Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ನಿಮಗೆ ಸರಿಯಾದ ಬ್ರಾ ಸೈಜ್ ಆಯ್ಕೆ ಹೇಗೆ? ಬ್ರಾ ತುಂಬಾ ಬಿಗಿಯಿರಬಾರದು ಏಕೆ?
ಪ್ರತಿಯೊಬ್ಬ ಮಹಿಳೆ ಬ್ರಾ ಧರಿಸುವುದಾದರೂ ಎಲ್ಲರೂ ತಮ್ಮ ದೇಹಕ್ಕೆ ಸರಿಹೊಂದುವ ಬ್ರಾ ಸೈಜ್ ಆಯ್ಕೆ ಮಾಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ... ಬ್ರಾ ಸೈಜ್ ಸರಿಯಿಲ್ಲದಿದ್ದರೆ ಒಮದೋ ಸ್ತನಗಳು ಜೋತು ಬೀಳಬಹುದು ಇಲ್ಲಾ ತುಂಬಾ ಬಿಗಿಯಾಗಿ ನೋವು ಉಂಟು ಮಾಡಬಹುದು. ಇನ್ನು ಬ್ರಾ ಧರಿಸಿ ನಾವು ಅದರ ಮೇಲೆ ಬಟ್ಟೆ ಹಾಕಿದಾಗ ಅರ್ಧ ಸ್ತನ ಬ್ರಾದಿಂದ ಎದ್ದು ಕಾಣುವಂತಿದ್ದರೆ ಕೂಡ ಬಾಡಿ ಶೇಪ್ ಅಷ್ಟು ಆಕರ್ಷಕವಾಗಿ ಕಾಣುವುದಿಲ್ಲ.
ಸ್ಯಾರಿ ಹಾಕುವುದಾದರೆ ಲೂಸ್ ಬ್ರಾನೇ ಒಳ್ಳೆಯದು, ಆದರೆ ಡ್ರೆಸ್ ಹಾಕುವಾಗ ನಾವು ಬ್ರಾದ ಆಯ್ಕೆ ಸರಿಯಾದ ರೀತಿಯಲ್ಲಿ ಮಾಡಬೇಕು. ಇನ್ನು ಬ್ರಾ ತುಂಬಾ ಬಿಗಿಯಾದರೆ ಉಸಿರು ಕಟ್ಟಿದಂತಾಗುವುದರಿಂದ ಹಿಂಸೆ ಅನಿಸುವುದು, ಅಲ್ಲದೆ ತುಂಬಾ ಬಿಗಿಯಾದ ಬ್ರಾ ಧರಿಸಿದಾಗ ಸರಿಯಾಗಿ ರಕ್ತ ಸಂಚಲನವಾಗುವುದಿಲ್ಲ, ಇದರಿಂದಾಗಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವಿಜ್ಞಾನವೂ ಹೇಳುತ್ತದೆ.

ನಿಮ್ಮ ಬ್ರಾ ತುಂಬಾ ಬಿಗಿಯಾಗಿದೆ ಎಂದು ತಿಳಿಯುವುದು ಹೇಗೆ?
ಬ್ರಾ ತುಂಬಾ ಬಿಗಿಯಾದರೆ ಈ ರೀತಿಯ ಸಮಸ್ಯೆ ಕಂಡು ಬರುವುದು:
* ತ್ವಚೆಯಲ್ಲಿ ಗುಳ್ಳೆಗಳು ಕಂಡಿ ಬರುವುದು, ಸ್ತನದ ಮೇಲೆ ಸೆಕೆಗೆ ಬರುವ ಗುಳ್ಳೆಗಳಂತೆ ಚಿಕ್ಕ-ಚಿಕ್ಕ ಗುಳ್ಳೆಗಳು(ಹೀಟ್ ರ‍್ಯಾಶ್) ಖಮಡು ಬರುವುದು.
* ಮೈಗಂಟಿದಂತೆ ಬಟ್ಟೆ ಇರುವುದರಿಂದ ತುರಿಕೆ ಕಂಡು ಬರುವುದು.
* ಇನ್ನು ಧರಿಸುವಾಗ ತುಂಬಾ ಕಷ್ಟಪಟ್ಟು ಬ್ರಾ ಹಾಕುವುದಾದರೆ ನಿಮ್ಮ ಬ್ರಾ ಗಾತ್ರ ಚಿಕ್ಕದಾಗಿದೆ ಎಂದು ಹೇಳಬಹುದು.
* ಆ್ಯಸಿಡ್ ರಿಫ್ಲೆಕ್ಸ್ ಸಮಸ್ಯೆ ಉಂಟಾಗಬಹುದು. ಬ್ರಾ ಬಿಗಿಯಾದಾಗ ಕಿಬ್ಬೊಟ್ಟೆಯಲ್ಲಿ ಒತ್ತಡ ಉಂಟಾಗಿ ಈ ಸಮಸ್ಯೆ ಉಂಟಾಗಬಹುದು.

