Latest Updates
-
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು!
ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್: ಬ್ಯೂಟಿ ಪಾರ್ಲರ್‌ನಲ್ಲಿ ಹೇರ್ ಸ್ಪಾ ಮಾಡಿಸಿದರೆ ಸ್ಟ್ರೋಕ್ ಬರುವುದೇ?
ನೀವು ಬ್ಯೂಟಿ ಪಾರ್ಲರ್‌ಗೆ ಹೋಗಿ ಹೇರ್ ಸ್ಪಾ ಮಾಡಿಸುತ್ತಿದ್ದೀರಾ, ಹಾಗಾದರೆ ಈ ಆರ್ಟಿಕಲ್ ನಿಮಗಾಗಿ....
ತೆಲಂಗಾಣದ ಮಹಿಳೆಯೊಬ್ಬರು ಹೇರ್‌ಸ್ಪಾ ಮಾಡಿಸಿದ ಮೇಲೆ ಸಾವನ್ನಪ್ಪಿರುವ ಘಟನೆ ಬ್ಯೂಟಿ ಪಾರ್ಲರ್‌ಗಳಲ್ಲಿ ಹೇರ್ ಸ್ಪಾ ಮಾಡಿಸುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿದೆ.
ವೈದ್ಯರು ಹೇಳುವ ಪ್ರಕಾರ ಆ ಮಹಿಳೆಗೆ ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್ ಆಗಿತ್ತು, ಈ ಕಾರಣದಿಂದಾಗಿ ಸಾವನ್ನಪ್ಪಿದಳು ಎಂದು ಹೇಳಿದ್ದಾರೆ. ಏನಿದು ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್? ಈ ರೀತಿ ಸ್ಟ್ರೋಕ್ ಉಂಟಾಗಲು ಕಾರಣವೇನು? ನೀವು ಬ್ಯೂಟಿ ಪಾರ್ಲರ್‌ನಲ್ಲಿ ಹೇರ್ ಸ್ಪಾ ಮಾಡಿಸುವುದಾದರೆ ಯಾವ ರೀತಿಯ ಮುನ್ನೆಚ್ಚರಿಕೆವಹಿಸಬೇಕು ಎಂದು ನೋಡೋಣ ಬನ್ನಿ:

ತೆಲಂಗಾಣದ ಮಹಿಳೆ ಬಗ್ಗೆ ಅಲ್ಲಿಯ ವೈದ್ಯರು ಹೇಳಿರುವುದೇನು?
ಹೈದರಾಬಾದ್‌ನ ಅಪೊಲೊ ಆಸ್ಪತ್ರೆಯ ವೈದ್ಯರಾಗಿರುವ ಡಾ. ಸುಧೀರ್ ಕುಮಾರ್ ಟ್ವಿಟರ್‌ನಲ್ಲೂ ಈ ಬಗ್ಗೆ ಬರೆದು ಜನರನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ.
ಆ ಮಹಿಳೆ ವೈದ್ಯರ ಬಳಿ ಬರುವಾಗ ತಲೆಸುತ್ತು, ವಾಂತಿ ಈ ಬಗೆಯ ಲಕ್ಷಣಗಳಿದ್ದೆವಯ, ಆಕೆಗೆ ಬ್ಯೂಟಿ ಪಾರ್ಲರ್‌ನಲ್ಲಿ ಶ್ಯಾಂಪೂ ಹಚ್ಚಿ ತಲೆ ತೊಳೆದ ಬಳಿಕ ಆ ರೀತಿಯಾಗಿತ್ತು. ಮೊದಲಿಗೆ ಆಕೆಯನ್ನು
ಗ್ಯಾಸ್ಟ್ರೋಎಂಟರಾಲಜಿಸ್ಟ್ (gastroenterologist) ತೋರಿಸಲಾಯಿತು. ಆದರೆ ಚಿಕಿತ್ಸೆ ಬಳಿಕ ಆಕೆಯಲ್ಲಿ ಯಾವುದೇ ಚೇತರಿಕೆ ಕಂಡ ಬರಲಿಲ್ಲ, ಮಾರನೇಯ ದಿನ ಆ ಮಹಿಳೆಗೆ ನಡೆಯಲು ಕಷ್ಟವಾಯ್ತು, ಆಗ MRI ಮಾಡಿಸಿದಾಗ ಆಕೆಯ ಕುತ್ತಿಗೆಯ ಬಲಭಾಗದಲ್ಲಿ ರಕ್ತನಾಳಗಳಿಗೆ ಪೆಟ್ಟಾಗಿತ್ತು, ಕೂದಲು ತೊಳೆಯುವಾಗ ಸಿಂಕ್‌ಗೆ ಒತ್ತಿ ಕೂತಾಗ ನರಗಳಿಗೆ ಪೆಟ್ಟಾಗಿ ಈ ರೀತಿಯಾಗಿತ್ತು. ಆಗ ವೈದ್ಯರಿಗೆ ಆಕೆಗೆ ಬ್ಯೂಟಿ ಪಾರ್ಲರ್ ಸ್ಟ್ರೋಕ್ ಆಗಿರುವುದು ತಿಳಿದು ಬಂತು.

