Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಅಬ್ಬಾಬ್ಬ ಎಂತೆಲ್ಲಾ ಫ್ಯಾಷನ್ ಬಂದಿದೆ ನೋಡಿ ಟೀ ಮಗ್‌ನ ಹೇರ್ ಸ್ಟೈಲ್ ಸಕತ್ ಟ್ರೆಂಡ್ ಆಗಿದೆ
ಕೆಲವೊಂದು ಫ್ಯಾಷನ್, ಸ್ಟೈಲ್ ನೋಡುವಾಗ ತಲೆ ಸುತ್ತುತ್ತದೆ, ಇಂಥ ಫ್ಯಾಷನ್ ಕೂಡ ಅಚ್ಚರಿಯಾಗುವುದು, ಅಂಥದ್ದೊಂದು ಹೇರ್‌ಸ್ಟೈಲ್ ಈಗ ಸಕತ್ ಟ್ರೆಂಡ್ ಆಗಿದೆ, ಅದರಲ್ಲಿಯೂ ಅರಬ್ ರಾಷ್ಟ್ರಗಳಲ್ಲಿ ಈ ಫ್ಯಾಷನ್ ತುಂಬಾ ಟ್ರೆಂಡ್ ಆಗಿದೆ.

ಚಾಯ್ ಕಟ್ ಫ್ಯಾಷನ್ ಅಂತೆ
ಈ ಚಾಯ್ ಎಂಬುವುದು ಸಕತ್ ವರ್ಕ್ ಆಗುತ್ತಿದೆ ನೋಡಿ, ಈ ಹೇರ್‌ಕಟ್ ಹೆಸರು ಕೂಡ ಚಾಯ್ ಕಟ್ ಹೇರ್ ಸ್ಟೈಲ್, ಯುವತಿಯರು ಇದೇ ಹೇರ್ ಸ್ಟೈಲ್ ಮಾಡಿ ಎಂದು ಬರುತ್ತಿದ್ದಾರಂತೆ. ಈ ಹೇರ್ ಸ್ಟೈಲ್ ನೋಡುವಾಗಲೇ ನಗು ಬರುತ್ತದೆ. ಈ ಹೇರ್ ಸ್ಟೈಲ್ ಮಾಡಿ ನಾವು ಹೋಗುತ್ತಿದ್ದರೆ ಎಲ್ಲರೂ ನಮ್ಮತ್ತ ನೋಡುವುದಂತೂ ಗ್ಯಾರಂಟಿ, ಅಷ್ಟೊಂದು ವಿಚಿತ್ರವಾಗಿದೆ, ಎಲ್ಲರೂ ನಮ್ಮನ್ನು ನೋಡಬೇಕು ಎಂಬ ಉದ್ದೇಶ 100% ವರ್ಕ್ ಆಗುತ್ತದೆ.
ಗಮನ ಸೆಳೆದಿರುವ ಈ ವಿಭಿನ್ನ ಹೇರ್ ಸ್ಟೈಲ್
ಇರಾನ್ನ ಹೇರ್ ಡಿಸೈನರ್ ಸಯಿದೇಹ್ ಅರ್ಯೈ ಈ ಹೇರ್ ಸ್ಟೈಲ್ ಟ್ರೈ ಮಾಡಿದ್ದಾರೆ. ಸಯಿದೇಹ್ ಅರ್ಯೈ ಅವರು ಹೀಗೆ ಹಲವು ರೀತಿಯಲ್ಲಿ ಹೇರ್ ಸ್ಟೈಲ್ ಟ್ರೈ ಮಾಡುತ್ತಿರುತ್ತಾರೆ, ವಿಭಿನ್ನ ಹೇರ್ ಸ್ಟೈಲ್ ಮಾಡಿ ಗಮನ ಸೆಳೆಯುವ ಇವರು ಇದೀಗ ಚಾಯ್ ಪಾಟ್ ಹೇರ್ ಸ್ಟೈಲ್ ಟ್ರೈ ಮಾಡಿದ್ದಾರೆ. ಅದನ್ನು ನೋಡಿದಾಗ ಟೀಯನ್ನು ಹಾಕಿ ಕೊಡುವ ಕೆಟಲ್ ರೀತಿ ಇದೆ, ಸಕತ್ ಕ್ರೇಝಿ ಅಲ್ವಾ? ಈ ಡಿಸೈನ್ ಅಂತೂ ತುಂಬಾನೇ ಗಮನ ಸೆಳೆದಿದೆ.
