಕಿತ್ಸೆ ಕಾರಣವಾಗಿರಬಹುದು ಎಂದು ಹೇಳುತ್ತಿದ್ದಾರೆ.
ಯಾವೆಲ್ಲಾ ಸೌಂದರ್ಯವರ್ಧಕ ಚಿಕಿತ್ಸೆಗಳಿವೆ, ನಾವು ನಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳುವಲ್ಲಿ ಜೀವನಶೈಲಿ ಹೇಗೆ ಪರಿಣಾಮ ಬೀರುವುದು ಎಂದು ನೋಡೋಣ:

1. ಬೊಟೊಕ್ಸ್ ಕಾಸ್ಮೆಟಿಕ್ಸ್ (Botox Cosmetic)
ಈ ಚಿಕಿತ್ಸೆಯಲ್ಲಿ ನೆರಿಗೆಯ ಕೆಳಭಾಗದಲ್ಲಿ botulinum ಟಾಕ್ಸಿನ್ ಅನ್ನು ಇಂಜೆಕ್ಷನ್ ಮೂಲಕ ನೀಡಲಾಗುವುದು. ಈ ಟ್ರೀಟ್ಮೆಂಟ್‌ಗೆ 30 ನಿಮಿಷ ಬೇಕಾಗುತ್ತದೆ, ಈ ಚಿಕಿತ್ಸೆ ಮಾಡಿಸಿದರೆ ಯೌವನದ ಕಳೆ ಮರಳಿ ಬರುವುದು. ಈ ಚಿಕಿತ್ಸೆಯ ಪ್ರಭಾವ 6 ತಿಂಗಳವರೆಗೆ ಇರುತ್ತದೆ, ಮತ್ತೆ ಮಾಡಿಸಬೇಕಾಗುತ್ತದೆ.
2. Microdermabrasion ಚಿಕಿತ್ಸೆ
ಈ ಚಿಕಿತ್ಸೆ ಕೂಡ ಮುಖಕ್ಕೆ ತುಂಬಾನೇ ಯಂಗ್ ಲುಕ್ ನೀಡುತ್ತದೆ. ಇದರ ಸಂಪೂರ್ಣ ಫಲಿತಾಂಶ ಪಡೆಯಲು ಕೆಲವು ಸೆಷನ್ ಇರುತ್ತದೆ, ಪ್ರತಿ ಸೆಷನ್‌ಗೆ ಮೂವತ್ತು ನಿಮಿಷ ಬೇಕಾಗುವುದು. ಈ ಚಿಕಿತ್ಸೆ ಮಾಡಿದರೆ ಮುಖದಲ್ಲಿ ನೆರಿಗೆ ಕಾಣಿಸಲ್ಲ, 5-10 ವರ್ಷ ಚಿಕ್ಕವರಂತೆ ಕಾಣುತ್ತೇವೆ.
3. ಲೇಸರ್ ಹೇರ್ ರಿಮೂವಲ್
ಇದರಲ್ಲಿ ದೇಹದ ಯಾವುದೇ ಭಾಗದಿಂದ ಆದರೂ ಬೇಡದ ಕೂದಲನ್ನು ತೆಗಿಯಬಹುದು. ಈ ವಿಧಾನದಲ್ಲಿ ಬೇಡದ ಕೂದಲನ್ನು ತೆಗೆದರೆ ಈ ಥ್ರೆಡ್ಡಿಂಗ್, ವ್ಯಾಕ್ಸಿಂಗ್ ಈ ಕಿರಿಕಿರಿ ಇರಲ್ಲ.
