ತ್ವಚೆಯ ಕಾಂತಿಯನ್ನು ಹೆಚ್ಚಿಸುವ 'ಉಪ್ಪಿನ ಸ್ಕ್ರಬ್‌' ಪ್ರಯತ್ನಿಸಿ ನೋಡಿ

ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವ ಮಾತಿದೆ. ಯಾವುದೇ ಖಾದ್ಯಕ್ಕಾದರೂ ಉಪ್ಪು ಹಾಕದೆ ಹೋದರೆ ಅದಕ್ಕೆ ರುಚಿಯೇ ಬರುವುದಿಲ್ಲ. ಉಪ್ಪು ಹೇಗೆ ಆಹಾರಕ್ಕೆ ರುಚಿ ನೀಡುವುದೋ ಅದೇ ರೀತಿಯಾಗಿ ಅದರಿಂದ ಹಲವಾರು ರೀತಿಯ ಆರೋಗ್ಯ ಹಾಗೂ ಸೌಂದರ್ಯ ಲಾಭಗಳು ಕೂಡ ಇವೆ.

ಉಪ್ಪಿನ ಸ್ಕ್ರಬ್ ಮಾಡುವ ಮೂಲಕವಾಗಿ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಿ, ತಾಜಾ ಹಾಗೂ ಯೌವನಯುತ ಚರ್ಮವನ್ನು ಮರಳಿ ಪಡೆದುಕೊಳ್ಳಬಹುದು. ಇದರಿಂದ ಚರ್ಮದ ಕಾಂತಿಯು ಹೆಚ್ಚಾಗುವುದು. ಮದುವೆಗೆ ಇನ್ನು ಕೆಲವೇ ದಿನಗಳು ಇದೆ ಎನ್ನುವಂತಹ ವಧು ಕೂಡ ಉಪ್ಪಿನ ಸ್ಕ್ರಬ್ ಮಾಡಿಸಬಹುದು. ಅದೇ ರೀತಿ ಬೇರೆಯವರು ತಮ್ಮ ಚರ್ಮದ ಕಾಂತಿ ಮರಳಿ ಪಡೆಯುವ ಸಲುವಾಗಿಯೂ ಇದನ್ನು ಮಾಡಿಸಿಕೊಂಡರೆ ಉತ್ತಮ.

ಇದು ಹೇಗೆ ಕೆಲಸ ಮಾಡುವುದು

ಇದು ಹೇಗೆ ಕೆಲಸ ಮಾಡುವುದು

ಉಪ್ಪಿನ ಸ್ಕ್ರಬ್ ನಿಂದಾಗಿ ಹಲವಾರು ಲಾಭಗಳು ಇವೆ. ಇದು ದೇದಹದಲ್ಲಿನ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಿ ಕಾಂತಿಯುತ ಹಾಗೂ ನಯವಾದ ಚರ್ಮ ನೀಡುವುದು ಮಾತ್ರವಲ್ಲದೆ, ಟಬ್ ನಲ್ಲಿ ಬಿಸಿ ನೀರಿಗೆ ಉಪ್ಪನ್ನು ಹಾಕಿ ಅದರಲ್ಲಿ ಸ್ನಾನ ಮಾಡಬೇಕು. ಇದರಿಂದ ಸ್ನಾಯುಗಳ ಒತ್ತಡ, ಮಾನಸಿಕ ಒತ್ತಡ ಮತ್ತು ಗಂಟು ನೋವನ್ನು ನಿವಾರಣೆ ಮಾಡುವುದು. ಇಸಬು ಅಥ್ಲೆಟಿಕ್ ಫುಟ್ ನಂತಹ ಗಂಭೀರ ಸಮಸ್ಯೆಯಿಂದಾಗಿ ಉಂಟಾಗಿರುವಂತಹ ಚರ್ಮದ ತುರಿಕೆ ಕಡಿಮೆ ಮಾಡಲು ಉಪ್ಪಿನ ಸ್ಕ್ರಬ್ ಬಳಸಿಕೊಳ್ಳಬಹುದು ಎಂದು ದ ನ್ಯಾಶನಲ್ ಸೊರಿಯಾಸಿಸ್ ಅಸೋಸಿಯೇಶನ್ ಕೂಡ ಹೇಳುತ್ತದೆ. ಉಪ್ಪಿನ ಸ್ಕ್ರಬ್ ವೇಳೆ ಮಾಡುವ ಮಸಾಜ್ ರಕ್ತ ಸಂಚಾರಕ್ಕೆ ತುಂಬಾ ನೆರವಾಗುವುದು ಮತ್ತು ಇದು ದೇಹದಲ್ಲಿರುವಂತಹ ವಿಷಕಾರಿ ಅಂಶವನ್ನು ಹೊರಹಾಕಿ, ಚರ್ಮವು ತಾಜಾವಾಗಿರುವಂತೆ ಮಾಡುವುದು.

