Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
Cannes Film Festival 2023: ಕೇನ್ಸ್ ಧರೆಯಲ್ಲಿ ಸಾರಾ ಅಲಿಖಾನ್ ಎಂಬ ಅಪ್ಸರೆ
76ನೇ #CannesFilmFestivalನ ಎರಡನೇ ದಿನವಾದ ಇಂದು ಕೂಡ ಭಾರತೀಯ ಸೆಲೆಬ್ರಿಟಿಗಳಾದ ಸಾರಾ ಅಲಿಖಾನ್, ಊರ್ವಶಿ ರೌಟೇಲಾ, ಮೃಣಾಲ್ ಠಾಕೂರ್ ತಮ್ಮ ಸ್ಟನ್ನಿಂಗ್ ಲುಕ್ ಮೂಲಕ ಫ್ಯಾಷನ್ ಲೋಕದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೇನ್ಸ್ ಧರೆಯಲ್ಲಿ ಸಾರಾ ಅಲಿಖಾನ್ ಎಂಬ ಅಪ್ಸರೆ
ಕೇನ್ಸ್ ರೆಡ್ ಕಾರ್ಪೆಟ್ ಲುಕ್ನಲ್ಲಿ 2ನೇ ದಿನವೂ ಸಾರಾ ಅಲಿಖಾನ್ ತಮ್ಮ ಫ್ಯಾಷನ್ ಲುಕ್ ಮೂಲಕ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ದಿನ ಕೂಡ ಪಕ್ಕಾ ದೇಸಿ ಲುಕ್ನಲ್ಲಿ ಕಾಣಿಸಿಕೊಂಡಿರುವುದರಿಂದ ಅವರ ಲುಕ್ ಭಾರತೀಯರಿಗೆ ಮತ್ತಷ್ಟು ವಿಶೇಷವಾಗಿದೆ. ಕೂದಲನ್ನುತುರುಬು ರೀತಿಯಲ್ಲಿ ಕಟ್ಟಿ ಬಿಳಿ ಬಣ್ಣದ ಸ್ಕರ್ಟ್ ಅದಕ್ಕೆ ಕಪ್ಪು- ಬಿಳುಪಿನ ಬ್ಲಾಸ್, ಅದಕ್ಕೊಪ್ಪುವ ಸರದಲ್ಲಿ ಹಿಂದಿನ ಕಾಲದ ರಾಜಕುಮಾರಿಗಳ ಡ್ರೆಸ್ಸಿಂಗ್ನಲ್ಲಿ ಮಿಂಚಿದ್ದಾರೆ.
ಕಪ್ಪು-ಬಿಳುಪಿನ ಕಾಂಬಿನೇಷನ್ ಡ್ರೆಸ್ಸಿಂಗ್ ತುಂಬಾನೇ ಆಕರ್ಷಕವಾಗಿತ್ತು. ಕಿವಿಗೆ ಮುತ್ತಿನ ಓಲೆ, ಕುತ್ತಿಗೆಗೆ ಮ್ಯಾಚಿಂಗ್ ಬೀಡ್ಸ್ ಅವರ ಡ್ರೆಸ್ಸಿಂಗ್ ಲುಕ್ನ ಛಾರ್ಮ್ ಮತ್ತಷ್ಟು ಹೆಚ್ಚಿಸುವಲ್ಲಿ ಸಹಾಯ ಮಾಡಿದೆ.
ಬೋಲ್ಡ್ ಲುಕ್ನಲ್ಲಿ ಊರ್ವಶಿ ರೌಟೇಲಾ
ಕಪ್ಪು ಬಣ್ಣದ ಬೋಲ್ಡ್ ಡ್ರೆಸ್ಸಿಂಗ್ನಲ್ಲಿ ರೌಟೇಲಾ ಸಕತ್ ಬೋಲ್ಡ್ ಆಗಿ ಕಾಣಿಸಿದ್ದಾರೆ. ಫ್ರೀ ಹೇರ್, ಬೋಲ್ಡ್ ಲುಕ್ನಲ್ಲಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
* ಮೃಣಾಲ್ ಠಾಕೂರ್
ಇದೇ ಮೊದಲ ಬಾರಿ #Cannes ಫಿಲ್ಮಂ ಫೆಸ್ಟಿವಲ್ನಲ್ಲಿ ಕಾಣಿಸಿಕೊಂಡಿರುವ ಮೃಣಾಲ್ ಠಾಕೂರ್ ಅವರು ಪೀಚ್ ಪ್ರಿಲ್ಡ್ ಡ್ರೆಸ್ಸಿಂಗ್ನಲ್ಲಿ ಗಮನ ಸೆಳೆದಿದ್ದಾರೆ. ಇವರ ಪ್ರಿಲ್ಡ್ ಡ್ರೆಸ್ ತುಂಬಾನೇ ಆಕರ್ಷಕವಾಗಿದೆ.



Click it and Unblock the Notifications



