Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಒಂದೇ ವಾರದಲ್ಲಿ ಕಾಲ್ಬೆರಳ ಉಗುರುಗಳಲ್ಲಿ ಕಾಣಿಸುವ ಶಿಲೀಂಧ್ರ ಸಮಸ್ಯೆ ಗುಣಪಡಿಸುವ ಮನೆಮದ್ದುಗಳು
ಕಾಲಿನ ಉಗುರುಗಳಲ್ಲಿ ಕಾಣಿಸಿಕೊಳ್ಳುವ ದೊಡ್ಡ ಸಮಸ್ಯೆ ಎಂದರೆ ಅದು ಶಿಲೀಂಧ್ರ ದಾಳಿ. ಇದು ತೀವ್ರ ನೋವುಂಟು ಮಾಡುವುದು ಮತ್ತು ಕೆಲವೊಂದು ಸಂದರ್ಭದಲ್ಲಿ ನಡೆದಾಡಲು ಕಷ್ಟವಾಗುವುದು. ಇದನ್ನು ಸಾಮಾನ್ಯವಾಗಿ ಕಾಲ್ಬೆರಳಿನ ಶಿಲೀಂಧ್ರ ಅಥವಾ ಒನಿಕೊಮೈಕೋಸಿಸ್ ಎಂದು ಕರೆಯಲಾಗುತ್ತದೆ. ಇದು ದೇಹದ ಬೇರೆ ಭಾಗಗಳಿಗೆ ಕೂಡ ಹರಡುವಂತಹ ಸಾಧ್ಯತೆಯು ಇದೆ. ಈ ಶಿಲಿಂಧ್ರ ಸಮಸ್ಯೆಯು ಕಾಣಿಸಿಕೊಂಡ ತಕ್ಷಣವೇ ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಮುಂದೆ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಕಾಲ್ಬೆರಳಿನ ಸೋಂಕಿನ ಪ್ರಮುಖ ಲಕ್ಷಣಗಳು ಎಂದರೆ ಬಿಳಿ, ಕಂದು ಅಥವಾ ಹಳದಿ ಬಣ್ಣಕ್ಕೆ ಕಾಲ್ಬೆರಳು ತಿರುಗುವುದು. ಇದು ಹರಡಿಕೊಂಡು ಉಗುರುಗಳು ದಪ್ಪಗಾಗಿ ಒಡೆದುಹೋಗುವಂತೆ ಮಾಡಬಹುದು.

ಸಾಮಾನ್ಯವಾಗಿ ಈ ಸಮಸ್ಯೆಗೆ ಟರ್ಬಿನಫೈನ್ ಅಥವಾ ಫ್ಲುಕೊನಜೋಲ್ ಚಿಕಿತ್ಸೆ ಮಾಡಲಾಗುತ್ತದೆ. ಆದರೆ ಈ ಚಿಕಿತ್ಸೆಯಿಂದ ಕೆಲವೊಂದು ಅಡ್ಡ ಪರಿಣಾಮಗಳಾಗಿರುವಂತಹ ಹೊಟ್ಟೆ ತಳಮಳ, ನಿಶ್ಯಕ್ತಿ ಮತ್ತು ಕಾಮಾಲೆ ರೋಗವು ಬರಬಹುದು. ಇದರಿಂದಾಗಿ ಹೆಚ್ಚಿನವರು ಈ ಸಮಸ್ಯೆ ನಿವಾರಣೆ ಮಾಡಲು ಮನೆಮದ್ದುಗಳನ್ನು ಬಳಸಿಕೊಳ್ಳುವರು. ನಿಮಗೆ ಕಾಲ್ಬೆರಳಿನಲ್ಲಿ ಇಂತಹ ಸಮಸ್ಯೆಯಿದ್ದರೆ ಆಗ ನೀವು ಮನೆಮದ್ದನ್ನು ಬಳಸಿಕೊಳ್ಳುವುದು ಹೇಗೆ ಎಂದು ತಿಳಿಯಿರಿ.

ಅಡುಗೆ ಸೋಡಾ
ಕಾಲ್ಬೆರಳಿನಲ್ಲಿ ಶಿಲೀಂಧ್ರವನ್ನು ಉಂಟು ಮಾಡುವಂತಹ ಮೊಶ್ಚಿರೈಸ್ ನ್ನು ಅಡುಗೆ ಸೋಡಾವು ಹೀರಿಕೊಳ್ಳುವುದು ಎಂದು ಅಧ್ಯಯನಗಳು ಹೇಳಿವೆ. ಅಡುಗೆ ಸೋಡಾವು ಶೇ. 79ರಷ್ಟು ಶಿಲೀಂಧ್ರ ಬೆಳವಣಿಗೆಯನ್ನು ತಡೆಯುವುದು.
ಇದನ್ನು ಬಳಸುವುದು ಹೇಗೆ?
ಸಾಕ್ಸ್ ಅಥವಾ ಶೂ ಹಾಕಿಕೊಳ್ಳುವ ಮೊದಲು ಅಡುಗೆ ಸೋಡಾವನ್ನು ಅದರೊಳಗೆ ಹಾಕಿಕೊಳ್ಳಬೇಕು. ಬಾಧಿತ ಕಾಲ್ಬೆರಳಿನ ಉಗುರಿನ ಭಾಗಗಳಿಗೆ ನೀವು ಅಡುಗೆ ಸೋಡಾದ ಪೇಸ್ಟ್ ನ್ನು ಹಚ್ಚಿಕೊಳ್ಳಬಹುದು. ಇದು ಕೆಲವು ಸಮಯ ಹಾಗೆ ಇರಲಿ. ಬಳಿಕ ತೊಳೆಯಿರಿ.

