Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ತೇಪೆ ರೀತಿಯಲ್ಲಿ ಗಡ್ಡ ಬೋಳು ಆಗುತ್ತಿದ್ಯಾ? ಇದಕ್ಕೆ ಕಾರಣವೇನು? ಪರಿಹಾರವೇನು? ಇಲ್ಲಿದೆ ಈ ಬಗ್ಗೆ ಮಾಹಿತಿ
ನಾವು ಹಲವರಲ್ಲಿ ಗಮನಿಸಿರಬಹುದು ಗಡ್ಡ ಚೆನ್ನಾಗೇ ಏನೋ ಇರುತ್ತೆ ಆದರೆ ಕೆಲವು ಕಡೆ ಬೋಳು ಆಗಿರುತ್ತದೆ. ತೇಪೆ ರೀತಿಯಲ್ಲಿ ಗಡ್ಡ ಒಂದೊಂದು ಕಡೆ ಹೋಗಿರುತ್ತದೆ. ಗಡ್ಡ ಹೋಗಿ ಚರ್ಮ ಕಾಣಿಸುತ್ತಿರುತ್ತದೆ. ಹಾಗಾದರೆ ಇದು ಯಾವ ಸಮಸ್ಯೆ? ಇದಕ್ಕೆ ಕಾರಣವೇನು? ಇದಕ್ಕೆ ಪರಿಹಾರವೇನು ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

1. ಅಲೋಪೆಸಿಯಾ!
ಅಲೋಪೆಸಿಯಾ ಅರೆಟಾ ಎಂಬುದು ಸ್ವಯಂ ನಿರೋಧಕ ಸ್ಥಿತಿಯಾಗಿದ್ದು ಅದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಅಂದರೆ ಈ ಸ್ಥಿತಿಯಲ್ಲಿ ಕೂದಲು ಉದುರುತ್ತಾ ಬೊಕ್ಕವಾಗಿ ಬಿಡುವುದುಂಟು. ಇದೊಂದು ಸಂಕ್ರಾಮಿಕ ರೋಗವಲ್ಲ, ಮಕ್ಕಳಾಗಿದ್ದಾಗ ಅನೇಕರಿಗೆ ಈ ರೋಗ ಅಂಟುವುದುಂಟು. ದೇಹದ ನೈಸರ್ಗಿಕ ರಕ್ಷಣೆ, ಪ್ರತಿರಕ್ಷಣಾ ವ್ಯವಸ್ಥೆಯು ಕೂದಲು ಕಿರುಚೀಲಗಳ ಮೇಲೆ ದಾಳಿ ಮಾಡುವ ಕಾರಣದಿಂದ ಕೂದಲು ಉದುರಲು ಆರಂಭವಾಗುತ್ತದೆ. ಇದು ನೆತ್ತಿಯ ಅಥವಾ ತಲೆಯ ಮೇಲೆ ದುಂಡಗಿನ ಅಥವಾ ಅಂಡಾಕಾರದ ಬೋಳು ತೇಪೆಗಳನ್ನು ಉಂಟುಮಾಡುತ್ತದೆ. ತಲೆ ಮಾತ್ರವಲ್ಲದೇ ಕೂದಲು ಇರುವ ದೇಹದ ಯಾವುದೇ ಭಾಗದ ಮೇಲೆ ಇದು ಪರಿಣಾಮ ಬೀರಬಹುದು. ಇದು ಗಡ್ಡದ ಮೇಲೆ ಪರಿಣಾಮ ಬೀರಿದಾಗ, ವೈದ್ಯರು ಅದನ್ನು ಅಲೋಪೆಸಿಯಾ ಬಾರ್ಬೆ ಎಂದು ಕರೆಯುತ್ತಾರೆ. ಇದು 100ರಲ್ಲಿ ಇಬ್ಬರಿಗೆ ಮಾತ್ರ ಈ ಸಮಸ್ಯೆ ಕಾಡಬಹುದು ಎಂದು ಪರಿಣಿತರು ಹೇಳುತ್ತಾರೆ.
ಇದರ ಲಕ್ಷಣವೇನು?
