Latest Updates
-
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ
ಕೇನ್ಸ್ 2023 ಡೇ 1: ರೆಡ್‌ಕಾರ್ಪೆಟ್‌ನಲ್ಲಿ ಭಾರತೀಯ ಸುಂದರಿಯರು ಗಮನ ಸೆಳೆದಿದ್ದು ಹೀಗೆ
ಸಿನಿರಂಗದ ಅತ್ಯಂತ ಪ್ರತಿಷ್ಠಿತ #CannesFilmFestival 2023ಕ್ಕೆ ಭರ್ಜರಿ ಆರಂಭ ಸಿಕ್ಕಿದೆ. ಈ ಸಮಾರಂಭಕ್ಕೆ ಹಾಲಿವುಡ್ ಹಾಗೂ ಇತರ ಕಡೆಗಳಿಂದ ಹಲವಾರು ಸೆಲೆಬ್ರಿಟಿಗಳು ಭಾಗವಹಿಸಿ ತಮ್ಮ ಫ್ಯಾಷನ್ ಲುಕ್‌ನ ಮೂಲಕ ಫಂಕ್ಷನ್‌ನ ರಂಗೇರಿಸಿದ್ದಾರೆ. ಸೆಲೆಬ್ರಿಟಿಗಳು ಒಬ್ಬರಿಗೊಬ್ಬರಿಗಿಂತ ಒಬ್ಬರು ಆಕರ್ಷಕವಾಗಿ ಡ್ರೆಸ್ಸಿಂಗ್ ಮಾಡಿ ರೆಡ್ ಕಾರ್ಪೆಟ್ ವಾಕ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಅವರಲ್ಲಿ ಮೊದಲ ದಿನ ಭಾರತೀಯ ಸೆಲೆಬ್ರಿಟಿಗಳಾದ ಈಶಾ ಗುಪ್ತಾ, ಮಾನುಷಿ ಚಿಲ್ಲರ್ , ಸಾರಾ ಅಲಿಖಾನ್ ಲುಕ್ ಅಂತೂ ತುಂಬಾನೇ ಗಮನ ಸೆಳೆಯಿತು. ಅವರ ಫ್ಯಾಷನ್ ಝಲಕ್ ಹೀಗಿತ್ತು ನೋಡಿ:

ಥೈ ಸ್ಲಿಟ್ ಪ್ರಿಲ್ಡ್ ಗೌನ್‌ನಲ್ಲಿ ಮಿಂಚಿದ ಮಾನುಷಿ ಚಿಲ್ಲರ್
ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ರೆಡ್ ಕಾರ್ಪೆಟ್ ಲುಕ್ ತುಂಬಾನೇ ಆಕರ್ಷಕವಾಗಿತ್ತು. ವೈಟ್ ಕಲರ್ ಥೈ ಸ್ಲಿಟ್ ಗೌನ್, ಗ್ರೀನ್ ಸ್ಟೋನ್ ನೆಕ್ಲೆಸ್ ಧರಿಸಿ ಹೆಜ್ಜೆ ಹಾಕಿದ್ದರು ಮಾನುಷಿ ಚಿಲ್ಲರ್
ಈಶಾ ಗುಪ್ತಾ ಥೈ ಸ್ಲಿಟ್ ಬೋಲ್ಡ್ ಲುಕ್
ಈಶಾ ಗುಪ್ತಾ ಸಕತ್ ಬೋಲ್ಡ್ ಆಗಿ ಡ್ರೆಸ್ಸಿಂಗ್ ಮಾಡಿಕೊಂಡು ರೆಡ್ ಕಾರ್ಪೆಟ್ ಹೆಜ್ಜೆ ಹಾಕುವ ಮೂಲಕ ನೋಡುಗರು ಹುಬ್ಬೇರುವಂಥ ಲುಕ್‌ನಲ್ಲಿ ಮಿಂಚಿದ್ದಾರೆ. ಸಾಮಾನ್ಯವಾಗಿ ಹಾಲಿವುಡ್ ಸೆಲೆಬ್ರಿಟಿಗಳು ಈ ಬಗೆಯ ಡ್ರೆಸ್ಸಿಂಗ್‌ನಲ್ಲಿ ಮಿಂಚುತ್ತಿದ್ದರು. ಹೈ ಥೈ ಲಾಂಗ್ ಸ್ಲಿಟ್ ಗೌನ್‌ನಲ್ಲಿ ಈಶಾ ಗುಪ್ತಾ ಲುಕ್ ಹೀಗಿತ್ತು ನೋಡಿ.
ಬ್ರೈಡಲ್ ಸ್ಕರ್ಟ್ ಅಂಡ್ ಬ್ಲೌಸ್‌ನಲ್ಲಿ ಮಿಂಚಿದ ಸಾರಾ ಅಲಿಖಾನ್
ಸಾರಾ ಅಲಿಖಾನ್ ಭಾರತೀಯ ಉಡುಗೆಯಲ್ಲಿ ಒಂದಾದ ಸ್ಕರ್ಟ್ ಅಂಡ್ ಬ್ಲೌಸ್‌ನಲ್ಲಿ ಮಿಂಚಿದ್ದಾರೆ. ಇವರ ಲುಕ್ ತುಂಬಾನೇ ಆಕರ್ಷಕವಾಗಿತ್ತು ಅವರ ಹೇರ್ ಸ್ಟೈಲ್ ಅದಕ್ಕೆ ಒಪ್ಪುವಂಥ ಕಿವಿಯೋಲೆ, ಕೈ ಬಳೆ, ಕೇನ್ಸ್ ಹಬ್ಬದಲ್ಲಿ ಭಾರತೀಯ ಮೆರುಗಿನಲ್ಲಿ ಮಿಂಚಿದ ಸಾರಾ ಅಲಿಖಾನ್.



Click it and Unblock the Notifications