ಬ್ಯೂಟಿ ಪಾರ್ಲರ್ ಸ್ಟ್ರೋಕ್ ಎಂದರೇನು?
ಮೊದಲಿಗೆ 1993ರಲ್ಲಿ ಈ ಸಮಸ್ಯೆ ತಿಳಿದು ಬಂತು, ಒಬ್ಬರು ಮಹಿಳೆಯರು ಪಾರ್ಲರ್‌ನಲ್ಲಿ ಹೇರ್ ಸ್ಪಾ ತೆಗೆದುಕೊಂಡ ಬಳಿಕ ಅವರಲ್ಲಿ ಸಮಸ್ಯೆ ಕಂಡು ಬಂದಿದ್ದಾಗಿ ದಿ ಜರ್ನಲ್ ಆಫ್ ಅಮೆರಿಕನ್ ಮೆಡಿಕಲ್ ಅಸೋಷಿಯೇಷನ್( The Journal of American Medical Association) ಹೇಳಿದೆ.

ಬ್ಯೂಟಿ ಪಾರ್ಲರ್ ಸ್ಟ್ರೋಕ್ ಲಕ್ಷಣಗಳೇನು?
ಹೇರ್ ಸ್ಪಾ ಮಾಡಿಸಿದ ಬಳಿಕ ನಮ್ಮ ಮೆದುಳಿಗೆ ಸರಿಯಾದ ಆಮ್ಲಜನಕ ಪೂರೈಕೆಯಾಗದೇ ಇರುವ ಸ್ಥಿತಿಯಾಗಿದೆ. ಸಿಂಕ್‌ನಲ್ಲಿ ತಲೆಯನ್ನು ಒತ್ತಿ ಹಿಡಿದು ಕೂದಲನ್ನು ತೊಳೆದಾಗ ಕುತ್ತಿಗೆಯ ಭಾಗದ ನರಗಳಿಗೆ ಪೆಟ್ಟಾಗಿ ಈ ರೀತಿ ಸಂಭವಿಸಬಹುದು.