ಬ್ರಾದಿಂದ ಸ್ತನಗಳು ಹೊರಬೀಳುವಂತಿದ್ದರೆ
ಕೆಲವೊಮ್ಮೆ ಬ್ರಾ ಗಾತ್ರ ಸರಿಯಾಗಿದ್ದರೂ ಕಪ್ ಗಾತ್ರ ಚಿಕ್ಕದಾಗಿದ್ದರೆ ಈ ರೀತಿಯ ಸಮಸ್ಯೆ ಉಂಟಾಗುವುದು. ಸ್ತನ ಗಾತ್ರ ಸ್ವಲ್ಪ ದೊಡ್ಡದು ಇದ್ದವರು ಡಿ ಕಪ್ ಅಥವಾ ಇ ಕಪ್ ಬ್ರಾ ಆಯ್ಕೆ ಮಾಡುವುದು ಒಳ್ಳೆಯದು. ಬ್ರಾ ಕೊಳ್ಳಲು ಹೋಗುವಾಗ ಮುಜುಗರ.. ನಿಮ್ಮ ಸೈಜ್ ಬಗ್ಗೆ ಗೊಂದಲವಿದ್ದರೆ ಟ್ರಯಲ್ ಮಾಡಿ ನೋಡುವ ಕಡೆ ಹೋಗಿ ತೆಗೆದುಕೊಳ್ಳಬಹುದು.

ಬ್ರಾ ಬಿಗಿಯಾದರೆ ಏನು ಮಾಡಬೇಕು?
ಕೆಲವೊಮ್ಮೆ ನಾವು ಕೊಂಡು ತರುವಾಗ ಬ್ರಾ ಗಾತ್ರ ಸರಿ ಇರುತ್ತದೆ, ಆದರೆ ನಾವು ಒಂದೆರಡು ಕೆಜಿ ಅಧಿಕವಾದರೆ ಬ್ರಾ ಬಿಗಿಯಾದಂತೆ ಅನಿಸುವುದು. ದುಬಾರಿ ಬೆಲೆ ಬ್ರಾ ಆದರೆ ವೇಸ್ಟ್ ಮಾಡಲು ಮನಸ್ಸಾಗಲ್ಲ, ಆಗ ನೀವು ಬ್ರಾ ಎಕ್ಸೆಂಡರ್ ಬಳಸಿ (ಇದು ಶಾಪ್‌ಗಳಲ್ಲಿ ಕೇಳಿದರೆ ಸಿಗುವುದು).
ನಿಮ್ಮ ಸ್ಟ್ರಾಪ್ ಅಡ್ಜೆಸ್ಟ್ ಮಾಡಿದರೆ ಸಾಕು ಬ್ರಾ ಫಿಟ್ ಆಗುತ್ತೆ. ಆದರೆ ಈ ಟಿಪ್ಸ್ ಬಳಸಿ.

ಇನ್ನು ವಿಭಿನ್ನ ಸೈಜ್‌ನ ಬ್ರಾ ಟ್ರೈ ಮಾಡಿ
ನೀವು-ನಿಮ್ಮ ಸಹೋದರೆ ಒಂದೇ ಮೈ ತೂಕ ಹೊಂದಿದ್ದರೂ ಒಂದು ವೇಳೆ ಸ್ತನದ ಗಾತ್ರದಲ್ಲಿ ವ್ಯತ್ಯಾಸವಿದ್ದರೆ ಅವರಿಗಾಗುವ ಬ್ರಾ ಸೈಜ್ ನಿಮಗೂ ಆಗುತ್ತೆ ಎಂದು ಬಳಸುವುದು ಸರಿಯಲ್ಲ. ನಿಮಗೆ ಹೊಂದುವ ಸೈಜ್ ಯಾವುದು ಎಂದು ಬೇರೆ-ಬೇರೆ ಸೈಜ್‌ನಲ್ಲಿ ಟ್ರೈ ಮಾಡಿದರೆ ಸಿಗುತ್ತೆ.

ಬ್ರಾ ಆಯ್ಕೆ ಹೇಗಿರಬೇಕು?
* ನೀವು ಬ್ರಾ ಆಯ್ಕೆ ಮಾಡುವಾಗ ಮೊದಲಿಗೆ ನಿಮಗೆ ಆಗುವ ಸೈಜ್ ಆಯ್ಕೆ ಮಾಡಬೇಕು. ತುಂಬಾ ದೊಡ್ಡ ಸೈಜ್ ಅಥವಾ ಚಿಕ್ಕ ಸೈಜ್ ಆಯ್ಕೆ ಮಾಡಬೇಡಿ.
* ಬ್ರಾ ಕೆಳಗಡೆ ಒಂದು ಪಟ್ಟಿ ರೀತಿ ಇದ್ದರೆ ಒಳ್ಳೆಯದು.
* ಕಪ್ ಕಂಫರ್ಟ್ ಆಗಿರಲಿ. ದಪ್ಪ ಇರುವವರು ಚಿಕ್ಕ ಕಪ್‌ನ ಬ್ರಾಗಿಂತ ದೊಡ್ಡ ಕಪ್‌ನ ಬ್ರಾ ಬಳಸುವುದು ಒಳ್ಳೆಯದು.



Click it and Unblock the Notifications
