Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಕೇನ್ಸ್: ಸನ್ನಿ ನೋಡಿ ಇದಪ್ಪಾ ಗ್ಲಾಮರಸ್ ಲುಕ್ ಅಂದ್ರೆ ಅಂತಿರುವ ಫ್ಯಾನ್ಸ್, ಅನುಷ್ಕಾ ಕ್ಲಾಸಿ ಲುಕ್ ಕೂಡ ಸೂಪರ್!
76ನೇ #CannesFilmFestival ಪ್ರತಿಷ್ಠಿತ ಚಲನ ಚಿತ್ರೋತ್ಸವದಲ್ಲಿ ಭಾರತದಿಂದ ಹಲವಾರು ಸೆಲೆಬ್ರಿಟಿಗಳು ಭಾಗವಹಿಸಿದ್ದು ರೆಡ್‌ಕಾರ್ಪೆಟ್ ಲುಕ್‌ನಲ್ಲಿ ತಮ್ಮದೇ ಸ್ಟೈಲ್‌ನ ಚಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇನ್ಸ್‌ನಲ್ಲಿ ಐಶ್ವರ್ಯ ರೈ ಲುಕ್, ಮೌನಿ ರಾಯ್, ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್, ಶ್ರುತಿ ಹಾಸನ್ ಮುಂತಾದ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

ಇದೇ ಮೊದಲ ಬಾರಿಗೆ ಕೇನ್ಸ್‌ನ ಫಿಲ್ಮಂ ಫೆಸ್ಟಿವಲ್‌ನಲ್ಲಿ ಭಾಗವಹಿಸಿರುವ ಸನ್ನಿ ಲಿಯೋನ್ ಕೂಡ ತಮ್ಮ ಡ್ರೆಸ್ಸಿಂಗ್ ಸ್ಟೈಲ್ ಮೂಲಕ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸೊಂಟದವರೆಗಿನ ಸೀಳು ಗೌನ್‌ನಲ್ಲಿ ಸನ್ನಿಯನ್ನು ನೋಡಿದ ಅವರ ಅಭಿಮಾನಿ ಗ್ಲಾಮರ್ ಅಂದರೆ ಇದಪ್ಪಾ ಎಂದು ಹೇಳುತ್ತಿದ್ದಾರೆ.
ಸನ್ನಿ ಕೇನ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಭಾಗವಹಿಸಿರುವ ಖುಷಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಫೋಟೋ ಮೂಲಕ ಹಂಚಿಕೊಳ್ಳುತ್ತಾ " "The world premiere of #kennedy and I could not be more proud to represent Indian cinema. Such an amazing moment for myself and the entire team!" ಎಂದು ಬರೆದುಕೊಂಡಿದ್ದಾರೆ. ಕೇನ್ಸ್‌ನಲ್ಲಿ ಸನ್ನಿ ಸ್ಟೈಲ್ ಸ್ಟನಿಂಗ್ ಆಗಿದೆ.
ಮೊದಲೆಲ್ಲಾ ತೊಡೆವರೆಗಿನ ಸೀಳು ಗೌನ್‌ನಲ್ಲಿ ಸೆಲೆಬ್ರಿಟಿಗಳು ಕಾಣಿಸುತ್ತಿದ್ದರು, ಆದರೆ ಇತ್ತೀಚಿನ ದಿನಗಳಲ್ಲಿ ಸೊಂಟದವರೆಗಿನ ಸೀಳು ಗೌನ್‌ನಲ್ಲಿ ಗಮನ ಸೆಳೆಯತ್ತಿದ್ದಾರೆ. ಈ ರೀತಿಯ ಗೌನ್ ಧರಿಸಲು ಧೈರ್ಯನೂ ಬೇಕು, ಅಷ್ಟೊಂದು ಕ್ಯಾಮರಾಗಳ ಮುಂದೆ ನಿಂತು ಪೋಸ್ ಕೊಡುವಾಗ ಸ್ವಲ್ಪ ಎಡವಟ್ಟಾದರೂ ಸಿಕ್ಕಾಪಟ್ಟೆ ಟ್ರೋಲ್‌ಗೆ ಒಳಗಾಗಬೇಕಾಗುತ್ತದೆ, ತುಂಬಾ ಸೆಲೆಬ್ರಿಟಿಗಳು ಆಗಿದ್ದಾರೆ ಕೂಡ , ಆದರೆ ಸನ್ನಿ ಅಂಥ ಯಾವ ಎಡವಟ್ಟು ಮಾಡಿಕೊಳ್ಳದೆ ತಮ್ಮ ಡ್ರೆಸ್ಸಿಂಗ್ ಸ್ಟೈಲ್‌ನಲ್ಲಿ ಮಿಂಚುವಲ್ಲಿ ಯಶಸ್ವಿಯಾಗಿದ್ದಾರೆ.
ಡ್ರೆಸ್ಸಿಂಗ್ ಸಿಂಪಲ್ ಅಂಡ್ ಎಲಿಗಂಟ್
ಸನ್ನಿ ಡ್ರೆಸ್ಸಿಂಗ್ ಹೆಚ್ಚೇನು ವಿನ್ಯಾಸ ಹೊಂದಿಲ್ಲ, ತುಂಬಾನೇ ಸಿಂಪಲ್ ಆಗಿದೆ, ಅಲ್ಲದೆ ಅಷ್ಟೆಯೇ ಸ್ಟೈಲಿಷ್ ಆಗಿಯೂ ಕಾಣಿಸಿದ್ದಾರೆ.
ಗಮನ ಸೆಳೆದ ಅನುಷ್ಕಾ ಶರ್ಮಾ ಲುಕ್
ವೈಟ್ ಹಾಫ್ ಶೋಲ್ಡರ್ ಡ್ರೆಸ್ಸಿಂಗ್ ಅನುಷ್ಕಾ ಶರ್ಮಾ ತುಂಬಾನೇ ಆಕರ್ಷಕವಾಗಿ ಕಾಣಿಸುವ ಮೂಲಕ ಗಮನ ಸೆಳೆದಿದ್ದಾರೆ. ಐವರಿ ವೈಟ್ ಗೌನ್ ಗ್ರ್ಯಾಂಡ್ ಎಂಬ್ರಾಯ್ಡ್ ವರ್ಕ್ ಹೊಂದಿದ್ದು ಮಿನಿಮಮ್ ಜ್ಯೂವೆಲರಿ ಮೂಲಕ ಗಮನ ಸೆಳೆದಿದ್ದಾರೆ. ಇವರ ಕಂಪ್ಲೀಟ್ ಮಾಡರ್ನ್ ಅವತಾರ ಫ್ಯಾಷನ್ ಲೋಕದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.



Click it and Unblock the Notifications

