Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಕುತ್ತಿಗೆ ಭಾಗದಲ್ಲಿ ಕಪ್ಪು ಕಲೆ ಆಗಿದ್ಯಾ? ಇಲ್ಲಿದೆ ನೋಡಿ ಮನೆಮದ್ದು..!
ಎಲ್ಲರಿಗೂ ತಮ್ಮ ಸೌಂದರ್ಯ ಕಾಪಾಡಿಕೊಳ್ಳಬೇಕು. ಅಂದವಾಗಿ ಕಾಣಿಸಬೇಕು ಎಂಬ ಆಸೆ ಇದ್ದೇ ಇರುತ್ತೆ. ಇದಕ್ಕಾಗಿ ಎಷ್ಟೆಲ್ಲಾ ಕಸರತ್ತು ಮಾಡುತ್ತಿರುತ್ತಾರೆ. ಅಂದವಾಗಿ ಕಾಣಿಸಬೇಕು ಎಂಬ ಉದ್ದೇಶಕ್ಕೆ ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳನ್ನೆಲ್ಲ ಪ್ರಯೋಗ ಮಾಡುತ್ತಾರೆ. ಹಾಗೆ ಕೆಲವರಿಗೆ ಡಾರ್ಕ್ ಸರ್ಕಲ್ ಕಾಣಿಸಿಕೊಳ್ಳವುದು, ಕಲೆಗಳು ಉಳಿಯುವುದು, ಮೊಡವೆಗಳ ಕಲೆಯಾಗುವುದು ಹೀಗೆ ಒಂದಲ್ಲಾ ಒಂದು ಸಂಭವಿಸುತ್ತೆ.
ಇದರ ಜೊತೆಗೆ ಕೆಲವರಲ್ಲಿ ಕುತ್ತಿಗೆ ಭಾಗದಲ್ಲಿ ಕಪ್ಪು ಕಲೆ ಉಳಿದುಬಿಡುವ ಸಮಸ್ಯೆ ನೋಡಬಹುದು. ಧೂಳು, ಬೆವರು, ಆಭರಣದಿಂದಾಗಿಯೂ ಈ ರೀತಿ ಕಲೆಗಳು ಉಳಿದುಬಿಡುತ್ತದೆ. ಈ ಕಲೆಗಳನ್ನು ಹೋಗಲಾಡಿಸಲು ಅವರು ಹತ್ತು ಹಲವು ಪ್ರಯತ್ನ ಮಾಡಿರುತ್ತಾರೆ ಆದ್ರೆ ಯಾವುದು ಫಲ ನೀಡಿರುವುದಿಲ್ಲ. ಮಾರುಕಟ್ಟೆಯಲ್ಲಿ ಇದಕ್ಕೆಂದೇ ಹತ್ತು ಹಲವು ಉತ್ಪನ್ನಗಳು ಸಹ ಸಿಗುತ್ತವೆ.

ಹಾಗಾಗಿ ನಾವಿಂದು ಈ ಕುತ್ತಿಗೆಯಲ್ಲಿ ಕಪ್ಪ ಕಲೆ ಉಳಿಯುವುದನ್ನು ಹೋಗಲಾಡಿಸಲು ಮನೆಯಲ್ಲೇ ಮದ್ದು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಈ ಮೂಲಕ ಕಪ್ಪು ಕಲೆಯನ್ನು ದೂರಾಗಿಸೋಣ. ಕುತ್ತಿಗೆಯ ಕಪ್ಪು ಕಲೆಯನ್ನು ಹೋಗಲಾಡಿಸಲು ಹಲವಾರು ಚಿಕಿತ್ಸೆಗಳಿವೆ. ಹೆಚ್ಚಿನ ಸಂದರ್ಭಗಳಲ್ಲಿ ಕುತ್ತಿಗೆಯ ಬಳಿ ಕಂಡುಬರುವ ಕಲೆ, ಆಕರ್ಷಣೀಯವಾಗಿಲ್ಲದೆ ಇರಬಹುದು, ಆದ್ರೆ ನಾವಿಂದು ಹೇಳುವ ಈ ಮನೆಮದ್ದಿನಿಂದ ಈ ಕಲೆಗಳ ನಿವಾರಣೆ ಮಾಡಬಹುದು.
ನಿಂಬೆ ರಸ
ಎಲ್ಲರೂ ತಿಳಿದಿರುವಂತೆ ನಿಂಬೆಯಲ್ಲಿ ನೈಸರ್ಗಿಕ ಬ್ಲೀಚಿಂಗ್ ಗುಣ ಅಧಿಕವಾಗಿದೆ. ಎರಡು ಚಮಚ ಗುಲಾಬಿ ನೀರಿನೊಂದಿಗೆ(ರೋಸ್ ವಾಟರ್) ಎರಡು ಟಿ ಚಮಚ ನಿಂಬೆ ರಸ ಮಿಶ್ರಣ ಮಾಡಿ ಮತ್ತು ಹತ್ತಿ ಚೆಂಡನ್ನು ಬಳಸಿ ಕುತ್ತಿಗೆಯ ಕಪ್ಪಾದ ಭಾಗಕ್ಕೆ ಹಚ್ಚಿ. ಈ ಮಿಶ್ರಣವನ್ನು ಹಚ್ಚಿದ ಮರುಕ್ಷಣವೇ ತೊಳೆಯಬೇಡಿ. ಅದನ್ನು ಇಡೀ ರಾತ್ರಿ ಹಗೆಯೇ ಬಿಟ್ಟು, ಮರುದಿನ ಬೆಳಿಗ್ಗೆ ತೊಳೆಯಿರಿ. ಇದನ್ನು ವಾರದಲ್ಲಿ ಒಂದೆರಡು ಬಾರಿ ಮಾಡಿ ನೋಡಿ.