ಪಾರ್ಲರ್‌ನಲ್ಲಿ ಹೇರ್ ಸ್ಪಾ ಸುರಕ್ಷಿತವೇ?
* ನೀವು ಪಾರ್ಲರ್‌ಗೆ ಹೋಗಿ ಹೇರ್ ಸ್ಪಾ ಮಾಡುವುದಕ್ಕೆ ಹೆದರಬೇಕಾಗಿಲ್ಲ.
* ಆದರೆ ಗಂಟೆಗಟ್ಟಲೆ ಕುತ್ತಿಗೆಯನ್ನು ಸಿಂಕ್‌ಗೆ ತಾಗಿಕೊಂಡು ಕೂರುವುದು ಸರಿಯಲ್ಲ. ಸಿಂಕ್ ದಪ್ಪದ ಟವಲ್ ಹಾಕಿ ನಂತರ ಕುತ್ತಿಗೆಯನ್ನು ವಾಲಬಹುದು.
* ಹೇರ್ ಸ್ಪಾ 30-35 ನಿಮಿಷ ಮಾಡಲಾಗುವುದು, ಕೆಲವು ಕಡೆ ಒಂದು ಗಂಟೆ ಕೂಡ ಮಾಡುತ್ತಾರೆ.
*ಸಾಮಾನ್ಯವಾಗಿ ಹೇರ್ ಅರ್ಧ ಗಂಟೆಯೊಳಗೆ ಮುಗಿಸಿ, ಅಲ್ಲದೆ ಕುತ್ತಿಗೆಯ ಭಾಗಕ್ಕೆ ಯಾವುದೇ ಒತ್ತಡ, ನೋವು ಉಂಟಾಗದಂತೆ ಎಚ್ಚರವಹಿಸಬೇಕು.
* ಹೇರ್ ಸ್ಪಾ ಮಾಡಿ ಸಿಂಕ್‌ನಿಂದ ತಲೆ ಎತ್ತುವಾಗ ಕೂಡ ಬ್ಯೂಟಿ ಎಕ್ಸ್‌ಪರ್ಟ್ ಸಪೋರ್ಟ್ ಕೊಟ್ಟು ಎತ್ತಬೇಕು.

ಯಾರ ಕೈಯಿಂದ ಹೇರ್ ಸ್ಪಾ ಮಾಡಿಸಬೇಕು?
* ಯಾವಾಗಲೂ ಪರಿಣಿತರ ಬಳಿ ಮಾಡಿಸಿ
* ಕೆಲಸ ಕಲಿಯುತ್ತಿರುವವರ ಬಳಿ ಮಾಡಿಸಬೇಡಿ.
* ಹೇರ್ ಸ್ಪಾ ಮಾಡುವಾಗ ಉಗುರು ಬೆಚ್ಚಗಿನ ನೀರಿನಿಂದಷ್ಟೇ ತಲೆತೊಳೆಯಬೇಕು.
* ತಲೆಗೆ ತುಂಬಾ ಮಸಾಜ್ ಮಾಡುವುದು, ಕುತ್ತಿಗೆಯನ್ನು ಅತ್ತಿತ್ತ ತಿರುಗಿಸಿ ಮಸಾಜ್ ಮಾಡುವುದು ಇವೆಲ್ಲಾ ತಡೆಗಟ್ಟಬೇಕು.

ಯಾರಿಗೆ ಬ್ಯೂಟಿ ಪಾರ್ಲರ್ ಸ್ಟ್ರೋಕ್ ಅಪಾಯ ಅಧಿಕ?
* ಮಧುಮೇಹ, ಹೈಪರ್‌ಟೆನ್ಷನ್ (ಅಧಿಕ ರಕ್ತದೊತ್ತಡ), peripheral vascular disease, ಈ ಮೊದಲು ಸ್ಟ್ರೋಕ್ ಆಗಿದ್ದರೆ, ಹೃದಯ ಅಥವಾ ಮೆದುಳಿಗೆ ಸಂಬಂಧಿಸಿದ ಸಮಸ್ಯೆ ಇರುವವರು ತುಂಬಾನೇ ಎಚ್ಚರಿಕೆವಹಿಸಬೇಕು.
* ಇನ್ನು ತುಂಬಾ ಸ್ಮೋಕ್ ಮಾಡುವವರಿಗೂ ಈ ಅಪಾಯ ಹೆಚ್ಚು.
ಆದ್ದರಿಂದ ಇನ್ಮುಂದೆ ಹೇರ್ ಸ್ಪಾ ಮಾಡಿಸಲು ಪಾರ್ಲರ್‌ಗೆ ಹೋದಾಗ ನಿಮ್ಮ ಕುತ್ತಿಗೆಗೆ ಪೆಟ್ಟಾಗದಂಥ ವ್ಯವಸ್ಥೆ ಇದೆಯೇ ನೋಡಿ, ಅಲ್ಲದೆ ತುಂಬಾ ಒತ್ತಿ ಮಸಾಜ್ ಮಾಡಲು ಬಿಡಬೇಡಿ.



Click it and Unblock the Notifications