ವಿನೇಗರ್
ವಿನೇಗರ್ ಎನ್ನುವುದು ಹೆಚ್ಚಾಗಿ ಪ್ರತಿಯೊಂದು ಮನೆಯಲ್ಲಿ ಕಾಣಸಿಗುವಂತಹ ಸಾಮಗ್ರಿಯಾಗಿದೆ. ಇದನ್ನು ಅಡುಗೆ ಹಾಗೂ ಸ್ವಚ್ಛಗೊಳಿಸುವ ಉದ್ದೇಶದಿಂದ ಬಳಸಿಕೊಳ್ಳಲಾಗುತ್ತದೆ. ಕಾಲ್ಬೆರಳಿನ ಉಗುರುಗಳ ಶಿಲೀಂಧ್ರ ನಿವಾರಣೆ ಮಾಡಲು ಇದು ಅದ್ಭುತವಾಗಿರುವ ಉತ್ಪನ್ನವಾಗಿದೆ.
ಬಳಸುವುದು ಹೇಗೆ?
ಒಂದು ಭಾಗದಷ್ಟು ವಿನೇಗರ್ ಗೆ ಇದರ ಎರಡು ಭಾಗದಷ್ಟು ಬಿಸಿ ನೀರನ್ನು ಹಾಖಿಕೊಂಡು ಅದರಲ್ಲಿ ಕಾಲುಗಳನ್ನು ಅದ್ದಿಕೊಂಡು ಇಡಿ. ಸುಮಾರು 20 ನಿಮಿಷ ಕಾಲ ಹಾಗೆ ಬಿಡಿ. ಪ್ರತಿನಿತ್ಯ ಈ ವಿಧಾನವನ್ನು ನೀವು ಪುನರಾವರ್ತಿಸಿ.

ಮೌತ್ ವಾಶ್
ಮೌತ್ ವಾಶ್ ನಲ್ಲಿ ಕೆಲವು ಪ್ರಮುಖ ಅಂಶವಾಗಿರುವಂತಹ ಪುದೀನಾ, ಥೈಮಾಲ್, ಮತ್ತು ಯೂಕಲಿಪ್ಟಸ್ ಇರುವುದು. ಇವುಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳು ಇವೆ. ಪ್ರತಿಯೊಂದು ಮನೆಯ ಶೌಚಾಲಯದಲ್ಲಿ ಈ ಉತ್ಪನ್ನವು ನಿಮಗೆ ಕಂಡುಬರುವುದು.
ಬಳಸುವುದು ಹೇಗೆ?
ಒಂದು ಪಿಂಗಾಣಿ ಮೌತ್ ವಾಶ್ ನಲ್ಲಿ ಕಾಲ್ಬೆರಳುಗಳನ್ನು ಅದ್ದಿಡಿ. ಕೆಲವು ನಿಮಿಷ ಕಾಲ ಹಾಗೆ ಇರಲಿ. ಇದರ ಬಳಿಕ ತೊಳೆಯಿರಿ.

ಬೆಳ್ಳುಳ್ಳಿ
ಬೆಳ್ಳುಳ್ಳಿಯು ನಿಮ್ಮ ಅಡುಗೆಗೆ ರುಚಿ ನೀಡುವುದು ಮಾತ್ರವಲ್ಲದೆ, ಇದರಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಕೂಡ ಇದೆ. 2009ರಲ್ಲಿ ನಡೆಸಿರುವಂತಹ ಅಧ್ಯಯನವೊಂದು ಕಂಡು ಕೊಂಡಿರುವ ವಿಚಾರದ ಪ್ರಕಾರ ಬೆಳ್ಳುಳ್ಳಿಯಲ್ಲಿ ಶಿಲೀಂಧ್ರ ಮತ್ತು ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ.
ಬಳಸುವುದು ಹೇಗೆ
ತುಂಡು ಮಾಡಿರುವಂತಹ ಅಥವಾ ಜಜ್ಜಿಕೊಂಡಿರುವಂತಹ ಬೆಳ್ಳುಳ್ಳಿಯನ್ನು ನೀವು ಬಾಧಿತ ಜಾಗಕ್ಕೆ ಇಟ್ಟುಬಿಡಿ. ಪ್ರತಿನಿತ್ಯ 30 ನಿಮಿಷ ಕಾಲ ಹೀಗೆ ಮಾಡಿ.

ಓಝೊನೈಸಡ್ ತೈಲಗಳು
ಓಝೊನೈಸಡ್ ತೈಲಗಳು ಓಝೊನ್ ಗ್ಯಾಸ್ ನ ಮಿಶ್ರಣವನ್ನು ಒಳಗೊಂಡಿದೆ. ಆಲಿವ್ ತೈಲ ಮತ್ತು ಸೂರ್ಯಕಾಂತಿ ಎಣ್ಣೆಯು ಇಂತಹ ಓಝೊನೈಸಡ್ ತೈಲಗಳಲ್ಲಿ ಕೆಲವು. ಓಝೊನೈಸಡ್ ತೈಲಗಳು ಶಿಲೀಂಧ್ರ, ಯೀಸ್ಟ್ ಮತ್ತು ಬ್ಯಾಕ್ಟೀರಿಯಾ ಸೋಂಕಿನ ಮೇಲೆ ಪರಿಣಾಮಕಾರಿ ಆಗಿರುವುದು ಎಂದು ಹೇಳಲಾಗಿದೆ.
ಇದನ್ನು ಬಳಸುವುದು ಹೇಗೆ?
ದಿನಕ್ಕೆ ಎರಡು ಸಲ ಈ ಎಣ್ಣೆಯನ್ನು ನೀವು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ.



Click it and Unblock the Notifications