ಸನ್‌ಸ್ಕ್ರೀನ್
ನೀವು ಮನೆಯಿಂದ ಹೊರಗೆ ಹೋಗುವಾಗ, ನೀವು ಬಳಸುವ ಸನ್ಸ್ಕ್ರೀನ್ ನಿಮಗೆ ಕಾವಲು . ಕೆಲವರು ಮುಖದವರೆಗೆ ಮಾತ್ರ ಇದನ್ನು ಅನ್ವಯಿಸುತ್ತಾರೆ ಆದರೆ ಸೂರ್ಯನ ಶಾಖದ ಪರಿಣಾಮವನ್ನು ತಡೆಯಲು ಎಲ್ಲಾ ಭಾಗಗಳಿಗೆ ಹಚ್ಚುವುದು ಉತ್ತಮ.
ತೆಂಗಿನ ಹಾಲು
ತೆಂಗಿನ ಹಾಲನ್ನು ಬಳಸಿಕೊಂಡು ನಿಮ್ಮ ಕುತ್ತಿಗೆ ಕಪ್ಪು ಭಾಗವನ್ನು ಬೆಳ್ಳಗೆ ಹೊಳೆಯುವಂತೆ ಮಾಡಬಹುದಾಗಿದೆ. ಮೊದಲಿಗೆ ತಣ್ಣೀರಿನಿಂದ ಈ ಭಾಗವನ್ನು ತೊಳೆದುಕೊಳ್ಳಿ. ನಂತರ ಹತ್ತಿಯನ್ನು ತೆಗೆದುಕೊಂಡು ತೆಂಗಿನ ಹಾಲಿನಲ್ಲಿ ಅದ್ದಿ ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಳ್ಳಿ. ಅರ್ಧಗಂಟೆ ಹಾಗೆಯೇ ಬಿಡಿ. ನಂತರ ಈ ಭಾಗವನ್ನು ತಣ್ಣೀರಿನಿಂದ ತೊಳೆಯಿರಿ.
ಇದಿಷ್ಟು ಮನೆ ಮದ್ದಾದರೆ ಇನ್ನು ವೈದ್ಯರು ನೀರು ಸಲಹೆ ಏನು ಎಂಬುದನ್ನು ನೋಡಿ.
ಡಾರ್ಕ್ ನೆಕ್ ಅನ್ನು ತಡೆಯುವುದು ಹೇಗೆ?
- ಬೆವರು, ಕೊಳೆ ಇರದಂತೆ ಮಾಡಲು ಯಾವಾಗಲು ಸೋಪು ಬಳಸಿ ಕುತ್ತಿಗೆ ಭಾಗ ಚೆನ್ನಾಗಿ ಶುಚಿ ಗೊಳಿಸುತ್ತಾ ಇರಿ.
- ನಿಮ್ಮ ಕತ್ತಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಸನ್‌ಸ್ಕ್ರೀನ್ ಅನ್ನು ಹಚ್ಚಿಕೊಳ್ಳಿ.
- ಹೈ ನೆಕ್ ಶರ್ಟ್ ಅಥವಾ ಕುತ್ತಿಗೆಯ ಸುತ್ತ ಭಾರವಾದ ಆಭರಣ ಧರಿಸುವುದನ್ನು ಬಿಡಿ. ಇವುಗಳು ನಿಮ್ಮ ಚರ್ಮದ ವಿರುದ್ಧ ಉಜ್ಜಬಹುದು ಮತ್ತು ಮತ್ತಷ್ಟು ಘರ್ಷಣೆಗೆ ಕಾರಣವಾಗಬಹುದು
- ಸಾಮಾನ್ಯವಾಗಿ ಕುತ್ತಿಗೆ ಭಾಗದಲ್ಲಿ ಚರ್ಮ ನರಿಗೆಯಾಗುವುದು ಈ ಕಪ್ಪು ಕಲೆ ಉಳಿದುಬಿಡಲು ಕಾರಣವಾಗುತ್ತದೆ ಹೀಗಾಗಿ ತೂಕ ಹೆಚ್ಚಳವಾಗದಂತೆ ಎಚ್ಚರವಹಿಸಿದರೆ ಉತ್ತಮ.
ಕುತ್ತಿಗೆ ಭಾಗದಲ್ಲಿ ಕಪ್ಪಾಗಲು ಕಾರಣವೇನು?
- ಸ್ವಚ್ಛತೆ ಇಲ್ಲದಿರುವುದು
- ಆಭರಣ ಹಾಗೂ ಕುತ್ತಿಗೆಗೆ ಹಾಕುವ ಬಣ್ಣದ ದಾರ
- ಹೆಚ್ಚಿನ ಇನ್ಸುಲಿನ್ ಮಟ್ಟಗಳು



Click it and Unblock the Notifications