ಇದು ಹೇಗೆ ಕೆಲಸ ಮಾಡುವುದು

ಇದು ಹೇಗೆ ಕೆಲಸ ಮಾಡುವುದು

ಕಲ್ಲುಪ್ಪನ್ನು ನೀವು ಬಳಸಿಕೊಂಡು ಒದ್ದೆ ಟವೆಲ್ ನಿಂದ ಪಾದಗಳು, ಗಂಟುಗಳು ಅಥವಾ ಮೊಣಕೈಗೆ ಸರಿಯಾಗಿ ಉಜ್ಜಿಕೊಳ್ಳಬಹುದು. ಈ ಭಾಗವನ್ನು ಇದರ ಬಳಿಕ ನೀವು ನೀರು ಹಾಕಿ ತೊಳೆಯಿರಿ. ಸಾಮಾನ್ಯವಾಗಿ ಇದನ್ನು ಬಳಸುವ ವಿಧಾನವೆಂದರೆ ಬಿಸಿ ನೀರಿನ ಟಬ್ ಗೆ ಉಪ್ಪನ್ನು ಹಾಕಿಕೊಳ್ಳಿ. ನೀರಿನೊಂದಿಗೆ ಉಪ್ಪು ಹಾಕಿದ ಕೂಡಲೇ ಅದರ ಪರಿಮಳ ಬರುವುದು. ಸರಿಯಾಗಿ ಕಲಸಿಕೊಂಡ ಬಳಿಕ ನೀವು ನೀರಿಗೆ ಇಳಿಯಿರಿ.

ನೀವು ಇದನ್ನು ಎಷ್ಟು ಸಲ ಬಳಸಿಕೊಳ್ಳಬೇಕು

ನೀವು ಇದನ್ನು ಎಷ್ಟು ಸಲ ಬಳಸಿಕೊಳ್ಳಬೇಕು

ಸಕ್ಕರೆ ಸ್ಕ್ರಬ್ ಗೆ ಹೋಲಿಕೆ ಮಾಡಿದರೆ ಉಪ್ಪಿನ ಸ್ಕ್ರಬ್ ನ್ನು ತುಂಬಾ ಕಡಿಮೆ ಬಳಸಿಕೊಳ್ಳಲಾಗುತ್ತದೆ. ಯಾಕೆಂದರೆ ಸೂಕ್ಷ್ಮ ಚರ್ಮದವರಿಗೆ ಇದರಿಂದಾಗಿ ಚರ್ಮದಲ್ಲಿ ಕಿರಿಕಿರಿ, ಕೆಂಪಾಗುವುದು ಮುಂತಾದ ಸಮಸ್ಯೆ ಕಾಣಿಸಿಕೊಳ್ಳುವುದು. ಹೆಚ್ಚಾಗಿ ವಾರದಲ್ಲಿ ಒಂದು ಸಲ ಉಪ್ಪಿನ ಸ್ಕ್ರಬ್ ನ್ನು ಬಳಸಿಕೊಳ್ಳಬೇಕು ಎಂದು ಜನರಿಗೆ ಸಲಹೆ ಮಾಡಲಾಗುತ್ತದೆ.