ಇದ್ದಕ್ಕಿದ್ದಂತೆ ತಲೆ ಅಥವಾ ಗಡ್ಡದ ಭಾಗದಲ್ಲಿ ಬೋಳು ತೇಪೆಗಳು ಉಂಟಾಗುವುದು ಇದರ ಮೊದಲ ಲಕ್ಷಣವಾಗಿದೆ. ಕೆಲವರಿಗೆ ಇದು ಸಣ್ಣ ಗಾತ್ರದಲ್ಲಿ ಉಂಟಾಗಬಹುದು. ಕೆಲವರಿಗೆ ದೊಡ್ಡ ಗಾತ್ರದಲ್ಲಿ ಉಂಟಾಗಬಹುದು. ಕೆಲವರಿಗೆ ಚರ್ಮರ ರೋಗಲಕ್ಷಣಗಳು ಕಾಣಿಸಿಕೊಂಡು ಬಳಿಕ ಈ ರೀತಿಯ ಬಾಲ್ಡ್ ಪ್ಯಾಚಸ್ ಕಾಣಿಸಿಕೊಳ್ಳಬಹುದು.
ಇದನ್ನು ಗುಣಪಡಿಸುವುದು ಹೇಗೆ?
ನಿಮಗೆ ಕೂದಲಿನಲ್ಲಿ ಈ ರೀತಿ ಬೋಳು ಉಂಟಾದರೆ ಕೂಡಲೇ ಕೂದಲು ಸಂಬಂಧಿತ ಅಥವಾ ಚರ್ಮರೋಗ ತಜ್ಞರು ಭೇಟಿ ಮಾಡುವುದು ಒಳ್ಳೆಯದು. ಅವರು ನಿಮ್ಮನ್ನು ಸರಿಯಾಗಿ ಪರೀಕ್ಷಿಸಿ ಕೂದಲು ಈ ರೀತಿ ಆಗುವುದಕ್ಕೆ ಕಾರಣವೇನು ಎಂಬುವುದನ್ನು ಕಂಡುಹುಡುಕಬಹುದು. ಅಥವಾ ಕೂದಲಿನ ಸ್ಯಾಂಪಲ್ ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ನಡೆಸಿ ಕಾರಣ ತಿಳಿದುಕೊಳ್ಳಬಹುದು. ಈ ಮೂಲಕ ಇದಕ್ಕೆ ಬೇಕಾದ ಚಿಕಿತ್ಸೆ ನಡೆಸಬಹುದು. ಅಲ್ಲದೇ ಚರ್ಮ ಪರೀಕ್ಷೆ, ರಕ್ತ ಪರೀಕ್ಷೆ ಕೂಡ ನಡೆಸಬಹುದಾಗಿದೆ. ಮೊದಲು ಪರೀಕ್ಷೆ ನಡೆಸಿ ಇದಕ್ಕೆ ಚಿಕಿತ್ಸೆ ಪಡೆಯಬಹುದಾಗಿದೆ.

2. ರಿಂಗ್ವರ್ಮ್
ಮನುಷ್ಯನಿಗೆ ಶಿಲೀಂಧ್ರಗಳಿಂದ ರಿಂಗ್ವರ್ಮ್ ಉಂಟಾಗುತ್ತದೆ. ಇದು ದೇಹದ ಯಾವುದೇ ಭಾಗದ ಮೇಲೆ ಪರಿಣಾಮ ಬೀರಬಹುದು. ಇದು ಗಡ್ಡದ ಮೇಲೆ ಪರಿಣಾಮ ಬೀರಿದಾಗ, ಇದನ್ನು ಟಿನಿಯಾ ಬಾರ್ಬೆ ಎಂದು ಕರೆಯಲಾಗುತ್ತದೆ. ಅಂದರೆ ಶಿಲೀಂದ್ರಗಳಿಂದ ಗಡ್ಡವು ಇಲಿ ತಿಂದ ಅರ್ಧ ಅರ್ಧ ಗಡ್ಡದಂತೆ ಇರುತ್ತದೆ. ಶಿಲೀಂಧ್ರ ನಿಮ್ಮ ದೇಹವನ್ನು ಸೇರಿದೆ ಎಂದಾದರೆ ಇದು 4-14 ದಿನಗಳಲ್ಲಿ ರೋಗಲಕ್ಷಣಗಳು ಕಾಣಿಸಲು ಆರಂಭವಾಗುತ್ತದೆ. ಅಂದರೆ ತಲೆಯಲ್ಲಿ ಪ್ಯಾಚ್ ರೀತಿಯಲ್ಲಿ ಬೋಳು ಅಥವಾ ಗಡ್ಡದಲ್ಲಿ ಪ್ಯಾಚ್ ರೀತಿಯಲ್ಲಿ ಬೋಳು ಉಂಟಾಗುತ್ತದೆ. ಇನ್ನು ನಿಮಗೆ ರಿಂಗ್ವರ್ಮ್ ಉಂಟಾಗಿದೆ ಎಂದಾದ್ರೆ ನೀವು ನಿಮ್ಮ ಸೋಪು, ಬಟ್ಟೆಯನ್ನು ಬೇರೆಯವರಿಗೆ ನೀಡಬೇಡಿ. ಯಾಕೆಂದರೆ ಇದು ನಿಮ್ಮಿಂದ ಬೇರೆಯವರಿಗೆ ಹರಡುತ್ತದೆ. ಅಲ್ಲದೇ ಇದು ಕೇವಲ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ರಿಂಗ್ವರ್ಮ್ ಉಂಟಾಗುತ್ತದೆ. ಪ್ರಾಣಿಗಳಿಂದ ಮನುಷ್ಯರಿಗೆ ರಿಂಗ್ವರ್ಮ್ ಹರಡುತ್ತದೆ. ಇನ್ನು ರಿಂಗ್ವರ್ಮ್ ಉಂಟಾಗಲು ಮುಖ್ಯ ಕಾರಣ ವಾತಾವರಣದ ವೈಪರಿತ್ಯ. ಇನ್ನು ಮುಚ್ಚಿದ ಕೊಠಡಿ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಸ್ನಾನ ಮಾಡುವುದರಿಂದ ರಿಂಗ್ವರ್ಮ್ ಸಂಭವಿಸುತ್ತದೆ.
ಇದರ ಲಕ್ಷಣವೇನು?
ರಿಂಗ್ವರ್ಮ್ ಉಂಟಾದ ಮನುಷ್ಯನ ಗಡ್ಡ ಅಥವಾ ತಲೆ ಉಂಗುರಗಳಂತೆ ಕಾಣುವ ವೃತ್ತಾಕಾರದ ದದ್ದು ಅಥವಾ ರ್ಯಾಷ್ ಉಂಟಾಗುತ್ತದೆ. ಅಲ್ಲದೇ ಚರ್ಮದಲ್ಲಿ ತುರಿಕೆ ಉಂಟಾಗುತ್ತದೆ. ಅಥವಾ ಚರ್ಮ ಕೆಂಪಗಾಗುವುದು, ಚರ್ಮದಲ್ಲಿ ಬಿರುಕು ಉಂಟಾಗುವುದು. ಕೂದಲು ಉದುರುವುದು. ಇದು ಇವುಗಳ ರೋಗ ಲಕ್ಷಣಗಳಾಗಿವೆ.
ಇದನ್ನು ಗುಣಪಡಿಸುವುದು ಹೇಗೆ?
ನಿಮಗೆ ರಿಂಗ್ವರ್ಮ್ ಸಂಭವಿಸಿದರೆ ನೀವು ನುರಿತ ಚರ್ಮ ವೈದ್ಯರನ್ನು ಭೇಟಿ ಮಾಡಿದರೆ ಅದಕ್ಕೆ ಬೇಕಾದ ಆಯಿನ್ ಮೆಂಟ್ ಅಥವಾ ಮಾತ್ರೆಗಳನ್ನು ಅವರು ನೀಡುತ್ತಾರೆ. ಈ ಮೂಲಕ ಈ ರೋಗವನ್ನು ತಡೆಗಟ್ಟಬಹುದು. ಅಥವಾ ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲು ಪ್ರಯೋಗಾಲಯಕ್ಕೆ ಕಳುಹಿಸಿಕೊಡಬಹುದು.

3. ಕಿಮೋಥೆರಪಿ
ಕೀಮೋಥೆರಪಿ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಚಿಕಿತ್ಸೆಗಳಲ್ಲಿ ಒಂದಾಗಿದೆ. ಈ ಚಿಕಿತ್ಸೆಯನ್ನು ನಿರಂತರವಾಗಿ ತೆಗೆದುಕೊಂಡರೆ ಅದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಇದನ್ನು ವೈದ್ಯರು ಕಿಮೋಥೆರಪಿ-ಪ್ರೇರಿತ ಅಲೋಪೆಸಿಯಾ ಎಂದು ಕರೆಯುತ್ತಾರೆ. ಇದು ನೆತ್ತಿ, ಹುಬ್ಬು, ರೆಪ್ಪೆಗೂದಲು ಮತ್ತು ಗಡ್ಡ ಸೇರಿದಂತೆ ದೇಹದ ಯಾವುದೇ ಭಾಗದ ಮೇಲೆ ಪರಿಣಾಮ ಬೀರಬಹುದು. ಅಂದರೆ ಕೂದಲು ಈ ಭಾಗಗಳಲ್ಲಿ ಉದುರಲು ಆರಂಭವಾಗುತ್ತದೆ.
