Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಕೇನ್ಸ್ 2023: ಐಶ್‌ಗೆ ಐಶ್‌ನೇ ಸಾಟಿ, ಊರ್ವಶಿ ರೌಟೇಲಾ ಲುಕ್‌ಯೇನೂ ಕಡಿಮೆಯಿಲ್ಲ
ಐಶ್ವರ್ಯ ರೈಗೆ ಸರಿಸಾಟಿ ಐಶ್ವರ್ಯ ರೈನೇ ಎಂದು ಹೇಳುವುದು ಸುಮ್ನಲ್ಲ. ಮಾಜಿ ವಿಶ್ವ ಸುಂದರಿ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಅಲ್ಲಿದ್ದವರ ಗಮನವನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ. 76ನೇ ಕೇನ್ಸ್ ಫಿಲ್ಮಂ ಫೆಸ್ಟಿವಲ್ ನಡೆಯುತ್ತಿದೆ. #CannesfilmFestival2023 ಪ್ರತಿಬಾರಿಯಂತೆ ಈ ಬಾರಿಯೂ ತಮ್ಮನ್ನ ಡ್ರೆಸ್ಸಿಂಗ್ ಸ್ಟೈಲ್‌ನಲ್ಲಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೇನ್ಸ್ 3ನೇ ದಿನ ಸಿಲ್ವರ್, ಬ್ಲ್ಯಾಕ್‌ನ ಡ್ರೆಸ್ಸಿಂಗ್‌ನಲ್ಲಿ ಕಂಗೊಳಿಸಿದರೆ ನಾಲ್ಕನೇ ದಿನ ಹಸಿರು ಬಣ್ಣದ ಡ್ರೆಸ್ಸಿಂಗ್‌ನಲ್ಲಿ ಮಿಂಚಿದ್ದಾರೆ. ಈ ಡಿಸೈನರ್ ಔಟ್‌ಫಿಟ್ ಕ್ಯಾಸ್ಯೂಯಲ್ ಲುಕ್‌ಗೂ ಸೈ, ಫಂಕ್ಷನ್ ಲುಕ್‌ಗೂ ಸೈ.
ಹೆಚ್ಚಿನ ಆಭರಣ ಧರಿಸದೆ, ಗ್ಲೋಸಿ ಮೇಕಪ್‌ನಲ್ಲಿ ಶೈನಿಂಗ್ ಗ್ರೀನ್ ಕಲರ್ ಡಿಸೈನರ್ ಡ್ರೆಸ್‌ನಲ್ಲಿ ಗಮನ ಸೆಳೆದಿದ್ದಾರೆ. ಈ ಬಾರಿ ಎರಡೂ ಡ್ರೆಸ್ಸಿಂಗ್ ಕೂಡ ತುಂಬಾನೇ ವಿಭಿನ್ನವಾಗಿದ್ದು, ತುಂಬಾ ಹೊಸ ವಿನ್ಯಾಸವಾಗಿದೆ, ಈ ಡಿಸೈನರ್ ಡ್ರೆಸ್ ಬೇರೆಯವರು ಧರಿಸಿದರೆ ಈ ಲುಕ್ ಬರುತ್ತಿತ್ತೋ ಏನೋ ಆದರೆ ಐಶ್ ಧರಿಸಿದಾಗ ಮಾತ್ರ ಈ ಡ್ರೆಸ್ಸಿಂಗ್‌ಗೆ ವಿಶೇಷ ಕಳೆ ಬಂದಿದೆ.
ಊವರ್ಶಿ ರೌಟೇಲಾ
ಮೊದಲ ದಿನ ಪಿಂಕ್ ಪ್ರಿಲ್ಡ್ ಗೌನ್‌ನಲ್ಲಿ ಬಾರ್ಬಿ ಲುಕ್‌ನಲ್ಲಿ ಮಿಂಚಿದರೆ , ನಾಲ್ಕನೇ ದಿನದಂದು ಬ್ಲೂ, ಸಿಲ್ವರ್ ಕಾಂಬಿನೇಷನ್‌ನಲ್ಲಿ ಮಿಂಚಿದ್ದಾರೆ, ಲಿಪ್‌ಸ್ಟಿಕ್ ಸ್ವಲ್ಪ ವಿಚಿತ್ರ ಅನಿಸಿದರೂ ಅವರ ಲುಕ್ ಮಾತ್ರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅವರ ಡ್ರೆಸ್ಸಿಂಗ್ ಬಗ್ಗೆ ನೋಡುವುದಾದರೆ ತುಂಬಾನೇ ಆಕರ್ಷಕವಾಗಿದೆ. ಡೀಪ್ ಕ್ಲೀವೇಜ್‌ನ ಗೌನ್ ಡೈಮಂಡ್ ನೆಕ್ಲೇಸ್, ಡೈಮಂಡ್ ಇಯರಿಂದ ಧರಿಸಿ, ಅತ್ಯಾಕರ್ಷ ಬನ್ ಹೇರ್ ಸ್ಟೈಲ್‌ನಲ್ಲಿ ಮಿಂಚಿದ್ದಾರೆ.



Click it and Unblock the Notifications