ಇದು ಎಲ್ಲಾ ವಿಧದ ಚರ್ಮಕ್ಕೆ ಸುರಕ್ಷಿತವೇ?

ಇದು ಎಲ್ಲಾ ವಿಧದ ಚರ್ಮಕ್ಕೆ ಸುರಕ್ಷಿತವೇ?

ಚರ್ಮಕ್ಕೆ ಎಲ್ಲಾ ರೀತಿಯ ಉಪ್ಪನ್ನು ಬಳಸಿಕೊಳ್ಳುವಂತಿಲ್ಲ. ನಿಮ್ಮ ಚರ್ಮಕ್ಕೆ ಯಾವ ರೀತಿಯ ಉಪ್ಪು ಸರಿಹೊಂದುವುದು ಎಂದು ತಿಳಿಯಿರಿ. ಹೆಚ್ಚಿನ ಎಲ್ಲಾ ಉಪ್ಪುಗಳು ಬಳಕೆಗೆ ಸುರಕ್ಷಿತವಾಗಿದೆ. ಆದರೆ ತುಂಬಾ ಸೂಕ್ಷ್ಮ ಚರ್ಮವಾಗಿದ್ದರೆ ಆಗ ನೀವು ಚರ್ಮತಜ್ಞರನ್ನು ಭೇಟಿ ಮಾಡಿ ಅವರಿಂದ ಸಲಹೆ ಪಡೆಯಿರಿ. ಉಪ್ಪು ಶುದ್ಧವಾಗಿರಬೇಕು ಮತ್ತು ಅದನ್ನು ಸಮುದ್ರದ ನೀರಿನಿಂದಲೇ ತಯಾರಿಸಿ ಇರಬೇಕು. ನೀವು ತುಂಬಾ ನಯವಾಗಿ ವೃತ್ತಾಕಾರದಲ್ಲಿ ಮಸಾಜ್ ಮಾಡಬೇಕು. ಪ್ರತಿಯೊಂದು ವಿಧದ ಚರ್ಮಕ್ಕೆ ಹೊಂದಾಣಿಕೆ ಆಗುವಂತಹ ಉಪ್ಪು, ಖನಿಜಾಂಶಗಳು ಮತ್ತು ತೈಲಗಳನ್ನು ತಯಾರಿಸಲಾಗುತ್ತದೆ. ಅದಾಗ್ಯೂ, ತುಂಬಾ ಸೂಕ್ಷ್ಮ ಚರ್ಮ ಇರುವಂತಹ ವ್ಯಕ್ತಿಗಳು ಸಮುದ್ರದ ಉಪ್ಪನ್ನು ಬಳಸಿಕೊಳ್ಳುವ ಮೊದಲು ಸರಿಯಾದ ಸಲಹೆ ಪಡೆದರೆ ತುಂಬಾ ಒಳ್ಳೆಯದು ಮತ್ತು ತಜ್ಞರ ಸಮ್ಮುಖದಲ್ಲಿ ಹೀಗೆ ಮಾಡಿ.

ಎಲ್ಲಾ ಕಾಲದಲ್ಲೂ ಬಳಸಬಹುದೇ?

ಎಲ್ಲಾ ಕಾಲದಲ್ಲೂ ಬಳಸಬಹುದೇ?

