Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸ್ತನಗಳಲ್ಲಿ ಬದಲಾವಣೆ: ಯಾವುದು ಸಹಜವಾದ ಲಕ್ಷಣವಲ್ಲ
ಹೆಣ್ಣಿಗೆ ತನ್ನ ಸೌಂದರ್ಯದ ಕುರಿತು ಆತ್ಮವಿಶ್ವಾಸ ಹೆಚ್ಚಿಸುವುದೇ ಅವಳ ಸ್ತನಗಳು. ಸರಿಯಾದ ಗಾತ್ರದ ಸ್ತನಗಳು ಅವಳ ದೇಹ ಸೌಂದರ್ಯದ ಚೆಲುವು ಹೆಚ್ಚಿಸುವುದು. ಹೆಣ್ಮಕ್ಕಳು ಋತುಮತಿಯಾದಾಗ ಅವರ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಸ್ತನಗಳ ಗಾತ್ರ ದೊಡ್ಡದಾಗುವುದು. ಆದರೆ ಮಕ್ಕಳಾದ ಮೇಲೆ, ಮೆನೋಪಾಸ್ ಹಂತ ತಲುಪಿದ ಮೇಲೆ ಸ್ತನಗಳಲ್ಲಿ ಬದಲಾವಣೆ ಕಂಡು ಬರುವುದು.
ಆದರೆ ಕೆಲವೊಮ್ಮೆ ಸ್ತನಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ, ಈ ವ್ಯತ್ಯಾಸ ನಿಮ್ಮ ಅನಾರೋಗ್ಯದ ಬಗ್ಗೆ ಸೂಚನೆಯನ್ನು ನೀಡುವುದು, ಉದಾಹರಣೆ ಸ್ತನಗಳಲ್ಲಿ ಗಡ್ಡೆಗಳು ಇರುವಂತೆ ಕಂಡು ಬಂದರೆ ಅದು ಸ್ತನ ಕ್ಯಾನ್ಸರ್‌ನ ಲಕ್ಷಣಗಳಾಗಿರಬಹುದು.
ಕೆಲವರಿಗೆ ಸ್ತನಗಳಲ್ಲಿ ನೋವು ಕಂಡು ಬರುವುದು. ಇಲ್ಲಿ ನಾವು ಸ್ತನಗಳಲ್ಲಿ ವ್ಯತ್ಯಾಸ ಕಂಡು ಬಂದಾಗ ಯಾವಾಗ ಭಯ ಪಡಬೇಕಾಗಿಲ್ಲ, ಯಾವಾಗ ವೈದ್ಯರನ್ನು ಕಾಣಬೇಕು ಎಂಬ ಮಾಹಿತಿ ನೀಡಿದ್ದೇವೆ ನೋಡಿ:

ಮೊಲೆತೊಟ್ಟಿನಲ್ಲಿ ದ್ರವ ಬರುವುದು/ನಿಪ್ಪಲ್ ಡಿಸ್‌ಚಾರ್ಜ್
ಮೊಲೆತೊಟ್ಟಿನಲ್ಲಿ ನೀರು ಅಥವಾ ಹಾಲಿನ ರೂಪದಲ್ಲಿ ದ್ರವ ಬರುವುದು ಆಗಿರಬಹುದು ಅಥವಾ ದ್ರವದಲ್ಲಿ ಸ್ವಲ್ಪ ರಕ್ತ ಕಂಡು ಬರುವುದು. ಆದರೆ ಈ ರೀತಿ ದ್ರವ ಬರುವುದು ಯಾವಾಗ ಭಯಪಡಬೇಕಾಗಿಲ್ಲ, ಯಾವಾಗ ವೈದ್ಯರಿಗೆ ತೋರಿಸಬೇಕು ಎಂದು ನೋಡೋಣ.
ಕೆಲ ಗರ್ಭಿಣಿಯರಲ್ಲಿ 7 ತಿಂಗಳು ಆಗುತ್ತಿದ್ದಂತೆ ಮೊಲೆತೊಟ್ಟಿನಲ್ಲಿ ಹಾಲು ಬರಲಾರಂಭಿಸುತ್ತದೆ. ಕೆಲವರಿಗೆ ಬೇಗನೆ ನೀರು ರೀತಿಯಲ್ಲಿ ಬರಲಾರಂಭಿಸುತ್ತದೆ. ಮಗುವಾದ ಬಳಿಕ ನೀವು ಮಗುವಿಗೆ ಎದೆಹಾಲು ಕುಡಿಯುವುದನ್ನು ನಿಲ್ಲಿಸುವವರೆಗೆ ಬರುತ್ತದೆ.
ಇನ್ನು ಮೆನೋಪಾಸ್ ಹಂತಕ್ಕೆ ಮುನ್ನ ಹಾಲಿನ ರೀತಿಯ ದ್ರವ ಬರುತ್ತದೆ, ಇದು ಹಾರ್ಮೋನ್‌ಗಲ ವ್ಯತ್ಯಾಸದಿಂದಾಗಿ ಉಂಟಾಗುವುದು. ಇದು ಕೂಡ ನಾರ್ಮಲ್, ಏನೂ ಭಯಪಡಬೇಕಾಗಿಲ್ಲ.