ಈ ಹೇರ್ ಸ್ಟೈಲ್ ಮಾಡಿದರೆ ತಲೆಯಲ್ಲಿಯೇ ಟೀ ಇಟ್ಟು ಓಡಾಡಬಹುದು
ಹೌದು ಒಂದು ಕಪ್ ಇಟ್ಟು ಕೆಲವು ಸಾಧನಗಳನ್ನು ಇಟ್ಟು ಹೇರ್ ಸ್ಟೈಲ್ ಮಾಡಲಾಗಿದೆ. ಅದು ನೋಡಿದರೆ ಥೇಟ್ ಕೆಟಲ್ ರೀತಿ ಕಾಣುತ್ತೆ ಅಷ್ಟು ಮಾತ್ರವಲ್ಲ ಅವರು ಆ ಹೇರ್ ಸ್ಟೈಲ್ ಡಿಸೈನ್‌ನೊಳಗಡೆ ಟೀ ಇಟ್ಟು ಅದನ್ನು ಬಗ್ಗಿಸಿ ಕಾಫಿಗೆ ಸುರಿದಿದ್ದಾರೆ. ನಮ್ಮಲ್ಲಿ ಸ್ವಲ್ಪ ವಿಚಿತ್ರ ಫ್ಯಾಷನ್ ಮಾಡುವುದು ಅಂದರೆ ಉರ್ಫಿ ಜಾವೇದ್, ಆದರೆ ಈ ಹೇರ್ ಸ್ಟೈಲ್ ಫ್ಯಾಷನ್ ಗಮನವೂ ಸೆಳೆಯುತ್ತದೆ, ನೋಡಲು ಡೀಸೆಂಟ್, ಕ್ರಿಯೇಟಿವ್ ಸೂಪರ್ ಅಲ್ವಾ.
ಹಾರ್ಟ್ ಹೇರ್ ಸ್ಟೈಲ್
ಈ ಹೇರ್ ಸ್ಟೈಲ್ ನೋಡಿ ಹಾರ್ಟ್ ಡಿಸೈನ್. ಪ್ರೀತಿಯ ಬಾಣ ನಾಟಿರುವ ಹೇರ್ ಸ್ಟೈಲ್. ಈ ವ್ಯಾಲೆಂಟೈನ್ಸ್ ಡೇಗೆ ಇದು ಬಂದಿದ್ದರೆ ಕಂಡಿತ ಬಹುತೇಕರು ಇದನ್ನು ಮಾಡಿಸುತ್ತಿದ್ದರು, ಈ ಡಿಸೈನ್ ನೋಡಿ ನಿಮಗೆ ಏನು ಅನಿಸಿತು?
ಕಾಲಲ್ಲಿ ಇರಬೇಕಾದ ಚಪ್ಪಲಿ
ಹೌದು ಈ ಹೇರ್ ಸ್ಟೈಲ್ ನೋಡಿ ಈವಮ್ಮಾ ಏನು ಕಾಲಲ್ಲಿ ಚಪ್ಪಲಿ ಹಾಕದೆ ತಲೆಯಲ್ಲಿ ಹೊತ್ತು ಮೆರೆಯುತ್ತಿದೆ ಅಲ್ವಾ ಎಂದನಿಸಬಹುದು, ಇದು ಕೂಡ ಒಂದು ಬಗೆಯ ಹೇರ್ ಸ್ಟೈಲ್. ಈ ಚಿತ್ರ-ವಿಚಿತ್ರ ಹೇರ್ ಸ್ಟೈಲ್ ನೋಡಿ ನಿಮಗೆ ಏನು ಅನಿಸಿತು?
ಹೇರ್ ಸ್ಟೈಲ್ ಮೂಲಕ ಗಮನ ಸೆಳೆಯಬೇಕೆಂದಿದ್ದರೆ ಈ ರೀತಿ ಟ್ರೈ ಮಾಡಿ ನೋಡಿ, ಖಂಡಿತ ಗಮನ ಸೆಳೆಯಬಹುದು, ಈ ಫಂಕ್ಷನ್‌ಗೆ ಎಲ್ಲಾ ಹಾಕಿಕೊಂಡು ಹೋದರೆ ಆ ದಿನದ ಟಾಕ್ ಆಫ್ ದಿ ಪರ್ಸನ್ ನೀವೇ ಆಗಿರುತ್ತೀರಿ.'. . ಆದರೆ ಈ ತರ ಹೇರ್ ಸ್ಟೈಲ್ ಮಾಡಿ ಆತ್ಮವಿಶ್ವಾಸದಿಂದ ನಡೆಯಬೇಕು ಅಷ್ಟೇ....



Click it and Unblock the Notifications