ಬೇಸಿಗೆ ಕಾಲವು ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಚರ್ಮಕ್ಕೆ ಸ್ಕ್ರಬ್ ನ್ನು ಬಳಸಿಕೊಳ್ಳುವುದು ಅತೀ ಅಗತ್ಯವಾಗಿರುವುದು. ಯಾಕೆಂದರೆ ಬೇಸಿಗೆ ಕಾಲದಲ್ಲಿ ಚರ್ಮದಲ್ಲಿ ಹೆಚ್ಚಿನ ಬ್ಯಾಕ್ಟೀರಿಯಾ ಸೇರಿಕೊಳ್ಳುವುದು. ಇದರಿಂದ ಉಪ್ಪಿನ ಸ್ಕ್ರಬ್ ಅಥವಾ ಲಿಂಬೆ, ತೆಂಗಿನೆಣ್ಣೆ, ಸಕ್ಕರೆ ಸ್ಕ್ರಬ್ ತುಂಬಾ ಒಳ್ಳೆಯದು. ಇದು ಸತ್ತ ಚರ್ಮವನ್ನು ಕಿತ್ತುಹಾಕಿ, ಚರ್ಮದ ಆರೋಗ್ಯ ಕಾಪಾಡುವುದು. ನೀವು ಉಪ್ಪಿನ ಹರಳುಗಳನ್ನು ಮುಖದ ಮೇಲೆ ಕೂಡ ಬಳಸಿಕೊಳ್ಳಬಹುದು. ಬೇಸಿಗೆ ಕಾಲದಲ್ಲಿ ನೀವು ಬೆಳಗ್ಗಿನ ಸಮಯದಲ್ಲಿ ಮಾಡಬೇಕಾಗಿರುವಂತಹ ಸ್ಕ್ರಬ್ ಗಳೆಂದರೆ ಅದು ಕಾಫಿ ಬೀಜದ ಸ್ಕ್ರಬ್ ಮತ್ತು ಗಿಡಮೂಲಿಕೆಯಾಗಿರುವ ಪುದೀನಾ, ಬ್ಲ್ಯಾಕ್ ಟೀ ಮತ್ತು ಉಪ್ಪಿನ ಸ್ಕ್ರಬ್. ನೀವು ಇದನ್ನು ವಾರಕ್ಕೆ ಒಂದು ಸಲ ಮಾತ್ರ ಮಾಡಿಕೊಳ್ಳಿ. ಯಾಕೆಂದರೆ ಅತಿಯಾಗಿ ಮಾಡಿದರೆ ಅದರಿಂದ ಉರಿಯೂತ ಮತ್ತು ದದ್ದುಗಳು ಕಾಣಿಸಿಕೊಳ್ಳಬಹುದು ಎಂದು ತಜ್ಞರಾಗಿರುವ ಲಲಿತ್ ಶಾ ಎಚ್ಚರಿಸಿದ್ದಾರೆ.

ಲ್ಯಾವೆಂಡರ್ ಉಪ್ಪಿನ ಸ್ಕ್ರಬ್

ಲ್ಯಾವೆಂಡರ್ ಉಪ್ಪಿನ ಸ್ಕ್ರಬ್

*ಒಂದು ಕಪ್ ಸಮುದ್ರ ಉಪ್ಪು ತೆಗೆದುಕೊಳ್ಳಿ.

*ಇದಕ್ಕೆ ½ ಕಪ್ ದ್ರಾಕ್ಷಿ ಬೀಜದ ಎಣ್ಣೆ ಅಥವಾ ತೆಂಗಿನೆಣ್ಣೆ ಸೇರಿಸಿಕೊಳ್ಳಿ. ಎಲ್ಲವನ್ನು ಸರಿಯಾಗಿ ಕಳಸಿಕೊಂಡು ಬದಿಗೆ ಇಟ್ಟುಬಿಡಿ.

*ಇದಕ್ಕೆ ಈಗ ಎರಡು ಚಮಚ ಒಣ ಲ್ಯಾವೆಂಡರ್ ನ್ನು ಹಾಕಿಕೊಳ್ಳಿ ಮತ್ತು 20 ಹನಿ ಲ್ಯಾವೆಂಡರ್ ಸಾರಭೂತ ಎಣ್ಣೆ ಹಾಕಿ.

*ಮಿಶ್ರಣ ಮಾಡಿಕೊಂಡು ಬಿಗಿಯಾದ ಮುಚ್ಚಳದ ಡಬ್ಬದಲ್ಲಿ ಹಾಕಿಡಿ. ನಿಮಗೆ ಬೇಕೆಂದಾಗ ಬಳಸಿಕೊಳ್ಳಿ.

English summary

How salt scrubs leave you with fresh, glowing skin

Here are the simple salt scrubs using salt that will not only deeply clean your skin but also will make your skin look brighter.
X
Desktop Bottom Promotion