ಯಾವ ಲಕ್ಷಣಗಳು ಅಸಹಜತೆಯ ಸೂಚನೆ?
ಮೊಲೆತೊಟ್ಟಿನಲ್ಲಿ ರಕ್ತ ಅಥವಾ ಸ್ವಲ್ಪ ಹಸಿರು ಬಣ್ಣದಲ್ಲಿ ಅಥವಾ ನೀರಿನ ರೀತಿಯಲ್ಲಿ ದ್ರವ ಬರುತ್ತಿದ್ದರೆ, ಸ್ತನದಲ್ಲಿ ಗಡ್ಡೆಯಿದ್ದರೆ ಕೂಡಲೇ ವೈದ್ಯರನ್ನು ಭೇಟಿಯಾಗಿ. ಹೀಗೆಲ್ಲಾ ಉಂಟಾಗಲು ಕ್ಯಾನ್ಸರ್ ಕಾರಣವೆಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಸೋಂಕು ಉಂಟಾಗಿ ಈ ರೀತಿ ಉಂಟಾಗುವುದು. ವೈದ್ಯರು ನಿಮ್ಮನ್ನು ಪರೀಕ್ಷಿಸಿ ಸಮಸ್ಯೆಯನ್ನು ಪತ್ತೆ ಹಚ್ಚುತ್ತಾರೆ.

ಸ್ತನಗಳಲ್ಲಿ ಗಂಟು
ಸ್ತನಗಳಲ್ಲಿ ಗಂಟು ಕಂಡು ಬಂದರೆ ಭಯಪಡಬೇಡಿ, ವೈದ್ಯರಿಗೆ ತೋರಿಸಿ. ಶೇ. 80ರಷ್ಟು ಸ್ತನಗಳ ಗಡ್ಡೆಗಳು ಕ್ಯಾನ್ಸರ್ ಆಗಿರುವುದಿಲ್ಲ. ಕೆಲವೊಮ್ಮೆ ಮುಟ್ಟಿನ ಸಮಯದಲ್ಲಿ ಅಥವಾ ಮೆನೋಪಾಸ್ ಸಮಯದಲ್ಲಿ ಈ ರೀತಿ ಕೆಲವರಲ್ಲಿ ಕಂಡು ಬರುತ್ತದೆ.
ಗಡ್ಡೆಗಳ ಬಗ್ಗೆ ನಿಮಗೆ ಅನುಮಾನವಿದ್ದರೆ ವೈದ್ಯರಿಗೆ ತೋರಿಸಿ, ಅವರು ಪರೀಕ್ಷೆ ಮಾಡಿ ಗಡ್ಡೆಗೆ ನಿಖರ ಕಾರಣ ಹೇಳುತ್ತಾರೆ. ಸ್ತನಗಳಲ್ಲಿ ದ್ರವ ತುಂಬಿ ಗಡ್ಡೆಯಾಗಿದ್ದರೆ ಅದನ್ನು ಸೂಜಿ ಚಿಕಿತ್ಸೆ ಮೂಲಕ ತೆಗೆಯುತ್ತಾರೆ. ಯಾವುದಕ್ಕೂ ಸ್ತನಗಳಲ್ಲಿ ಕಂಡು ಬಂದ ಗಡ್ಡೆಗಳನ್ನು ನಿರ್ಲಕ್ಷ್ಯ ಮಾಡಲೇಬೇಡಿ.