ಇದರ ಲಕ್ಷಣವೇನು?
ಇದಕ್ಕೆ ಇದೇ ರೀತಿಯ ಲಕ್ಷಣ ಇದೆ ಎಂದು ಹೇಳಲು ಬರುವುದಿಲ್ಲ. ಯಾಕೆಂದರೆ ಕೆಲವರಿಗೆ ಕಿಮೋಥೆರಪಿಯಿಂದ ಕೂದಲು ಉದುರದೆ ಇರಬಹುದು. ಇನ್ನು ಕೆಲವರಿಗೆ ಉದುರಬಹುದು. ಆದರೆ ಯಾವುದೇ ನೋವಿಲ್ಲದೆ ಕೂದಲು ಉದುರಲು ಆರಂಭವಾಗುತ್ತದೆ. ಆದರೆ ಅನೇಕರಿಗೆ ಕೂದಲು ಉದುರುತ್ತದೆ. ಅನೇಕ ಕ್ಯಾನ್ಸರ್ ಪೀಡಿತ ಮಹಿಳೆಯರು ತಮ್ಮ ತಲೆಯನ್ನು ಸಂಪೂರ್ಣವಾಗಿ ಬೋಳು ಮಾಡುವುದು ಇದೇ ಕಾರಣಕ್ಕೆ.
ಇದನ್ನು ಗುಣಪಡಿಸುವುದು ಹೇಗೆ?
ಕೆಲವು ಜನರು ಕಿಮೋಥೆರಪಿ ಚಿಕಿತ್ಸೆಯನ್ನು ಪ್ರಾರಂಭಿಸುವ ಮೊದಲು ತಮ್ಮ ಗಡ್ಡವನ್ನು ಬೋಳಿಸಲು ನಿರ್ಧರಿಸುತ್ತಾರೆ. ಇದು ಮಾನಸಿಕವಾಗಿ ರೋಗಿಗೆ ಶಕ್ತಿ ನೀಡುತ್ತದೆ. ಆತನ ಕೂದಲು ಉದುರುತ್ತಿದ್ದಾರೆ ಇದು ಇನ್ನಷ್ಟು ಆತನನ್ನು ಘಾಸಿಗೊಳಿಸಬಹುದು.

4. ಗಡ್ಡದ ಕೂದಲು ಉದುರುವುದನ್ನು ತಡೆಯಲು ಮನೆಮದ್ದು
ಗಡ್ಡದ ಕೂದಲು ಉದುರುವುದನ್ನು ತಡೆಯಲು ಕೆಲವೊಂದು ಮನೆ ಮದ್ದು ಇದೆ. ಇವುಗಳನ್ನು ಪಾಲಿಸಿದರೆ ಕೂದಲು ಉದುರುವುದನ್ನು ತಡೆಯಬಹುದಾಗಿದೆ. ಇವುಗಳನ್ನು ಮನೆಯಲ್ಲಿ ಟ್ರೈ ಮಾಡಿ.
ಬೆಳ್ಳುಳ್ಳಿ ಜ್ಯೂಸ್
ಈರುಳ್ಳಿ ಜ್ಯೂಸ್
ಕೂಲ್ ಡ್ ಗ್ರೀನ್ ಟೀ
ಅಲೋವೆರಾ ಕ್ಯಾಸ್ಟರ್
ತೆಂಗಿನಕಾಯಿ, ಅಥವಾ ಬಾದಾಮಿ ಎಣ್ಣೆ
ಲ್ಯಾವೆಂಡರ್ರೋಸ್ಮರಿ, ಅಥವಾ ಜೆರೇನಿಯಂ ಎಣ್ಣೆ
ಮೀನು ಎಣ್ಣೆ



Click it and Unblock the Notifications