4. ಕೆಮಿಕಲ್ ಪೀಲ್
ಕೆಮಿಕಲ್ ಪೀಲ್ ಕೂಡ ಮುಖದಲ್ಲಿ ಕೊಲೆಜಿನ್ ಉತ್ಪತ್ತಿ ಹೆಚ್ಚಾಗಲು, ಸಡಿಲವಾದ ತ್ವಚೆ ಸ್ನಾಯುಗಳನ್ನು ಬಿಗಿಗೊಳಿಸಿ ಯಂಗ್ ಲುಕ್ ಪಡೆಯಲು ತುಂಬಾನೇ ಸಹಕಾರಿಯಾಗಿದೆ. ಈ ಚಿಕಿತ್ಸೆಯಲ್ಲಿ ಮುಖದ ಬಣ್ಣ ಕೂಡ ಸ್ವಲ್ಪ ಆಕರ್ಷಕವಾಗುವುದು, ಕಲೆ, ಸನ್ ಟ್ಯಾನ್ ಇವೆಲ್ಲಾ ತೆಗಿಯಬಹುದು
ಜೀವನಶೈಲಿಯಲ್ಲಿ ಬದಲಾವಣೆ ಕೂಡ ಸೌಂದರ್ಯವನ್ನು ವೃದ್ಧಿಸುವಲ್ಲಿ ಸಹಕಾರಿಯಾಗಿದೆ
ವ್ಯಾಯಾಮ: ವ್ಯಾಯಾಮ ಮೈಕಟ್ಟು ಸದೃಢವಾಗಿಸಲು ಮಾತ್ರ ತ್ವಚೆಯಲ್ಲಿ ಹೊಳಪು ಹೆಚ್ಚಲು ಕೂಡ ಸಹಕಾರಿ, ವ್ಯಾಯಾಮ, ಯೋಗದಿಂದ ಮುಖಕ್ಕೆ ವಿಶೇಷ ಕಳೆ ಬರುತ್ತದೆ.
ಆರೋಗ್ಯಕರ ಡಯಟ್: ನಮ್ಮ ಸೌಂದರ್ಯ ಕಾಪಾಡುವಲ್ಲಿ, ವೃದ್ಧಿಸುವಲ್ಲಿ ಆರೋಗ್ಯಕರ ಡಯಟ್ ತುಂಬಾನೇ ಪ್ರಯೋಜನಕಾರಿಯಾಗಿದೆ.
ಮಾಯಿಶ್ಚರೈಸರ್: ಮಾಯಿಶ್ಚರೈಸರ್ ತ್ವಚೆಯಲ್ಲಿ ತೇವಾಂಶ ಕಾಪಾಡುತ್ತದೆ, ತ್ವಚೆ ಡ್ರೈಯಾಗುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ. ಸನ್‌ಸ್ಕ್ರೀನ್ ಇವು ಸೂರ್ಯನ ಕಿರಣಗಳಿಂದ ತ್ವಚೆ ರಕ್ಷಣೆ ಮಾಡುತ್ತದೆ, ಸನ್ ಟ್ಯಾನ್ ಆಗುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ.
ಮಾನಸಿಕ ನೆಮ್ಮದಿ: ಇದು ಕೂಡ ನಮ್ಮ ದೇಹ ಹಾಗೂ ಸೌಂದರ್ಯದ ಮೇಲೆ ತುಂಬಾನೇ ಪ್ರಯೋಜನ ಬೀರುವುದು, ಮಾನಸಿಕ ನೆಮ್ಮದಿಗೆ ಧ್ಯಾನ ಮಾಡುವುದು ತುಂಬಾನೇ ಪ್ರಯೋಜನಕಾರಿ. ಮಾನಸಿಕ ಒತ್ತಡ ನಮ್ಮ ಮುಖದಲ್ಲಿ ನೆರಿಗೆ ಬೀಳುವಂತೆ ಮಾಡುತ್ತದೆ. ಅದೇ ಮಾನಸಿಕ ನೆಮ್ಮದಿ ನಮ್ಮ ಮುಖ ಕಾಂತಿಯನ್ನು ಹೆಚ್ಚಿಸುತ್ತದೆ.



Click it and Unblock the Notifications