ಸ್ತನಗಳ ಬಣ್ಣ ಮತ್ತು ಗಾತ್ರದಲ್ಲಿ ವ್ಯತ್ಯಾಸ
ನಿಮ್ಮ ಸ್ತನಗಳಲ್ಲಿ ತುರಿಕೆ, ತ್ವಚೆ ಕೆಂಪಾಗುವುದು, ಮೊಲೆತೊಟ್ಟಿನಲ್ಲಿ ವ್ಯತ್ಯಾಸ ಕಂಡು ಬಂದರೆ ವೈದ್ಯರಿಗೆ ತೋರಿಸಿ. ಬಯೋಸ್ಪೈ ಮಾಡಿ ಸ್ತನಗಳ ವ್ಯತ್ಯಾಸಕ್ಕೆ ಏನು ಕಾರಣ ಎಂದು ಕಂಡು ಹಿಡಿಯಬಹುದು. ಈ ಸಮಸ್ಯೆಗಳನ್ನು ಚಿಕಿತ್ಸೆ ಮೂಲಕ ಗುಣಪಡಿಸಬಹುದು.

ಸ್ತನಗಳಲ್ಲಿ ನೋವು ಕಂಡು ಬಂದರೆ
ಕೆಲವರಲ್ಲಿ ಮುಟ್ಟಿಗೆ ಕೆಲ ದಿನಗಳ ಮೊದಲು ಸ್ತನಗಳಲ್ಲಿ ನೋವು ಕಂಡು ಬರುತ್ತದೆ. ಆದರೆ ಸ್ತನಗಳಲ್ಲಿ ನೋವು ತುಂಬಾ ದಿನಗಳಿಂದ ಇದ್ದರೆ ನಿರ್ಲಕ್ಷ್ಯ ಮಾಡಬೇಡ, ಅದು ಅನಾರೋಗ್ಯದ ಸೂಚನೆಯಾಗಿರಬಹುದು. ಇನ್ನು ಕೆಲ ಗರ್ಭನಿರೋಧಕ ಮಾತ್ರೆಗಳು ಕೂಡ ಸ್ತನಗಳಲ್ಲಿ ನೋವು ಕಂಡು ಬರಲು ಕಾರಣವಾಗಿದೆ. ಇನ್ನು ಅಧಿಕ ಕೆಫೀನ್ ಸೇವನೆಯಿಂದಲೂ ಸ್ತನಗಳಲ್ಲಿ ನೋವು ಕಂಡು ಬರುವುದು. ಹಾರ್ಮೋನ್ ವ್ಯತ್ಯಾಸದಿಂದ ಉಂಟಾಗುವ ಸ್ತನ ನೋವಿಗೆ ಹಾರ್ಮೋನ್ ಥೆರಪಿ ಮೂಲಕ ಸರಿಪಡಿಸಬಹುದು.

ಗಾತ್ರದಲ್ಲಿ ಬದಲಾವಣೆ
ಮುಟ್ಟಿನ ಸಮಯದಲ್ಲಿ ಹಾಗೂ ಗರ್ಭವತಿಯಾದಾಗ ಸ್ತನಗಳ ಗಾತ್ರ ಬದಲಾವಣೆಯಾಗುವುದು ಸಹಜ. ಇನ್ನು ಮೆನೋಪಾಸ್ ಹಂತಕ್ಕೆ ಬಂದಾಗ ಸ್ತನಗಳು ಜೋತು ಬೀಳುವುದು ಕೂಡ ಸಹಜ. ಆದರೆ ಏನೋ ಅಸಹಜ ಬದಲಾವಣೆ ನಿಮಗನಿಸಿದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ, ಪರೀಕ್ಷೆ ಮಾಡಿಸಿ.



Click it and Unblock the Notifications